ನನ್ನ ಬಾಂಧವರೇ ಕೇಳಿಸಿಕೊಳ್ಳಿ, ಯಾರ ಬಗ್ಗೂ ಕೆಟ್ಟದ್ದಾಗಿ ಮಾತಾಡ್ಬೇಡಿ: ಅರೆಸ್ಟ್​ ಬಳಿಕ ಮೌಲ್ವಿಯಿಂದ ಸಂದೇಶ

Published : Apr 01, 2026, 02:13 PM IST
Maulana Abdul Salim Chaturvedi

ಸಾರಾಂಶ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಹಾರ ಮೂಲದ ಮೌಲ್ವಿ ಅಬ್ದುಲ್ ಸಲೀಂ ಚತುರ್ವೇದಿಯನ್ನು ಯುಪಿ ಎಸ್‌ಟಿಎಫ್ ಬಂಧಿಸಿದೆ. ತನ್ನ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೂ, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಧಾನಿ, ಮುಖ್ಯಮಂತ್ರಿ ಎನ್ನೋದನ್ನೂ ನೋಡದೇ, ಭಾರತದಲ್ಲಿ ಏನು ಬೇಕಾದ್ರೂ, ಯಾರಿಗೆ ಬೇಕಾದ್ರೂ ಯಾವ ಪದವನ್ನಾದರೂ ಬಳಸುವ ಸ್ವಾತಂತ್ರ್ಯವಿದೆ ಎಂದುಕೊಂಡು ಅವರ ಬಗ್ಗೆ ಮಾತ್ರವಲ್ಲ, ಅವರ ಅಪ್ಪ-ಅಮ್ಮ, ಕುಟುಂಬದವರ ಬಗ್ಗೆ ಅತ್ಯಂತ ಅಶ್ಲೀಲವಾಗಿ ಮಾತನಾಡುವ ಕೆಲವು ವರ್ಗಗಳು ಈಚೆಗೆ ಹುಟ್ಟಿಕೊಂಡಿವೆ. ಸೋಷಿಯಲ್​ ಮೀಡಿಯಾಗಳಲ್ಲಿ ಇಂಥವರದ್ದೇ ದರಬಾರು. ಆದರೆ, ಗ್ರಹಚಾರ ಕೆಟ್ಟರೆ ಅಷ್ಟೇ ಕಥೆ ಎನ್ನೋದಕ್ಕೆ ಸಾಕ್ಷಿಯಾಗಿದ್ದಾನೆ ಈ ಮೌಲ್ವಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಯಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಹಾರ ಮೂಲದ ಮೌಲ್ವಿ ಮೌಲಾನಾ ಅಬ್ದುಲ್ ಸಲೀಂ ಚತುರ್ವೇದಿಯನ್ನು ಅರೆಸ್ಟ್​ ಮಾಡಿದ ಬಳಿಕ ಈಗ ಕನಸಿನಲ್ಲಿಯೂ ಯಾರ ಅಮ್ಮನ ಬಗ್ಗೆ ಮಾತನಾಡದ ಸ್ಥಿತಿ ತಲುಪಿದ್ದಾನೆ ಈ ಮೌಲ್ವಿ!

STF ಅಧಿಕಾರಿಗಳಿಂದ ಬಂಧನ

ಉತ್ತರಪ್ರದೇಶದ STF ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ. ಈ ಮೌಲ್ವಿಯನ್ನು ಕೋರ್ಟ್​ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಿಸಲಾಗಿದೆ. ಅರೆಸ್ಟ್​ ಮಾಡುವ ಮುಂಚೆ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾನು ಮಾತಿನ ಭರದಲ್ಲಿ ಏನೋ ಹೇಳಿಬಿಟ್ಟೆ. ಕ್ಷಮಿಸಿ ಬಿಡಿ. ನಾನು ಆ ರೀತಿ ಹೇಳಿದ್ದು ತಪ್ಪಾಯ್ತು, ಇನ್ನು ಮುಂದೆ ಯಾರ ಬಗ್ಗೆಯೂ ಇಂಥ ಅಶ್ಲೀಲ ಹೇಳಿಕೆ ನೀಡಲ್ಲ ಎಂದು ಸಾರ್ವಜನಿಕರ ಮುಂದೆ ಕ್ಷಮೆ ಕೋರಿದ್ದಾರೆ. ಬಳಿಕ ಈತನನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ನಾನು ವಿಶೇಷವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಕ್ಷಮೆಯಾಚಿಸುತ್ತೇನೆ. ನಾನು ಅವರಿಗೆ ನೋವುಂಟು ಮಾಡಿದ್ದರೆ ನನ್ನನ್ನು ಕ್ಷಮಿಸುವಂತೆ ವಿನಂತಿಸುತ್ತೇನೆ ಎಂದು ಮೌಲಾನಾ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋ ಮೌಲಾನಾ ಅಬ್ದುಲ್ ಸಲೀಂ ಅವರದ್ದು ಎಂದು ಪೊಲೀಸ್ ಠಾಣಾಧಿಕಾರಿ ದೃಢಪಡಿಸಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಮೌಲಾನಾ ಅವರ ಭಾಷಣ ವೈರಲ್ ಆದ ನಂತರ, ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿತ್ತು.

