ಪ್ರತಿಭಟನೆಗೆ ಕರೆ: ಲೇಖಕ ಆಕಾರ್ ಪಟೇಲ್ ವಿರುದ್ಧ FIR ದಾಖಲು

By Suvarna NewsFirst Published Jun 5, 2020, 5:41 PM IST
Highlights

ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯಂತೆ ಭಾರತದಲ್ಲೂ ದಲಿತರು, ಮುಸಲ್ಮಾನರು, ಆದಿವಾಸಿಗಳು ಪ್ರತಿಭಟಿಸಬೇಕು ಎಂದು ಲೇಖಕ ಆಕಾರ್ ಪಟೇಲ್ ಟ್ವೀಟ್ ಮಾಡಿ ಪ್ರತಿಭಟನೆಗೆ ಕರೆ ನೀಡಿದ್ದರು. ಅವರ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜೂ.05): ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ರೂಪದಲ್ಲಿ ಇಲ್ಲಿಯೂ ಪ್ರತಿಭಟಿಸಲು ಜನತೆಗೆ ಕರೆ ನೀಡಿದ್ದ ಲೇಖಕ ಆಕಾರ್ ಪಟೇಲ್ ವಿರುದ್ಧ ಬೆಂಗಳೂರಿನ ಜೆ.ಸಿ. ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಅಮೆರಿಕದಲ್ಲಿ ಆಫ್ರಿಕನ್ ಅಮೆರಿನ್ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಯೊಬ್ಬ ತನ್ನ ಮೊಣಕಾಲಿನಿಂದ ಕಪ್ಪು ವರ್ಣಿಯ ವ್ಯಕ್ತಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದರು. ಇದು ಜಾಗತಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಮೆರಿಕದಾದ್ಯಂತ ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆಗಳು ಜರುಗಿದ್ದವು. ಈ ವಿಡಿಯೋವನ್ನು ಆಕಾರ್ ಪಟೇಲ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು. 

ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವಿಡಿಯೋದ ಜತೆ ನಮ್ಮಲ್ಲೂ ಇಂತಹ ಪ್ರತಿಭಟನೆಗಳ ಅಗತ್ಯವಿದೆ. ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಹಾಗೂ ಮಹಿಳೆಯರು ಪ್ರತಿಭಟಿಸಬೇಕು. ಆಗ ಮಾತ್ರ ಜಗತ್ತು ಗುರುತಿಸುತ್ತದೆ. ಪ್ರತಿಭಟನೆ ಒಂದು ಕಲೆ ಎಂದು ಟ್ವೀಟ್ ಮಾಡಿದ್ದಾರೆ.

ದೊಡ್ಡಣ್ಣನನ್ನೇ ನಲುಗಿಸಿದ ಪ್ರತಿಭಟನೆ; ಬಂಕರ್‌ನಲ್ಲಿ ಅಡಗಿ ಕುಳಿತ ಟ್ರಂಪ್!

We need protests like these. From Dalits and Muslims and Adivasis. And the poor. And women.
World will notice. Protest is a craft. https://t.co/6btWiMtbOX

— Aakar Patel (@Aakar__Patel)

ಈ ಟ್ವೀಟ್ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್ ದೂರಿನನ್ವಯ ಐಪಿಸಿ ಸೆಕ್ಷನ್ 153(ಪ್ರತಿಭಟನೆಗೆ ಕುಮ್ಮಕ್ಕು)  117(ಕೊರೋನ ಸಮಯದಲ್ಲಿ ಗುಂಪು ಸೇರಬಾರದು ಹೀಗಿದ್ದರು ಕರೆ ನೀಡಿದ್ದಕ್ಕೆ) 505 (ಸಮಾಜದಲ್ಲಿ ಶಾಂತಿ ಭಂಗಕ್ಕೆ ಕರೆ ನೀಡಿದ್ದು) ಅನ್ವಯ ಕೇಸ್ ದಾಖಲಿಸಲಾಗಿದೆ.

click me!