ಬೆಂಗಳೂರಿನ ಬೊಮ್ಮನಹಳ್ಳಿ, ನೋಯ್ಡಾ, ಪುಣೆಯ ಮರುಂಜಿ, ಮುಂಬೈನ ಮೀರಾ ರೋಡ್‌ಗಳಲ್ಲಿ ಹೆಚ್ಚು ಅಪಾಘತಗಳು ವರದಿಯಾಗಿವೆ. ಅಪಘಾತಕ್ಕೆ ಬೀದಿ ನಾಯಿ, ತೆಂಗಿನ ಕಾಯಿ ಕಾರಣ: ಪಾನಮತ್ತ ವಾಹನ ಚಾಲನೆ, ಸಂಚಾರ ನಿಯಮ ಉಲ್ಲಂಘನೆ ಅಪಘಾತದ ಮೂಲ ಕಾರಣಗಳು ಎಂದು ಪರಿಗಣಿಸಲಾಗುತ್ತದೆ.
ನವದೆಹಲಿ(ಡಿ.05): ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ ಸಂಭವಿಸಿದ ಅಪಘಾತಗಳ ಕುರಿತು ಅಕೋ ಆಕ್ಸಿಡೆಂಟ್ ಇಂಡೆಕ್ಸ್ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಭಾರತದ ಅಪಘಾತಗಳ ಹಾಟ್‌ಸ್ಪಾಟ್ ಪಟ್ಟಿಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಮೊದಲ ಸ್ಥಾನ ಪಡೆದಿದೆ.
ದೇಶದ ಮೆಟ್ರೋ ನಗರಗಳ ಪೈಕಿ ರಸ್ತೆ ಗುಂಡಿಗಳಿಂದ ಬೆಂಗಳೂರಿನಲ್ಲೇ ಅತಿ ಹೆಚ್ಚು, ಶೇ.44. 8ರಷ್ಟು ಅಪಘಾತಗಳಾಗಿವೆ. ದೆಹಲಿಯಲ್ಲಿ ಈ ಪ್ರಮಾಣ ಶೇ.13.3, ಮುಂಬೈನಲ್ಲಿ ಶೇ.12.3ರಷ್ಟಿದೆ. ವರದಿಯ ಪ್ರಕಾರ 2024ರಲ್ಲಿ ದೇಶದಲ್ಲೇ ಅತಿ ಹೆಚ್ಚು ಅಪಘಾತಗಳಿಗೆ ಸಾಕ್ಷಿಯಾಗಿರುವ ಹೈದರಾಬಾದ್ ನಗರದಲ್ಲಿ ಶೇ.16.4ರಷ್ಟು ಅಪಘಾತಗಳು ಸಂಭವಿಸಿವೆ. ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಶೇ.15.9ರಷ್ಟು ಅಪಘಾತಗಳು ನಡೆದಿವೆ.
ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬೈಕ್ಗೆ ಗುದ್ದಿ ಫ್ಲೈಓವರ್ನಿಂದ ಕೆಳಗೆ ಬಿದ್ದ ಕಾರು!
ಬೆಂಗಳೂರಿನ ಬೊಮ್ಮನಹಳ್ಳಿ, ನೋಯ್ಡಾ, ಪುಣೆಯ ಮರುಂಜಿ, ಮುಂಬೈನ ಮೀರಾ ರೋಡ್‌ಗಳಲ್ಲಿ ಹೆಚ್ಚು ಅಪಾಘತಗಳು ವರದಿಯಾಗಿವೆ. ಅಪಘಾತಕ್ಕೆ ಬೀದಿ ನಾಯಿ, ತೆಂಗಿನ ಕಾಯಿ ಕಾರಣ: ಪಾನಮತ್ತ ವಾಹನ ಚಾಲನೆ, ಸಂಚಾರ ನಿಯಮ ಉಲ್ಲಂಘನೆ ಅಪಘಾತದ ಮೂಲ ಕಾರಣಗಳು ಎಂದು ಪರಿಗಣಿಸಲಾಗುತ್ತದೆ.
ಈ ವರದಿಯ ಪ್ರಕಾರ ಬೀದಿಯಲ್ಲಿ ತಿರುಗುವ ಜಾನುವಾರುಗಳಿಂದಾಗಿ ಹೆಚ್ಚು ಅಪಘಾತಗಳಾಗುತ್ತಿವೆ. ಇದರಲ್ಲಿ ನಾಯಿಗಳಿಂದ ಶೇ.62, ಹಸುಗಳಿಂದ ಶೇ.29, ಎಮ್ಮೆಗಳಿಂದ ಶೇ.4ರಷ್ಟು ಅಪಘಾತವಾಗಿದೆ. ಅಂತೆಯೇ, ಸಂಚರಿಸುವಾಗ ತೆಂಗಿನ ಕಾಯಿ ಬಿದ್ದೂ ಅಧಿಕ ಅಪಘಾತಗಳಾಗಿವೆ.