ವಿವಾದಾತ್ಮಕ ಭಾಷಣ

ಮೌಲಾನಾ ಅಬ್ದುಲ್ ಸಲೀಂ ಖಾಸ್ಮಿ ಅವರ ವಿವಾದಾತ್ಮಕ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಅವರ ತಾಯಿಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಾರ್ಚ್ 8ರಂದು ವಿಶ್ವ ಹಿಂದೂ ಪರಿಷತ್‌ನ ವಕೀಲ ಅಜಿತ್ ಪ್ರತಾಪ್ ಸಿಂಗ್ ಕೊಟ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ಪ್ರದೇಶ ಎಸ್‌ಟಿಎಫ್ ಬಿಹಾರದ ಪೂರ್ಣಿಯಾದಿಂದ ಬಂಧಿಸಿ ತಡರಾತ್ರಿ ಬಹ್ರೈಚ್‌ಗೆ ಕರೆತಂದಿತು. ವಿಚಾರಣೆಯ ನಂತರ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಅಗತ್ಯ ಕಾನೂನು ಕ್ರಮಗಳ ನಂತರ ಅವರನ್ನು ಜೈಲಿಗೆ ಕಳುಹಿಸಲಾಯಿತು. ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಆರೋಪಿ ಮೌಲಾನಾ ಕೊಟ್ವಾಲಿ ನಗರದ ಪೊಲೀಸರಿಗೆ ತನ್ನ ಅಪರಾಧವನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದನು ಎಂದು ಪೊಲೀಸರು ಹೇಳಿದರು.

ಅಪರಾಧ ಒಪ್ಪಿಕೊಳ್ತೇನೆ

ವಿಡಿಯೋದಲ್ಲಿ ಮೌಲಾನಾ, ನಾನು ನನ್ನ ಅಪರಾಧವನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳುವುದನ್ನು ನೋಡಬಹುದು. 2024ರ ಮೇ 5ರಂದು ಬಿಹಾರದ ಭಾಗಲ್ಪುರ ಜಿಲ್ಲೆಯ ಕೊಳೆಗೇರಿಯಲ್ಲಿ ನಡೆದ ಶೈಕ್ಷಣಿಕ ಜಾಗೃತಿ ಸಮಾವೇಶದಲ್ಲಿ ನನ್ನ ಭಾಷಣದ ಸಮಯದಲ್ಲಿ ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯ ತಾಯಿಯ ಬಗ್ಗೆ ಕೆಲವು ಅಸಭ್ಯ ಪದಗಳನ್ನು ಹೇಳಿದ್ದೆ, ಅದನ್ನು ಹೇಳಬಾರದಿತ್ತು. ನನ್ನ ತಪ್ಪನ್ನು ನಾನು ಸಂಪೂರ್ಣವಾಗಿ ಅರಿತುಕೊಂಡಿದ್ದೇನೆ. ನನ್ನ ಹೃದಯದ ಒಳಗಿನಿಂದ ಕ್ಷಮೆಯಾಚಿಸುತ್ತೇನೆ. ಭವಿಷ್ಯದಲ್ಲಿ ಅಂತಹ ತಪ್ಪು ಸಂಭವಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನನ್ನ ಎಲ್ಲಾ ಸಹೋದ್ಯೋಗಿಗಳು ಮತ್ತು ದೇಶವಾಸಿಗಳಿಗೆ ನಾನು ಸಂದೇಶವನ್ನು ಕಳುಹಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking & Shocking.. ಲೈಂಗಿ*ಕ ದೌರ್ಜನ್ಯ ಆರೋಪ, ಮಲಯಾಳಂ ನಿರ್ದೇಶಕ ರಂಜಿತ್‌ ಬಂಧನ; ಅರೆಸ್ಟ್‌ ಆಗಿದ್ದು ಎಲ್ಲಿ, ಹೇಗೆ?
ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿ: ದೇಶದೆಲ್ಲೆಡೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