'ಸಿಬಿಐ ಬರದಿದ್ದರೆ ನನ್ನ ಎನ್‌ಕೌಂಟರ್ ಆಗುತ್ತಿತ್ತು! ಉತ್ತರಪ್ರದೇಶ ಪೊಲೀಸರ ವಿರುದ್ಧ ರಾಜ್ ಸಿಂಗ್ ಶಾಕಿಂಗ್ ಹೇಳಿಕೆ

Published : May 22, 2026, 10:00 AM IST
Big Twist in CBI Probe Innocent Raj Singh Released After Misidentification Arrest

ಸಾರಾಂಶ

ಪಶ್ಚಿಮ ಬಂಗಾಳದ ಹತ್ಯಾ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಜ್ ಕುಮಾರ್ ಸಿಂಗ್ ಎಂಬ ವ್ಯಕ್ತಿಯನ್ನು ತಪ್ಪಾಗಿ ಬಂಧಿಸಲಾಯಿತು. ಪೊಲೀಸರಿಂದ ಎನ್‌ಕೌಂಟರ್ ಬೆದರಿಕೆ ಮತ್ತು ಚಿತ್ರಹಿಂಸೆ ಅನುಭವಿಸಿದ ನಂತರ, ಸಿಬಿಐ ತನಿಖೆಯಿಂದ ಅವರು ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾದರು.

ಪಶ್ಚಿಮ ಬಂಗಾಳ (ಮೇ.22): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ (ಪಿಎ) ಚಂದ್ರಕಾಂತ್ ರಥ ಹತ್ಯೆಯ ತನಿಖೆ ನಡೆಸುತ್ತಿದ್ದಾಗ , ಸಿಬಿಐ ಉತ್ತರ ಪ್ರದೇಶದ ಬಲ್ಲಿಯಾದಿಂದ ರಾಜ್ ಕುಮಾರ್ ಸಿಂಗ್ ಎಂಬ ವ್ಯಕ್ತಿಯನ್ನು ಬಂಧಿಸಿತು. ಈ ವ್ಯಕ್ತಿ ಚಂದ್ರಕಾಂತ್ ರಥ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ನಂಬಿದ್ದರು. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಆರೋಪಿಯನ್ನು ಹುಡುಕುತ್ತಿದ್ದ ರಾಜ್ ಕುಮಾರ್ ಸಿಂಗ್ ಸಿಕ್ಕಿದ್ದಾನೆ. ಆದರೆ ವಶಕ್ಕೆ ಪಡೆದು ವಿಚಾರಣೆ ವೇಳೆ ನಿಜವಾದ ಆರೋಪಿ ಇವನಲ್ಲ. ಅವನೂ ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯಾಗಿದ್ದು, ಇವನು ನಿರಪರಾಧಿ ಎಂದು ಗೊತ್ತಾಗಿ ತನಿಖೆಯ ನಂತರ, ಸಿಬಿಐ ರಾಜ್ ಸಿಂಗ್‌ನ ಬಿಡುಗಡೆ ಮಾಡಿತು.

ನನ್ನನ್ನು ತಪ್ಪಾಗಿ ಬಂಧಿಸಲಾಗಿದೆ

ಈಗ ರಾಜ್ ಸಿಂಗ್ ಹೇಳುವಂತೆ, 'ನನ್ನನ್ನು ತಪ್ಪಾಗಿ ಬಂಧಿಸಲಾಗಿದೆ. ಮತ್ತೊಬ್ಬ ರಾಜ್ ಕುಮಾರ್ ಸಿಂಗ್ ಅವರನ್ನು ಬಂಧಿಸುವ ಬದಲು, ನನ್ನನ್ನು ಬಂಧಿಸಲಾಯಿತು. ನಾನು ನನ್ನ ತಾಯಿಯೊಂದಿಗೆ ದರ್ಶನಕ್ಕಾಗಿ ಅಯೋಧ್ಯೆಗೆ ಹೋಗಿದ್ದೆ. ನಾನು ಮನೆಗೆ ಹಿಂದಿರುಗಿದಾಗ, ಅಲ್ಲಿ ಒಂದು ಪೊಲೀಸ್ ತಂಡವಿತ್ತು ಮತ್ತು ನನ್ನನ್ನು ಬಂಧಿಸಿತು. ಅವರು ಏನನ್ನೂ ಕೇಳಲಿಲ್ಲ ಅಥವಾ ಪುರಾವೆಗಳನ್ನು ಕೇಳಲಿಲ್ಲ'