ಹುಂಡೈ ಐ10 ಹೆಚ್ಚು ಅಪಘಾತವಾದ ವಾಹನವಾಗಿದ್ದು, ಉಳಿದಂತೆ ಮಾರುತಿ ಸುಜುಕಿ ಸ್ವಿಫ್ಟ್, ಬಲೆನೋ, ಐ20, ಡಿಜೈರ್ ಕೂಡ ಪಟ್ಟಿಯಲ್ಲಿವೆ.
ಬೆಂಗಳೂರು: ಏರ್‌ಪೋರ್ಟ್ ರಸ್ತೇಲಿ ಸರಣಿ ಅಪಘಾತ, ಇಬ್ಬರು ಸಾವು
ಬೆಂಗಳೂರು: ಯಲಹಂಕ ಮೇಲೇತುವೆಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಹಾಗೂ ಇನೋವಾ ಕಾರು ಚಾಲಕ ಮೃತಪಟ್ಟಿರುವ ಘಟನೆ ನ.12 ರಾತ್ರಿ ನಡೆದಿತ್ತು. ಬಾದಾಮಿ ಮೂಲದ ಇನ್ನೋವಾ ಕಾರು ಚಾಲಕ ಜಗದೀಶ್ (40) ಮತ್ತು ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಕುಲದೀಪ್ ಕುಮಾರ್ (42) ಮೃತ ದುರ್ದೈವಿಗಳು.
ಘಟನೆಯಲ್ಲಿ ಬಿಎಂಟಿಸಿ ಬಸ್ ಚಾಲಕ ಪುಟ್ಟಸ್ವಾಮಿಗೂ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಣಿ ಅಪಘಾತದಲ್ಲಿ ಬಿಎಂಟಿಸಿ ಬಸ್, ಸಿಮೆಂಟ್ ಮಿಕ್ಸರ್ ಲಾರಿ ಹಾಗೂ ಇನ್ನೋವಾ ಕಾರು ಜಖಂಗೊಂಡಿದ್ದವು.
ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಾಲೀಕನನ್ನು ಮನೆಗೆ ಕರೆತರಲು ಸೋಮವಾರ ರಾತ್ರಿ ಸುಮಾರು 11.30ಕ್ಕೆ ಚಾಲಕ ಜಗದೀಶ್ ಯಲಹಂಕ ಮೇಲೇತುವೆ ಮುಖಾಂತರ ಇನ್ನೋವಾ ಕಾರಿನಲ್ಲಿ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದರು. ಇದೇ ಮಾರ್ಗದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಿಂದಿನಿಂದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಕಾರು ಚಾಲಕ ಮತ್ತು ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಮೇಲೇತುವೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಜಗಳವಾಡುತ್ತಿದ್ದರು.
ಲಾರಿ-ಕಾರು ಮಧ್ಯೆ ಸಿಲುಕಿ ಗಾಯ:
ಇದೇ ವೇಳೆ ರಾಜರಾಜೇಶ್ವರಿನಗರದಿಂದ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿ ನಿಂತು ವಾಗ್ವಾದ ನಡೆಸುತ್ತಿದ್ದ ಚಾಲಕರಾದ ಜಗದೀಶ್ ಮತ್ತು ಕುಲದೀಪ್ ಕುಮಾರ್ ಲಾರಿ ಮತ್ತು ಕಾರಿನ ನಡುವೆ ಸಿಲುಕಿ ಗಾಯಗೊಂಡಿದ್ದರು.
Breaking: ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಗೆ ಮತ್ತೆರಡು ಬಲಿ
ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾದ ಹಿನ್ನೆಲೆ ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಕುಲದೀಪ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋವಾ ಕಾರು ಚಾಲಕ ನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊ ಯ್ಯುವಾಗ ಯುನ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಬಿಎಂಟಿಸಿ ಬಸ್ ಚಾಲಕ ಪುಟ್ಟ ಸ್ವಾಮಿ ಗೂ ಸಣ್ಣ ಪ್ರಮಾಣದ ಗಾಯಗಳಾ ಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.
ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಮತ್ತು ಇನ್ನೋವಾ ಕಾರು ಚಾಲಕ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಜಗಳವಾಡುತ್ತಿದ್ದರು. ಈ ವಾಹನಗಳು ನಿಂತಿದ್ದ ಜಾಗದಲ್ಲಿ ಕತ್ತಲು ಆವರಿಸಿತ್ತು. ಹೀಗಾಗಿ ಬಿಎಂಟಿಸಿ ಬಸ್ ಚಾಲಕ ಈ ವಾಹನಗಳನ್ನು ಸರಿಯಾಗಿ ಗಮನಿಸದೆ ಡಿಕ್ಕಿ ಹೊಡೆದ ಪರಿಣಾಮ ಈ ಸರಣಿ ಅಪಘಾತ ಸಂಭವಿಸಿದೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.