'ಭಾರತ್‌ ಜೋಡೋ ಅಲ್ಲ ಇದು ಸೀಟ್‌ ಜೋಡೋ..' ಕಾರ್ಟೂನ್‌ ಮೂಲಕ ಕಾಂಗ್ರೆಸ್‌ಗೆ ತಿವಿದ ಕಮ್ಯುನಿಸ್ಟರು!

By Santosh Naik  |  First Published Sep 13, 2022, 10:44 AM IST

ಭಾರತ್‌ ಜೋಡೋ ಯಾತ್ರೆಯಲ್ಲಿ ಸೋಮವಾರ ಆರೆಸ್ಸೆಸ್ ಕುರಿತಾಗಿ ಪೋಸ್ಟರ್‌ ಹಂಚಿಕೊಂಡು ವಿವಾದದ ಕಿಡಿ ಎಬ್ಬಿಸಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಭಾರತೀಯ ಕಮ್ಯುನಿಸ್ಟ್‌ ಪಕ್ಷ ಕಾರ್ಟೂನ್‌ ಮೂಲಕ ತಿವಿದಿದೆ. ಭಾರತ್‌ ಜೋಡೋ ಯಾತ್ರೆ ಕೇರಳಕ್ಕೆ ಪ್ರವೇಶ ಪಡೆದ ದಿನವೇ ಸಿಪಿಐಎಂ ಈ ಕಾರ್ಟೂನ್‌ಅನ್ನು ಹಂಚಿಕೊಂಡಿದ್ದು, ಇದ್ದು ಭಾರತ್‌ ಜೋಡೋ ಯಾತ್ರೆ ರೀತಿ ಕಾಣುತ್ತಿಲ್ಲ. ಸೀಟ್‌ ಜೋಡೋ ಯಾತ್ರೆಯ ರೀತಿ ಕಾಣುತ್ತಿದೆ ಎಂದು ಬರೆದಿದೆ.


ನವದೆಹಲಿ (ಸೆ.13): ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕಾಂಗ್ರೆಸ್ ಅನ್ನು ಟೀಕೆ ಮಾಡಿದೆ. ಯಾತ್ರೆ ಕೇರಳಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಟ್ವೀಟ್‌ ಮಾಡಿರುವ ಸಿಪಿಐ-ಎಂ, ಕಾಂಗ್ರೆಸ್‌ನ ಈ ಭಾರತ್‌ ಜೋಡೋ ಯಾತ್ರೆ ಕೇರಳದಲ್ಲಿ ಬರೋಬ್ಬರಿ 18 ದಿನಗಳ ಕಾಲ ನಡೆಯಲಿದೆ. ಆದರೆ, ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಮಹತ್ತರವಾಗಿರುವ ಉತ್ತರಪ್ರದೇಶದಲ್ಲಿ ಕೇವಲ 2 ದಿನ ನಡೆಯಲಿದೆ.  ಆರೆಸ್ಸೆಸ್‌ ಮತ್ತು ಸಂಘದ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ಇದೊಂದು ವಿಚಿತ್ರ ಮಾರ್ಗ ಎಂದು ಸಿಪಿಐ(ಎಂ) ಬಣ್ಣಿಸಿದೆ. ಸಿಪಿಐ-ಎಂ ಈ ಕಾರ್ಟೂನ್‌ಗೆ ಟೀಕೆ ಮಾಡಿರುವ ಕಾಂಗ್ರೆಸ್‌ ಪಕ್ಷ, ಕಮ್ಯುನಿಸ್ಟ್‌ ಪಕ್ಷದ ಬಗ್ಗೆ ನಾವು ಮಾತನಾಡೋದೇನಿದೆ. ಇದು ಬಿಜೆಪಿಯ ಎ ಟೀಮ್‌ ಎಂದು ಹೇಳಿದೆ. ರಾಹುಲ್‌ ಗಾಂಧಿಯ ಚಿತ್ರವಿರುವ ಕಾರ್ಟೂನ್‌ಅನ್ನು ಸೋಮವಾರ ಸಿಪಿಐ-ಎಂ ತನ್ನ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದ್ದು, ಇದು ಭಾರತ್‌ ಜೋಡೋ ಯಾತ್ರೆಯ ರೀತಿ ಕಾಣುತ್ತಿಲ್ಲ. ಬಹುಶಃ ಕಾಂಗ್ರೆಸ್‌ನ ಸೀಟ್‌ ಜೋಡೋ ಯಾತ್ರೆ ಇರಬಹುದು ಎಂದಿದೆ. ಭಾರತ್‌ ಜೋಡೋ ಯಾತ್ರೆ ಕೇರಳದಲ್ಲಿ 18 ದಿನ ನಡೆದರೆ, ಚುನಾವಣೆಗೆ ಮಹತ್ವವಾಗಿರುವ ಹಾಗೂ ದೇಶದ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಬರೀ ಎರಡು ದಿನ ನಡೆಯಲಿದೆ. ಇದು ಆರೆಸ್ಸೆಸ್‌ ಹಾಗೂ ಬಿಜೆಪಿ ವಿರುದ್ಧ ಹೋರಾಡುವ ವಿಚಿತ್ರ ವಿಧಾನ ಎಂದು ಹೇಳಿದ್ದು, ಉತ್ತರ ಪ್ರದೇಶ ಹಾಗೂ ಕೇರಳದ ನಕ್ಷೆಯನ್ನೂ ಕಾರ್ಟೂನ್‌ನಲ್ಲಿ ಹಾಕಿದೆ.

