
ಪಾಟ್ನಾ (ಏ.26): ಒಬ್ಬ ವ್ಯಕ್ತಿ ಹೆಚ್ಚೆಂದರೆ ಎಷ್ಟು ಮಂದಿ ಪತ್ನಿಯರನ್ನು ಹೊಂದಿರಲು ಸಾಧ್ಯ? 5, 10 ಹೆಚ್ಚೆಂದರೆ 15? ಆದರೆ, ಬಿಹಾರದಲ್ಲಿ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಗೊತ್ತಾಗಿರುವ ವಿಷಯ ಹೇಳಿದರೆ ನೀವು ಹೌಹಾರೋದು ಖಂಡಿತ. ಹೌದು, ಬಿಹಾರದಲ್ಲಿ ಜಾತಿ ಗಣತಿ ಜೋರಾಗಿ ನಡೆಯುತ್ತಿದ್ದು, ರೂಪ್‌ಚಂದ್ ಹೆಸರಿನ ವ್ಯಕ್ತಿ ಬರೋಬ್ಬರಿ 40 ಮಹಿಳೆಯರ ಗಂಡ ಎಂದು ನಮೂದಿಸಲಾಗಿದೆ. ಇದು ಇಡೀ ಬಿಹಾರದಲ್ಲಿ ಚರ್ಚೆಯ ವಿಚಾರವಾಗಿದೆ. ಬಿಹಾರದ ಅರ್ವಾಲ್ ಜಿಲ್ಲೆಯ ರೆಡ್‌ಲೈಟ್ ಪ್ರದೇಶದಲ್ಲಿ ಜಾತಿ ಗಣತಿ ನಡೆಯುತ್ತಿರುವ ಸಮಯದಲ್ಲಿ ಬರೋಬ್ಬರಿ 40 ಮಹಿಳೆಯರು ರೂಪ್‌ಚಂದ್ ಹೆಸರಿನ ವ್ಯಕ್ತಿ ತಮ್ಮ ಗಂಡ ಎಂದು ಹೇಳಿದ್ದಾರೆ. ಜನಗಣತಿ ಅಧಿಕಾರಿಗಳು ಮಹಿಳೆಯರ ಮಕ್ಕಳನ್ನು ಕೇಳಿದಾಗ, ಅವರು ರೂಪಚಂದ್ ಹೆಸರನ್ನು ತಂದೆಯ ಹೆಸರಾಗಿ ಬರೆದಿದ್ದಾರೆ. ವರದಿಗಳ ಪ್ರಕಾರ, ವಾರ್ಡ್ ಸಂಖ್ಯೆ 7 ರ ರೆಡ್ ಲೈಟ್ ಏರಿಯಾದಲ್ಲಿ ವಾಸಿಸುವ ಜನರು ತಮ್ಮ ಜೀವನೋಪಾಯಕ್ಕಾಗಿ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ ಮತ್ತು ಅವರಿಗೆ ಯಾವುದೇ ಸ್ಥಿರ ವಿಳಾಸವಿಲ್ಲ. ಆದ್ದರಿಂದ, ಈ ಮಹಿಳೆಯರು ತಮ್ಮ ಪತಿಯ ಹೆಸರನ್ನು ರೂಪಚಂದ್ ಎಂದು ಹೇಳಿಕೊಂಡಿದ್ದು, ಈ ಘಟನೆ ಸುತ್ತಮುತ್ತಲ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಿತೀಶ್ ಕುಮಾರ್ ಸರ್ಕಾರವು ಜನವರಿ 7 ರಂದು ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಪ್ರಾರಂಭಿಸಿತು. ಎಣಿಕೆ ಯೋಜನೆಗೆ 500 ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ. ಬಿಹಾರ ಸರ್ಕಾರ ಎರಡು ಹಂತಗಳಲ್ಲಿ ಈ ಪ್ರಕ್ರಿಯೆ ನಡೆಸುತ್ತಿದೆ. ಮೊದಲ ಹಂತದಲ್ಲಿ, ಎಲ್ಲಾ ಮನೆಗಳ ಸಂಖ್ಯೆಯನ್ನು ಎಣಿಕೆ ಮಾಡಬೇಕಾಗಿತ್ತು. ಎರಡನೇ ಹಂತದಲ್ಲಿ ಎಲ್ಲ ಜಾತಿ, ಉಪಜಾತಿ ಮತ್ತು ಧರ್ಮದ ಜನರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಬೇಕಿತ್ತು. ಗಣತಿದಾರರು ಡಿಸೆಂಬರ್ 15 ರಂದು ತರಬೇತಿಯನ್ನು ಪ್ರಾರಂಭಿಸಿದ್ದು, ಎಲ್ಲಾ ಜನರ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿಯನ್ನು ದಾಖಲು ಮಾಡಲಿದ್ದಾರೆ.
