ಈ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಕರಾಳ ಮುಖವನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯುವಕನ ವೀಡಿಯೋವೊಂದು ತೋರಿಸುತ್ತಿದೆ. ಅದರಲ್ಲಿ ಸಣ್ಣ ಪ್ರಾಯದ ಯುವಕನೋರ್ವ ಬರೋಬ್ಬರಿ 96 ಲಕ್ಷ ರೂಪಾಯಿ ಬೆಟ್ಟಿಂಗ್ ಆಪ್‌ನಲ್ಲಿ ಕಳೆದುಕೊಂಡು ಖಿನ್ನತೆಗೊಳಗಾಗಿ ಅಳುತ್ತಿರುವ ದೃಶ್ಯವಿದೆ.
ಸುಲಭವಾಗಿ ದುಡ್ಡು ಮಾಡುವ ಆಸೆಯಿಂದ ಕೋಟ್ಯಾಂತರ ಜನ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಕ್ರಿಕೆಟ್ ಸಂಬಂಧಿತ ಬೆಟ್ಟಿಂಗ್ ಆಪ್‌ಗಳನ್ನು ಬಳಸುವವರ ಸಂಖ್ಯೆ ವ್ಯಾಪಕವಾಗಿ ಜಾಸ್ತಿಯಾಗಿದೆ. ಆದರೆ ಹೀಗೆ ಸುಲಭವಾಗಿ ಇದರಲ್ಲಿ ನಿಮ್ಮ ಜೇಬು ತುಂಬುವುದಗಿಂತ ಜೇಬಿನಲ್ಲಿರುವ ಹಣ ಹೋಗುವುದೇ ಹೆಚ್ಚು ಇದರಲ್ಲಿ ಯಶಸ್ಸಿನ ಸಾಧ್ಯತೆ ಬಹಳ ಕಡಿಮೆ. ಅಲ್ಲದೇ ಈ ಬೆಟ್ಟಿಂಗ್ ಆಪ್‌ನ ಚಟಕ್ಕೆ ಬಿದ್ದವರು ಗಂಭೀರವಾದ ಹಣಕಾಸಿ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಕರಾಳ ಮುಖವನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯುವಕನ ವೀಡಿಯೋವೊಂದು ತೋರಿಸುತ್ತಿದೆ. ಅದರಲ್ಲಿ ಸಣ್ಣ ಪ್ರಾಯದ ಯುವಕನೋರ್ವ ಬರೋಬ್ಬರಿ 96 ಲಕ್ಷ ರೂಪಾಯಿ ಬೆಟ್ಟಿಂಗ್ ಆಪ್‌ನಲ್ಲಿ ಕಳೆದುಕೊಂಡು ಖಿನ್ನತೆಗೊಳಗಾಗಿ ಸಾವಿನ ಅಂಚಿಗೆ ಬಂದು ನಿಂತಿದ್ದಾನೆ.
ಈ ವೀಡಿಯೋ ಹಿಂದಿಯ ಖಾಸಗಿ ನ್ಯೂಸ್ ಚಾನೆಲೊಂದರ (news18 indiashow) ಭೈಯಾಜಿ ಕಂಹಿಯೇ, ಶೋ ಕಾರ್ಯಕ್ರಮದ ವೀಡಿಯೋ ಇದಾಗಿದ್ದು, ಈ ವೀಡಿಯೋದಲ್ಲಿ ಯುವಕನೋರ್ವ ತಾನು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಪ್‌ನಲ್ಲಿ ಹಣ ಹಾಕಿ 96 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಗಿ ಕಣ್ಣೀರಿಟ್ಟಿದ್ದಾನೆ. ಟಿವಿಯಲ್ಲಿ ಆಪ್‌ನ ಜಾಹೀರಾತು ನೋಡಿದ ನಂತರ ತಾನು ಬಿಟೆಕ್ ಮಾಡಲು ಇಟ್ಟಿದ್ದ ಹಣವನ್ನು ಜೂಜಾಡಲು ಬಳಸಿದೆ ಎಂದು ಆತ ಹೇಳಿಕೊಂಡಿದ್ದಾರೆ. ಈ ಬೆಟ್ಟಿಂಗ್ ಚಟ ಹೆಚ್ಚುತ್ತಾ ಹೋದಂತೆ ತಾನು ಸಾಲ ಪಡೆದು ಕೂಡ ಬೆಟ್ಟಿಂಗ್ ಆಡಲು ಶುರು ಮಾಡಿದ್ದು ಇದರಿಂದ ಅಂತಿಮವಾಗಿ ಆತಎಲ್ಲವನ್ನು ಕಳೆದುಕೊಂಡು ನಿರ್ಗತಿಕನಂತಾಗುವ ಜೊತೆ ದೊಡ್ಡಮಟ್ಟದಲ್ಲಿ ಸಾಲದ ಹೊರೆಯನ್ನು ತಲೆಗೆ ಹೊರಿಸಿದೆ.
ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ಬೈಕ್ ಕಳ್ಳತನ - ಎಂಜಿನಿಯರ್ ಬಂಧನ!
