ಛಾವಣಿಯಿಂದ ಕೆಳಗೆ ಬಿದ್ದಾತನ ಕತ್ತು ಸೀಳಿ ಬಾಯಿಯಿಂದ ಹೊರಬಂದ ರಾಡ್‌, 2 ತಾಸಿನಲ್ಲಿ ನಡೆಯಿತು ಚಮತ್ಕಾರ!

By Suvarna NewsFirst Published Jul 19, 2022, 8:45 AM IST
Highlights

ಈ ಶಾಕಿಂಗ್ ಫೋಟೋ ಮಧ್ಯಪ್ರದೇಶದ ರೈಸನ್ ಜಿಲ್ಲೆಯದ್ದು. ಇಲ್ಲಿ ನಿಯಂತ್ರಣ ತಪ್ಪಿ 30 ವರ್ಷದ ಯುವಕನೊಬ್ಬ ಛಾವಣಿಯಿಂದ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದಾಗ ಅಲ್ಲಿದ್ದ ಕಬ್ಬಿಣದ ಸರಳು ಆತನ ಕುತ್ತಿಗೆಗೆ ಚುಚ್ಚಿ ಬಾಯಿ ಮೂಲಕ ಹಾದು ಹೋಗಿದೆ. 

ಭೋಪಾಲ್(ಜು.19): ಮನುಷ್ಯನ ಆಯುಷ್ಯ ಗಟ್ಟಿಯಾಗಿದ್ದರೆ ಅದೆಷ್ಟೇ ದೊಡ್ಡ ದುರಂತವಾದರೂ ಬದುಕುಳಿಯುತ್ತಾನೆ ಎಂಬ ಮಾತಿದೆ. ಸದ್ಯ ಭೋಪಾಲ್‌ನಲ್ಲಿ ನಡೆದ ಶಾಕಿಂಗ್ ಘಟನೆ ಇದಕ್ಕೆ ತಕ್ಕ ಉದಾಹರಣೆಯಂತಿದೆ. ವ್ಯಕ್ತಿಯೊಬ್ಬ ಇಂದು ಪವಾಡವೆಂಬಂತೆ ಬದುಕುಳಿದಿದ್ದಾನೆ. ಆತ ಮರುಜೀವ ಪಡೆಯುವಲ್ಲಿ ವೈದ್ಯರ ಶ್ರಮವೂ ಇದೆ. ಸದ್ಯ ಆತ ಬದುಕುಳಿದಿರುವುದು ಪವಾಡವೇ ಸರಿ. ಈ ಹೃದಯ ವಿದ್ರಾವಕ ಚಿತ್ರ ಮಧ್ಯಪ್ರದೇಶದ ರೈಸನ್ ಜಿಲ್ಲೆಯದ್ದು. ಇಲ್ಲಿ ನಿಯಂತ್ರಣ ತಪ್ಪಿ 30 ವರ್ಷದ ವ್ಯಕ್ತಿಯೊಬ್ಬರು ಛಾವಣಿಯಿಂದ ಕೆಳಗೆ ಬಿದ್ದಿದ್ದರು. ಕೆಳಗೆ ಬಿದ್ದಾಗ ಅಲ್ಲಿದ್ದ ಕಬ್ಬಿಣದ ಸಲಾಕೆ ಅವರ ಕುತ್ತಿಗೆಗೆ ಚುಚ್ಚಿ ಬಾಯಿ ಮೂಲಕ ಹೊರ ಬಂದಿದೆದೆ. ಅದೃಷ್ಟವಶಾತ್ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅವರ ಜೀವ ಉಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಳಿ ದಾಟುವಾಗ ಜಾರಿ ಬಿದ್ದ ವ್ಯಕ್ತಿಯ ಜೀವ ಕಾಪಾಡಿದ ಪೊಲೀಸ್, ವಿಡಿಯೋ ವೈರಲ್!

2 ತಾಸಿ ಆಪರೇಷನ್ ಬಳಿಕ ಕಬ್ಬಿಣದ ರಾಡ್‌ ಹೊರಕ್ಕೆ

ಈ ಆಘಾತಕಾರಿ ಪ್ರಕರಣ ರಾಜಧಾನಿಯ ಪಕ್ಕದಲ್ಲಿರುವ ರೈಸಾನೆ ಜಿಲ್ಲೆಯ ಬರಿ ಬರೇಲಿಯಲ್ಲಿ ನಡೆದಿದೆ. ಈ 30 ವರ್ಷದ ವ್ಯಕ್ತಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಛಾವಣಿಯಿಂದ ಕೆಳಗೆ ಬಿದ್ದಿದ್ದಾನೆ. ಮೇಲ್ಛಾವಣಿಯಿಂದ ಬಿದ್ದಾಗ ಅವನ ಕುತ್ತಿಗೆಗೆ 4 ಅಡಿ ಉದ್ದದ ಕಂಬಿ ಸಿಲುಕಿಕೊಂಡಿತ್ತು. ಈ ಕಬ್ಬಿಣದ ರಾಡ್‌ ಕುತ್ತಿಗೆ ಮತ್ತು ಬಾಯಿಯ ಮೂಲಕ ಹಾದುಹೋಗಿತ್ತು. ಇದನ್ನು ನೋಡಿ ಅಲ್ಲಿದ್ದ ಜನರು ಹೌಹಾರಿದ್ದರು.