ಜಾತಿ ಗಣತಿ ಮಾಡುತ್ತಿರುವ ಅಧಿಕಾರಿ ರಾಜೀವ್ ರಂಜನ್ ಶುಕ್ಲಾ ಕೂಡ ಈ ಬಗ್ಗೆ ಮಾತನಾಡಿದ್ದು, ರೂಪ್‌ಚಂದ್ ಯಾರು ಅನ್ನೋದು ಈವರೆಗೂ ಯಾರಿಗೂ ತಿಳಿದಿಲ್ಲ. ಸರ್ಕಾರಿ ದಾಖಲೆಗಳಿಗೆ ಮಾತ್ರವೇ ಅವರು ಪತಿಯ ಹೆಸರನ್ನು ರೂಪ್‌ಚಂದ್ ಎಂದು ನೀಡಿರುತ್ತಾರೆ. ಜಾತಿ ಗಣತಿಯ ವೇಳೆ ಅಂದಾಜು 40ಕ್ಕೂ ಅಧಿಕ ಮಹಿಳೆಯರು ರೂಪ್‌ಚಂದ್ ಎನ್ನುವವನೇ ತಮ್ಮ ಪತಿ ಎಂದಿರುವಾಗ, ಅಧಿಕಾರಿಗಳು ಕುಡ ಈ ರೂಪ್ ಚಂದ್ ಯಾರು ಎನ್ನುವ ಕುತೂಹಲಕ್ಕೆ ಬಿದ್ದಿದ್ದಾರೆ.
ಹಿಜಾಬ್‌ಗಿಂತ ಶಿಕ್ಷಣವೇ ಅಗತ್ಯ ಅರಿತ ತಬಸ್ಸುಮ್ ಶೇಖ್ ಇಂದು ರಾಜ್ಯಕ್ಕೆ ಟಾಪರ್!
ಇನ್ನೂ ಕೆಲವು ಮಾಧ್ಯಮಗಳು ಈ ರೂಪ್‌ಚಂದ್ ಯಾರು ಎನ್ನುವ ಕುತೂಹಲವನ್ನು ತಿಳಿಯಲು ಪ್ರಯತ್ನಿಸಿದಾಗ ಹೆಚ್ಚಿವರು, ರೂಪ್‌ಚಂದ್ ಎನ್ನುವುದು ಯಾವುದೇ ವ್ಯಕ್ತಿಯಲ್ಲ. ತಮ್ಮ ಜೀವನದಲ್ಲಿ ಅತ್ಯಂತ ಅಮೂಲ್ಯವಾದ ವಿಚಾರ ಏನಾದರೂ ಇದ್ದರೆ ಅದು ರೂಪಾಯಿ ಮಾತ್ರ. ಆದ ಕಾರಣಕ್ಕೆ ತಮ್ಮ ಗಂಡನ ಹೆಸರನ್ನು ರೂಪ್‌ಚಂದ್ ಆಗಿ ಇರಿಸಿಕೊಂಡಿದ್ದೇವೆ ಎಂದು ಇದೇ ಮಹಿಳೆಯರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯ ಅಚ್ಚರಿಯ ಭೇಟಿ, 'ಫೈಲ್ ಪೆಂಡಿಂಗ್' ಇರಿಸಿದ್ದ ಕಂದಾಯ ಅಧಿಕಾರಿಗೆ ಅಮಾನತು ಶಿಕ್ಷೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