ಇಂಡೋ-ಚೀನಾ ಗಡಿ ಬಿಕ್ಕಟ್ಟು; ಪರಿಸ್ಥಿತಿ ತಿಳಿಗೊಳಿಸಲು ಅಖಾಡಕ್ಕಿಳಿದ ಲೆ.ಜ.ಹರೀಂದರ್ ಸಿಂಗ್!

By Suvarna News  |  First Published Jun 5, 2020, 3:53 PM IST

ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಭಾರತೀಯ ಸೇನೆಯ ಪ್ರತಿ ನಡೆಗೆ ತಕರಾರು ಎತ್ತುತ್ತಿರುವ ಚೀನಾ ಸೇನೆ ಗಡಿ ಉಲ್ಲಂಘಿಸಿ ಭಾರತದ ಭೂಭಾಗಕ್ಕೆ ನುಗ್ಗಿದೆ. ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿಗೆ. ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಈ ವಾರಾಂತ್ಯದಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಇದೀಗ ಪರಿಸ್ಥಿತಿ ತಿಳಿಗೊಳಿಸಲು ಭಾರತೀಯ ಸೇನೆಯ ಲೆ.ಜ. ಹರೀಂದರ್ ಸಿಂಗ್ ಅಖಾಡಕ್ಕಿಳಿದಿದ್ದಾರೆ.


ಲಡಾಖ್(ಜೂ.05): ಭಾರತದ ಗಡಿ ಪ್ರದೇಶದ ಅತೀ ಕ್ರಮಣ ಮಾಡುವುದು ಪಾಕಿಸ್ತಾನ ಹಾಗೂ ಚೀನಾಗೆ ಹೊಸದಲ್ಲ. ಪ್ರತಿ ವರ್ಷ ಉಭಯ ದೇಶಗಳು ಭಾರತದ ಗಡಿ ಪ್ರವೇಶಕ್ಕೆ ಹರಸಾಹಸ ಮಾಡುತ್ತಿರುವ ಘಟನೆಗಳು ನಡೆಯುತ್ತಲೇ ಇದೆ.  ಲಡಾಖ್ ವಲಯದಲ್ಲಿ ಭಾರತೀಯ ಸೇನೆ ಜೊತೆ ನೂಕಾಟ ತಳ್ಳಾಟ ಆರಂಭಿಸಿದ ಚೀನಾ ಸೇನೆ ಬಳಿಕ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ತಕರಾರು ಶುರುಮಾಡಿದೆ. ಹಲವು ಸುತ್ತಿನ ಸಂಧಾನ ಮಾತುಕತೆ ಫಲಿಸಿಲ್ಲ. ಇದೀಗ ಪರಿಸ್ಥಿತಿ ಶಾಂತಗೊಳಿಸಲು  ಭಾರತೀಯ ಸೇನೆಯ ಲೆ.ಜ. ಹರೀಂದರ್ ಸಿಂಗ್, ಚೀನಾ ಸೇನೆ ಜೊತೆ ಮಾತುಕತೆ ನಡೆಸಲಿದ್ದಾರೆ.

ಚೀನಾ ಕ್ಯಾತೆಗೆ ಸಡ್ಡು ಹೊಡೆದ ಭಾರತ; ಮೋದಿ ಮಾಸ್ಟರ್ ಪ್ಲಾನ್‌ಗೆ ಚೀನಾ ತತ್ತರ!

