ಕಂಗಾಲಾದ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಾರ್ಟಿಗೆ 13 ಕೌನ್ಸಿಲರ್ ರಾಜೀನಾಮೆ

Published : May 17, 2025, 05:58 PM IST
ಕಂಗಾಲಾದ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಾರ್ಟಿಗೆ 13 ಕೌನ್ಸಿಲರ್ ರಾಜೀನಾಮೆ

ಸಾರಾಂಶ

ಸೋತು ಸುಣ್ಣವಾಗಿರುವ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಆಪ್ ಪಕ್ಷದ 13 ಕೌನ್ಸಿಲರ್ಸ್ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಇಷ್ಟೇ ಅಲ್ಲ ರಾಜೀನಾಮೆ ನೀಡಿದ ನಾಯಕರು ಹೊಸ ಪಕ್ಷ ಘೋಷಿಸಿದ್ದಾರೆ.  

ನವದೆಹಲಿ(ಮೇ.17) ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ದೆಹಲಿಯಲ್ಲಿ ಅಧಿಕಾರ ನಷ್ಟವಾದ ಬಳಿಕ ಅರವಿಂದ್ ಕೇಜ್ರಿವಾಲ್‌ಗೆ ಸತತ ತಲೆನೋವು ಎದುರಾಗುತ್ತಿದೆ. ಒಂದೆಡೆ ಹಗರಣಗಳ ಆರೋಪ, ತನಿಖೆಯಾದರೆ ಮತ್ತೊಂದೆಡೆ ಪಾರ್ಟಿಯನ್ನು ಮುನ್ನಡೆಸುವುದು, ಇತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸವಾಲಾಗುತ್ತಿದೆ. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಾರ್ಟಿಯ 15 ಕೌನ್ಸಿಲರ್ಸ್ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಇದು ಆಪ್ ಪಾರ್ಟಿಗೆ ತೀವ್ರ ಹೊಡೆತ ನೀಡಿದೆ.  ಕೌನ್ಸಿಲರ್ಸ್ ನಿರ್ಧಾರದಿಂದ ಅರವಿಂದ್ ಕೇಜ್ರಿವಾಲ್ ಕಂಗಾಲಾಗಿದ್ದಾರೆ.

MCD ಕೌನ್ಸಿಲರ್ಸ್ ರಾಜೀನಾಮೆಯಿಂದ ಕೋಲಾಹಲ
ಮುನ್ಸಿಪಲ್ ಕಾರ್ಪೋರೇಶನ್ ಡೆಲ್ಲಿಯಲ್ಲಿ(MCD) ಬಿರುಗಾಳಿ ಎದ್ದಿದೆ.  ದೆಹಲಿ ಸರ್ಕಾರ ಇದೀಗ ಬಿಜೆಪಿ ಪಾಲಾಗಿದ್ದರೆ, ದೆಹಲಿಯಲ ಮುನ್ಸಿಪಲ್ ಕಾರ್ಪೋರೇಶನ್ ಈಗಲೂ ಆಮ್ ಆದ್ಮಿ ಪಾರ್ಟಿ ಕೈಯಲ್ಲಿದೆ. ಆದರೆ ಆಪ್ ರಾಜಕೀಯ, ನಾಯಕರ ನಿರ್ಧಾರ, ಧೋರಣೆಗಳಿಂದ MCD ಕೌನ್ಸಿಲರ್ಸ್ ಬೇಸತ್ತು ಹೋಗಿದ್ದಾರೆ. ಇದರಿಂದ 13 ಆಪ್ ಕೌನ್ಸಿಲರ್ಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಜನರ ವಿಶ್ವಾಸ ಕಳೆದುಕೊಂಡಿದೆ ಆಪ್
ರಾಜೀನಾಮೆ ನೀಡಿ ಹೊರ ಬಂದ 13 ಕೌನ್ಸಿಲರ್ಸ್ ಇದೀಗ ಆಪ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. 2022ರಲ್ಲಿ ದೆಹಲಿ ಕಾರ್ಪೋರೇಶನ್ ಅಧಿಕಾರ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಾರ್ಟಿ ಆಡಳಿತವನ್ನು ಪಾರದರ್ಸಕವಾಗಿ ನಡೆಸಲು ವಿಫಲವಾಗಿದೆ. ಜನರ ವಿಶ್ವಾಸ ಕಳೆದುಕೊಂಡಿದೆ. ಅಸಮರ್ಪಕ ಆಡಳಿತ, ಪಾರ್ಟಿ ನಾಯಕರು ಹಾಗೂ ಜನಪ್ರಿತಿನಿಧಿಗಳ ನಡುವಿನ ಸಂವಹನ ಕಡಿಮೆಯಾಗಿದೆ. ಪಾರ್ಟಿ ನಾಯಕರು ತೀರ್ಮಾನ, ಜನಪ್ರತಿನಿದಿಗಳಿಗೆ ತಿಳಿಯುತ್ತಿಲ್ಲ. ಆಪ್ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗುತ್ತಿದೆ ಎಂದು ರಾಜೀನಾಮೆ ನೀಡಿದ ನಾಯಕರ ಆರೋಪಿಸಿದ್ದಾರೆ.