ಆದರೂ ಆ ವ್ಯಕ್ತಿ ಧೈರ್ಯ ಕಳೆದುಕೊಳ್ಳಲಿಲ್ಲ. ತಕ್ಷಣ ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಭೋಪಾಲ್‌ನ ನಿರಾಮಯ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪ್ರಕರಣ ವೈದ್ಯರಿಗೂ ದೊಡ್ಡ ಸವಾಲಾಗಿತ್ತು. ಶಸ್ತ್ರಚಿಕಿತ್ಸೆ ಹೇಳಿಕೊಳ್ಳುವಷ್ಟು ದೊಡ್ಡದಾಗಿರಲಿಲ್ಲ, ಆದರೆ ಅಪಾಯ ಬಹಳವಿತ್ತು. ವೈದ್ಯರು ತಡಮಾಡದೆ ಆ ವ್ಯಕ್ತಿಯನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಆಪರೇಷನ್ ನಂತರ ವ್ಯಕ್ತಿಯ ಗಂಟಲಿನಿಂದ ಕಬ್ಬಿಣದ ರಾಡ್‌ ಅನ್ನು ತೆಗೆದುಹಾಕಲಾಯಿತು. ಈ ಮೂಲಕ ಅವರ ಪ್ರಾಣ ಉಳಿಸಲಾಗಿದೆ.

ಗಾಯಾಳು ವ್ಯಕ್ತಿಯ ಧೈರ್ಯವನ್ನು ಮೆಚ್ಚಿದ ವೈದ್ಯರು

ನಿರಾಮಯ್ ಆಸ್ಪತ್ರೆಯ ವೈದ್ಯ ಅಖಿಲೇಶ್ ಮೋಹನ್ ಲಾಹಿರಿ ಪ್ರಕಾರ, ಬರಿ ಬರೇಲಿಯ ನಿವಾಸಿ ರಂಜಿತ್ ಅವರನ್ನು ಜುಲೈ 17 ರ ರಾತ್ರಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಅವರ ಆಸ್ಪತ್ರೆಗೆ ಕರೆತರಲಾಯಿತು. ಕೆಳಗೆ ಇದ್ದ ಕಬ್ಬಿಣದ ಸಲಾಕೆ ಮೇಲೆ ಬಿದ್ದಿದ್ದರು. ಬಲಭಾಗದಲ್ಲಿ ಬಾಯಿ ಮೂಲಕ ರಾಡ್‌ ಹೊರ ಬಂದಿತ್ತು. ತಡರಾತ್ರಿ ತುರ್ತು ಶಸ್ತ್ರ ಚಿಕಿತ್ಸೆ ಮಾಡಿ ರಾಡ್‌ ತೆಗೆಯಲಾಯಿತು. ಅವರ ಬಾಯಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ.

ಕೆಲಸಗಾರನಿಂದಲೇ ಜ್ಯೂವೆಲ್ಲರಿ ಶಾಪ್ ನಲ್ಲಿ ಕಳ್ಳತನ-ಮೋಜು ಮಸ್ತಿಗಾಗಿ ಕಳವು

ಡಾ.ಲಾಹಿರಿ ಗಾಯಾಳು ವ್ಯಕ್ತಿಯ ಧೈರ್ಯವನ್ನು ಶ್ಲಾಘಿಸಿದರು. ನಿರಾಮಯ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಡಾ.ಅಖಿಲೇಶ್ ಮೋಹನ್ ಲಾಹಿರಿ ಅವರಿಗೆ ಈ ಆಪರೇಷನ್‌ನಲ್ಲಿ ಡಾ.ದೀಪಾ ವಿಶ್ವಕರ್ಮ ಮತ್ತು ಡಾ.ಸುನೀಲ್ ರಘುವಂಶಿ ಸಹಾಯ ಮಾಡಿದರು.ಈ ಸಂಕೀರ್ಣ ಸರ್ಜರಿಯ ನಂತರ ವ್ಯಕ್ತಿಯನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ಈಗ ಅವರ ಸ್ಥಿತಿ ಚೆನ್ನಾಗಿದೆ. ಆ ಕಬ್ಬಣ ಕೊಂಚ ಆಚೀಚೆ ಆಗಿದ್ದರೂ ಜೀವ ಕಳೆದುಕೊಳ್ಳುವವಷ್ಟು ಅಪಾಯವಿತ್ತು. ಕಣ್ಣಿಗೆ ಚುಚ್ಚಿದ್ದರೆ ಅಥವಾ ಇನ್ನೆಲ್ಲಿಯಾದರೂ ತಾಗಿದ್ದರೆ ಏನಾದರೂ ಅನಾಹುತ ಆಗಬಹುದಿತ್ತು.

click me!