pic.twitter.com/lpDpy1jVRm

— CPI (M) (@cpimspeak)


ಪಿಣರಾಯಿ ಪಂಚೆ ಹಾಕಿರುವ ಪ್ರಧಾನಿ ಮೋದಿ: ಸಿಪಿಐ-ಎಂಗೆ ತಿರುಗೇಟು ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Congress leader Jairam Ramesh), ಯಾತ್ರೆಯನ್ನು ಹೇಗೆ ಮತ್ತು ಏಕೆ ಯೋಜಿಸಲಾಗಿದೆ ಎಂಬುದರ ಕುರಿತು ನಿಮ್ಮ ಹೋಮ್‌ವರ್ಕ್‌ ಮಾಡುವುದು ಉತ್ತಮ ಎಂದು ಹೇಳಿದರು. ಇದು ಮುಂಡು ಮೋದಿಯ (ಪಂಚೆ ಧರಿಸಿರುವ ಮೋದಿ) ನೆಲದಲ್ಲಿ ಬಿಜೆಪಿಯ ಎ ತಂಡ ಮಾಡುತ್ತಿರುವ ಮೂರ್ಖತನದ ಟೀಕೆ ಎಂದು ಬರೆದುಕೊಂಡಿದ್ದಾರೆ. ಕಾಂಗ್ರೆಸ್ ನಿರಂತರವಾಗಿ ಕೇರಳ ಮುಖ್ಯಮಂತ್ರಿ ಪಿ ವಿಜಯನ್ (kerala cm pinarayi vijayan) ಅವರನ್ನು ಗುರಿಯಾಗಿಸಿಕೊಂಡಿದೆ. ವಿಜಯನ್ ಅವರನ್ನು ಪ್ರಧಾನಿ ಮೋದಿಯವರ (PM Modi) ಧೋತಿ ಧರಿಸಿದ ಆವೃತ್ತಿ ಎಂದು ಕಾಂಗ್ರೆಸ್ ಟೀಕಿಸುತ್ತದೆ.