ಯುವಕನ ಜೂಜಿನ ಚಟದಿಂದ ಕಂಗಾಲಾದ ಕುಟುಂಬ
ವೈರಲ್ ಆದ ವೀಡಿಯೋದಲ್ಲಿ ತನ್ನ ಈ ಜೂಜಿನ ಚಟದಿಂದ ಕುಟುಂಬವೂ ಕಂಗಾಲಾಗಿದ್ದು, ತನ್ನ ಮುಖ ನೋಡಲು ಮನೆ ಮಂದಿ ಯಾರು ಇಷ್ಟ ಪಡುತ್ತಿಲ್ಲ ಎಂದು ಆತ ದುಃಖ ತೋಡಿಕೊಂಡಿದ್ದಾನೆ. ಅಲ್ಲದೇ ಜೂಜಿನ ನಂತರ ತಪ್ಪಿತಸ್ಥ ಭಾವನೆ ಹಾಗೂ ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಗಿ ಯುವಕ ಹೇಳಿಕೊಂಡಿದ್ದಾನೆ. ಇದು ಬರೀ ಈತನ ಸಮಸ್ಯೆ ಅಲ್ಲ ಹೀಗೆ ಹಣ ಗೆಲ್ಲುವ ಕನಸು ಕಂಡು ಕ್ರಿಕೆಟ್ ಬೆಟ್ಟಿಂಗ್ ಆಪ್‌ಗೆ ದುಡ್ಡು ಹಾಕಿ ಹಣ ಕಳೆದುಕೊಂಡ ಕೋಟ್ಯಾಂತರ ಯುವಕರ ಸ್ಥಿತಿ ಇದು.
ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು @khurpenchh ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಿಸಲ್ಪಟ್ಟಿದೆ. ಅಲ್ಲದೇ ಈ ವೀಡಿಯೋ ನೋಡಿದ ಸಾವಿರಾರು ಜನ ಬೆಟ್ಟಿಂಗ್ ಆಪ್‌ಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಸ್ವಾರ್ಥಿ ಹಾಗೂ ನೈತಿಕತೆ ಕಳೆದುಕೊಂಡಿರುವ ಕ್ರಿಕೆಟಿಗರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಬೆಟ್ಟಿಂಗ್ ಆಪ್‌ಗಳಿಗೆ ಸಾರ್ವಜನಿಕವಾಗಿ ಪ್ರಚಾರ ನೀಡುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಆಪ್ ಪರ ಪ್ರಚಾರ ಮಾಡುತ್ತಿರುವವರು ಇದನ್ನು ನೋಡಿ ನಾಚಿಕೆಯಿಂದ ಸಾಯಬೇಕು. ಈ ಯುವಕನ ಸ್ಥಿತಿ ನೋಡಿದರೆ ತುಂಬಾ ಬೇಸರವಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಬೆಟ್ಟಿಂಗ್ ಹಣ ಹೊಂದಿಸಲು ತಾಯಿ-ತಂಗಿಯನ್ನೇ ಹತ್ಯೆ ಮಾಡಿದ ಎಂಟೆಕ್ ಸ್ಟೂಡೆಂಡ್
ವೀಡಿಯೋದಲ್ಲಿ ಕಾಣುವಂತೆ ಹೀಗೆ ದಿವಾಳಿಯಾದ ಮೊದಲಿಗ ಈತನಲ್ಲ, ಸಾವಿರಾರು ಜನ ಬೆಟ್ಟಿಂಗ್ ಆಡಲು ಹೋಗಿ ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಪ್‌ನಲ್ಲಿ ಹಣ ಹೂಡಿಕೆ ಮಾಡಿದ್ದ ಹೈದರಾಬಾದ್ ಮೂಲದ ಬಿಟೆಕ್ ವಿದ್ಯಾರ್ಥಿಯೋರ್ವ ಬಳಿಕ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಸಾವಿಗೆ ಶರಣಾಗಿದ್ದ. ಅದೇ ರೀತಿ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ವ್ಯಕ್ತಿಯೊಬ್ಬ ಕ್ರಿಕೆಟ್ ಬೆಟ್ಟಿಂಗ್ ಆಡಿ ಒಂದೂವರೆ ಕೋಟಿ ಕಳೆದುಕೊಂಡಿದ್ದ ಇದರಿಂದ ನೊಂದು ಆತನ ಪತ್ನಿ ಸಾವಿಗ ಶರಣಾಗಿದ್ದರು.
ಒಟ್ಟಿನಲ್ಲಿ ಮಹಾಭಾರತದಿಂದ ಹಿಡಿದು ಈಗಿನ ಕಾಲದವರೆಗೂ ಜೂಜಾಡುವವರ ಮನೆ ಯಾವತ್ತೂ ಉದ್ಧಾರ ಆಗಿದ್ದಿಲ್ಲ, ಆದರೂ ಜನರು ಈ ತರ ಆನ್‌ಲೈನ್ ಜೂಜು ದಂಧೆಗೆ ಮರಳಾಗುವುದು ತಪ್ಪುತ್ತಿಲ್ಲ, ಆನ್‌ಲೈನ್ ಬೆಟ್ಟಿಂಗ್ ಆಪ್‌ನಲ್ಲಿ ಹಣ ತೊಡಗಿಸಿ ಸುಲಭವಾಗಿ ಹಣ ಮಾಡಲು ನೋಡುತ್ತಿರುವವರಿಗೆ ಈ ವೀಡಿಯೋವೇ ದೊಡ್ಡ ಪಾಠವಾಗಿದೆ.
देश के हरामखोर सुअर क्रिकेट खिलाड़ियों दिन रात टीवी में सट्टा खिलाने वाली कंपनियों का प्रचार कर कर तुमने खुद की जेबें तो भर ली ,
क्या उसी रास्ते से करोड़पति और अरबपति बनने के लिए खुद के बच्चों , भाई और बहनों को भी प्रोत्साहित करोगे ?? pic.twitter.com/DzD9bsfsPE