ಇಂದ್ರಪ್ರಸ್ಥ ವಿಕಾಸ್ ಪಾರ್ಟಿ ಸ್ಥಾಪನೆ
ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಇದೀಗ ರಂಗೇರಿದೆ. ಕಾರಣ ಆಮ್ ಆದ್ಮಿ ಪಾರ್ಟಿಯಿಂದ ರಾಜೀನಾಮ ನೀಡಿದ ಹೊರಬಂದ 13 ಕೌನ್ಸಿಲರ್ಸ್ ಇದೀಗ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಇಂದ್ರಪ್ರಸ್ಥ ವಿಕಾಸ್ ಪಾರ್ಟಿ ಹೆಸರಿನಲ್ಲಿ ಪಕ್ಷ ಘೋಷಿಸಿದ್ದಾರೆ. ರಾಜೀನಾಮೆ ನೀಡಿ ಹೊರಬಂದ ಆಪ್ ನಾಯಕ ಮುಕೇಶ್ ಗೋಯೆಲ್ ನೇತೃತ್ವದಲ್ಲಿ ಹೊಸ ಪಕ್ಷ ಸ್ಥಾಪನೆಯಾಗಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಇಂದ್ರಪಸ್ಥ ವಿಕಾಸ್ ಪಾರ್ಟಿ ಸ್ಪರ್ಧಿಸಲಿದೆ ಎಂದಿದೆ. ಈ ಮೂಲಕ ಆಮ್ ಆದ್ಮಿ ಪಾರ್ಟಿಯಿಂದ ಆಡಳಿತ ಕಸಿದುಕೊಳ್ಳಲಿದೆ ಎಂದಿದೆ.

ಆಮ್ ಆದ್ಮಿ ಪಾರ್ಟಿಗೆ ರಾಜೀನಾಮೆ ನೀಡಿಗ 13 ಕೌನ್ಸಿಲರ್ಸ್
ದಿನೇಶ್ ಕುಮಾರ್, ಹಿಮಾನಿ ಜೈನ್, ರುನಾಕ್ಷಿ ಶರ್ಮಾ, ಉಶಾ ಶರ್ಮಾ, ಅಶೋಕ್ ಪನ್ವಾರ್, ರಾಖಿ ಯಾದವ್, ಸಾಹಿಬ್ ಕುಮಾರ್, ರಾಜೇಶ್ ಕುಮಾರ್ ಲಾಡಿ, ಮನೀಶ್ ಕಾಲ್ರಾ, ಸುಮಾನಿ ಅನಿಲ್, ಅಶೋಕ್ ಕುಮಾರ್ ಪಾಂಡೆ, ಮುಕೇಶ್ ಗೋಯೆಲ್, ದೇವೇಂದ್ರ ಕಮಾರ್, ಹಿಮಚಂದ್ ಗೊಯೆಲ್, ರಾನಿ ಖೇಡಾ 

ಅರವಿಂದ್ ಕೇಜ್ರಿವಾಲ್ ಈಗಾಲೇ ತಮ್ಮದೆ ಸಮಸ್ಯೆಯಲ್ಲಿ ಮುಳುಗಿದ್ದಾರೆ. ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಪಾರ್ಟಿ ಸಂಘಟನೆ ಮಾಡುವ ಬದಲು ಆರೋಪಗಳಿಂದ, ಪ್ರಕರಣಗಳಿಂದ ಮುಕ್ತವಾಗಲು ಪ್ರಯತ್ನಿಸುತ್ತಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..