12 ರಾಜ್ಯಗಳಲ್ಲಿ ಸಾಗಲಿದೆ ಕಾಂಗ್ರೆಸ್ ಯಾತ್ರೆ: ಕಾಂಗ್ರೆಸ್ 150 ದಿನಗಳ ಭಾರತ-ಜೋಡೋ ಯಾತ್ರೆಯನ್ನು (Bharat Jodo Yatra) ಕೈಗೊಳ್ಳಲಿದೆ. ಇದು 12 ರಾಜ್ಯಗಳ ಮೂಲಕ ಹಾದು ಹೋಗಲಿದ್ದು, ಕಾಂಗ್ರೆಸ್‌ ಪಕ್ಷದ ಪ್ರಕಾರ 3570 ಕಿಲೋಮೀಟರ್‌ ಸಂಚಾರವಾಗಲಿದೆ. ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ಗರಿಷ್ಠ ದಿನಗಳ ಯಾತ್ರೆ ನಡೆಯಲಿದೆ. ಈ  ಎರಡೂ ರಾಜ್ಯಗಳಲ್ಲಿ ತಲಾ 21 ದಿನಗಳ ಪ್ರಯಾಣವಿರುತ್ತದೆ. ಎರಡೂ ರಾಜ್ಯಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಕಾರಣ ಈ ಯಾತ್ರೆ ಹೆಚ್ಚು ದಿನಗಳ ಕಾಲ ನಡೆಯಲಿದೆ. ಇಲ್ಲಿ ಕಾಂಗ್ರೆಸ್‌ನ ನೇರ ಸ್ಪರ್ಧೆ ಬಿಜೆಪಿಯ ಜೊತೆಗಿದೆ. ಕರ್ನಾಟಕದಲ್ಲಿ ಮೇ 2023 ರಲ್ಲಿ ಚುನಾವಣೆ ನಡೆಯಲಿದ್ದು, ಅದೇ ಸಮಯದಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ ಮತ್ತು ತೆಲಂಗಾಣ ಸೇರಿದಂತೆ ರಾಜಸ್ಥಾನದಲ್ಲಿ 2023 ರ ಕೊನೆಯಲ್ಲಿ ಚುನಾವಣೆಗಳು ನಡೆಯಲಿವೆ.

Tap to resize

Latest Videos

 

ಮೋದಿಯನ್ನ ಮಣಿಸೋಕೆ ರಾಹುಲ್ ಗಾಂಧಿ ಸಜ್ಜು, ಸಫಲವಾಗುತ್ತಾ‘ಭಾರತ್ ಜೋಡೋ ಯಾತ್ರೆ’ ?

ಯಾತ್ರೆಯ ಉದ್ದೇಶ ಯಾವುದೇ ನಿರ್ದಿಷ್ಟ ರಾಜ್ಯದ ಚುನಾವಣೆಯಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಯಾತ್ರೆ ಸಾಗುವುದಿಲ್ಲ ಎಂದು ಕಾಂಗ್ರೆಸ್ ವಾದಿಸಿದೆ. ಅದೇ ರೀತಿ ಛತ್ತೀಸ್‌ಗಢದ ಮೂಲಕವೂ ಯಾತ್ರೆಯ ಪ್ರಯಾಣ ಸಾಗುವುದಿಲ್ಲ.

Bharat Jodo Yatra: ರಾಹುಲ್‌ ಪಾದಯಾತ್ರೆ ಬಳ್ಳಾರಿ ಪ್ರವೇಶಿಸಿದಾಗ ಬೃಹತ್‌ ರ‍್ಯಾಲಿ: ಡಿಕೆಶಿ

ಯಾವ ರಾಜ್ಯದಲ್ಲಿ ಎಷ್ಟು ದಿನ ಯಾತ್ರೆ: ಕಾಂಗ್ರೆಸ್ ಪ್ರಕಾರ 150 ದಿನಗಳ ಪಯಣದಲ್ಲಿ ಕೇರಳದಲ್ಲಿ 18 ದಿನ, ಕರ್ನಾಟಕ-ರಾಜಸ್ಥಾನದಲ್ಲಿ ತಲಾ 21 ದಿನ, ತೆಲಂಗಾಣದಲ್ಲಿ 13 ದಿನ, ಮಹಾರಾಷ್ಟ್ರ-ಮಧ್ಯಪ್ರದೇಶದಲ್ಲಿ ತಲಾ 16 ದಿನ, ಉತ್ತರ ಪ್ರದೇಶದಲ್ಲಿ 5 ದಿನ, 2 ದಿನ ದೆಹಲಿಯಲ್ಲಿ, ಹರಿಯಾಣದಲ್ಲಿ 12 ದಿನ ಪಂಜಾಬ್‌ನಲ್ಲಿ ನಡೆಯಲಿದೆ. ಇದಾದ ನಂತರ ಜಮ್ಮು ಮತ್ತು ಕಾಶ್ಮೀರದವರೆಗೆ ಯಾತ್ರೆಯ ಪ್ರಯಾಣ ಸಾಗಲಿದೆ.

click me!