Latest Videos

undefined

ಪಂಗೊಂಗ್ ತ್ಸು ಲೇಕ್ ಗಡಿ ವಲಯದಲ್ಲಿ ಆರಂಭಗೊಂಡ ಇಂಡೋ-ಚೀನಾ ಬಿಕ್ಕಟು, ಲಡಾಖ್‌ನ ಗಲ್ವಾನ್ ಹಾಗೂ ಡೆಮ್ಚೋಕ್ ಪ್ರಾಂತ್ಯದಲ್ಲೂ ಭಾರತೀಯ ಸೇನಾ ಯೋಧರ ಜೊತೆ ಚೀನಿ ಸೈನಿಕರು ಯುದ್ದಕ್ಕೆ ನಿಂತಿದ್ದರು. ಚೀನಾ ಯುದ್ದ ವಿಮಾನ ಸೇರಿದಂತೆ ಹೆಚ್ಚುವರಿ ಸೇನೆ ನಿಯೋಜಿಸಿದರೆ, ಇತ್ತ ಭಾರತ ಕೂಡ ಸರ್ವಸನ್ನದ್ದವಾಗಿತ್ತು. 

ಚೀನಾ ಗಡಿ ತಂಟೆಗೆ ಭಾರತ ಸಡ್ಡು: ತತ್ತರಿಸಿದ ಡ್ರ್ಯಾಗನ್!

ಲಡಾಖ್ ಟ್ರೂಪ್ ಕಮಾಂಡರ್ ಹಾಗೂ ಚೀನಾ ಕಮಾಂಡರ್‌ಗಳ ಜೊತೆ ಹಲವು ಸುತ್ತಿನ ಮಾತುಕತೆಗಳು ಫಲಪ್ರದವಾಗಲಿಲ್ಲ. ಹೀಗಾಗಿ ಇದೇ ಶನಿವಾರ(ಜೂ.05) ಭಾರತೀಯ ಸೇನೆ ಹಾಗೂ ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ ಉನ್ನತಮಟ್ಟದ ಮಾತುಕತೆ ನಡೆಸಲಿದೆ. ಭಾರತೀಯ ಸೇನೆಯಿಂದ ಲೆ.ಜ. ಹರೀಂದರ್ ಸಿಂಗ್ ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಲೆ.ಹರೀಂದರ್ ಸಿಂಗ್:
ಉದಮ್‌ಪುರ್ ಬೇಸ್ ನಾರ್ಧನ್ ಕಮಾಂಡ್ ಇಂಡಿಯನ್ ಆರ್ಮಿ 14 ಕಾರ್ಪ್ಸ್ ಟ್ರೂಪ್‌ನ ಕಮಾಂಡರ್ ಆಗಿರುವ ಹರೀಂದ್ರ ಸಿಂಗ್‌ಗೆ ಫೈರ್ ಅಂಡರ್ ಫರಿ ಕಾರ್ಪ್ಸ್ ಎಂಬ ನಿಕ್ ನೇಮ್ ಇದೆ. ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಚಾಕಚಕ್ಯತೆ ಈ ಹರಿಂದ್ ಸಿಂಗ್‌ಗೆ ಇದೆ. ಲಡಾಕ್‌ ವಲಯದಲ್ಲಿ ಚೀನಾದ ಅತೀ ಕ್ರಮಣಗಳ ಬಗ್ಗೆ ಸ್ಪಷ್ಟ ಅರಿವು ಹರೀಂದರ್ ಸಿಂಗ್‌ಗೆ ಇದೆ. 

2019ರಲ್ಲಿ 14 ಕಾರ್ಪ್ ಕಮಾಂಡರ್ ಆಗಿ ಅಧಿಕಾರ ವಹಿಸಿದ ಹರೀಂದರ್ ಸಿಂಗ್, ಮಿಲಿಟರಿ ಇಂಟಲಿಜೆನ್ಸ್ ವಿಂಗ್‌ನ ಡೈರೆಕ್ಟರ್ ಜನರಲ್, ಮಿಲಿಟರಿ ಆಪರೇಶನ್ ವಿಂಗ್‌ನ ಡೈರೆಕ್ಟರ್ ಜನರಲ್ ಸೇರಿದೆತೆ ಹಲವು ವಿಭಾಗದಲ್ಲಿ ಹರೀಂದರ್ ಸಿಂಗ್ ಕಾರ್ಯನಿರ್ವಹಿಸಿದ್ದಾರೆ. 

click me!