ಎನ್‌ಕೌಂಟರ್‌ಗೆ ಬೆದರಿಕೆ ಹಾಕಿದ್ರಾ ಪೊಲೀಸರು

ಅದರಲ್ಲೂ ಉತ್ತರ ಪ್ರದೇಶ ಪೊಲೀಸರು ಇಂಥ ವಿಚಾರಗಳಲ್ಲಿ ಎನ್‌ಕೌಂಟರ್‌ ಮಾಡುವುದು ಹೆಚ್ಚಾಗಿದೆ. ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿಯ ಪಿಎ ಹತ್ಯೆ ಆರೋಪಿ ಎಂದರೆ ಸುಮ್ಮನೆ ಬಿಡುತ್ತಾರೆಯೇ? ರಾಜ್ ಸಿಂಗ್ ಹೇಳುವಂತೆ, ಪೊಲೀಸರು ನನಗೆ ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಿ ತಪ್ಪೊಪ್ಪಿಗೆ ನೀಡುವಂತೆ ಒತ್ತಾಯಿಸಿದರು ಎಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಬಂಧಿಸಿದ ಬಳಿಕ ಕೋಲ್ಕತ್ತಾಗೆ ಕರೆದೊಯ್ಯಲಾಯಿತು, ಅಲ್ಲಿ ಸಿಐಡಿ ಚಿತ್ರಹಿಂಸೆ ನೀಡಿ ತಾನು ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು. ತನಿಖಾ ಸಂಸ್ಥೆಯ ಏಕೈಕ ಉದ್ದೇಶವೆಂದರೆ ತಾನು ತಪ್ಪಿತಸ್ಥನೆಂದು ಸಾಬೀತುಪಡಿಸುವುದು ಎಂದು ರಾಜ್ ಸಿಂಗ್ ಆತಂಕದಿಂದ ನಡೆದ ಘಟನೆ ಹೇಳಿಕೊಂಡಿದ್ದಾರೆ.

ಸಿಬಿಐ ತನಿಖೆಯಲ್ಲಿ ಸತ್ಯ ಬಯಲು

ಇದಾದ ನಂತರ, ಸಿಬಿಐ ತನಿಖೆ ಮುಂದುವರೆಯಿತು. ಅಂತಿಮವಾಗಿ ರಾಜ್ ಸಿಂಗ್ ನಿರಪರಾಧಿ ಎಂದು ಸಾರ್ವಜನಿಕರಿಗೆ ಸಾಬೀತಾಯಿತು. ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದ್ದಕ್ಕಾಗಿ ರಾಜ್ ಸಿಂಗ್ ಸಿಬಿಐಗೆ ಧನ್ಯವಾದ ಅರ್ಪಿಸಿದರು.

ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ:ಸಿಎಂ ಯೋಗಿಗೆ ಮನವಿ

ಈಗ, ಅಮಾಯಕ ರಾಜ್ ಸಿಂಗ್ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ . ತನ್ನ ತಂದೆ ಮತ್ತು ತಾನು ಇಬ್ಬರೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಸಂಬಂಧ ಹೊಂದಿದ್ದೇವೆ ಎಂದು ರಾಜ್ ವಿವರಿಸಿದರು. ಅವರು ಕ್ಷತ್ರಿಯ ಮಹಾಸಭಾದ ಸದಸ್ಯರಾಗಿದ್ದರು, ಆದರೆ ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ತನ್ನ ವಿರುದ್ಧ ಯಾವುದೇ ಪ್ರಕರಣವಿಲ್ಲದಿದ್ದರೂ, ಪ್ರತಿ ರಾತ್ರಿ ತನ್ನನ್ನು ಎತ್ತಿಕೊಂಡು, ಬೀದಿಗೆ ಎಳೆದುಕೊಂಡು ಹೋಗಿ, ಎನ್‌ಕೌಂಟರ್‌ನಲ್ಲಿ ಕೊಲ್ಲಬಹುದೆಂದು ಭಯವಾಗುತ್ತಿತ್ತು. ಪೊಲೀಸರಿಗೆ ಯಾರು ಹೆದರುವುದಿಲ್ಲ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದ ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯ
ಗೋವಧೆ ಈದ್‌ ಆಚರಣೆ ಅಥವಾ ಇಸ್ಲಾಂನ ಭಾಗವಲ್ಲ: ಕಲ್ಕತ್ತಾ ಹೈಕೋರ್ಟ್‌ ಆದೇಶ