ಬರೋಬ್ಬರಿ 107 ಭಾಷೆ; ದೇಶದ ಅತ್ಯಂತ ಭಾಷಾ ವೈವಿಧ್ಯ ಜಿಲ್ಲೆ ಬೆಂಗಳೂರು!

By Suvarna News  |  First Published Sep 5, 2021, 4:08 PM IST
  • ಬೆಂಗಳೂರು ದೇಶದ ಅತೀ ಹೆಚ್ಚು ಭಾಷೆ ಮಾತನಾಡುವ ಜನರಿರುವು ಜಿಲ್ಲೆ
  • ಭಾಷಾ ವೈವಿಧ್ಯತೆಯಲ್ಲಿ ಬೆಂಗಳೂರಿಗೆ ಸರಿಸಾಟಿ ಯಾವುದು ಇಲ್ಲ
  • ಸೆನ್ಸನ್ ಅಂಕಿ ಅಂಶ ಅಧ್ಯಯನ ನಡೆಸಿದ ಭಾರತೀಯ ಅಂಕಿಅಂಶ ಸಂಸ್ಥೆ(ISI)

ಬೆಂಗಳೂರು(ಸೆ.04): ಭಾರತ ಭಾಷಾ ವೈವಿಧ್ಯತೆ, ಭವಿಷ್ಯ ಸಂಸ್ಕೃತಿಯ ದೇಶ. ಭಾರತದ ಪ್ರತಿ ರಾಜ್ಯಗಳಲ್ಲಿ ಭಾಷೆ, ಆಹಾರ, ಉಡುಗೆ ತೊಡುಗೆ, ಸಂಸ್ಕೃತಿ ಎಲ್ಲವೂ ಬೇರೆ ಬೇರೆ. ವಿವಿಧತೆಯಲ್ಲಿ ಏಕತೆ ಹೊಂದಿರು ರಾಷ್ಟ್ರ ನಮ್ಮದು. ಈ ವಿವಿಧತೆಯಲ್ಲಿ ಏಕತೆಯ ಅನುಭವ ಪಡೆಯಲು ಭಾರತ ಸುತ್ತಬೇಕೆಂದಿಲ್ಲ. ಬೆಂಗಳೂರಿಗೆ ಭೇಟಿ ನೀಡಿದರೆ ಸಾಕು. ಕಾರಣ ಇತ್ತೀಚೆಗೆ ಬಿಡುಗಡೆಯಾದ ಸಮೀಕ್ಷಾ ಅಧ್ಯಯನ ವರದಿ ಪ್ರಕಾರ ಬೆಂಗಳೂರಿನಲ್ಲಿ 107 ಭಾಷೆ ನೆಲೆನೆಂತಿದೆ. ದೇಶದಲ್ಲಿ ಅತೀ ಹೆಚ್ಚು ಭಾಷಾವಾರು ವೈವಿಧ್ಯತೆ ಹೊಂದಿರುವ ಜಿಲ್ಲೆ ಅನ್ನೋ ಹೆಗ್ಗಳಿಕೆಗೆ ನಮ್ಮ ಬೆಂಗಳೂರು ಪಾತ್ರವಾಗಿದೆ.

ಕನ್ನಡಿಗರ ಜನಾಕ್ರೋಶಕ್ಕೆ ಮಣಿದ ಲೋಕಸಭೆ: ಕೊನೆಗೂ ಕನ್ನಡ ಸೇರ್ಪಡೆ

Latest Videos

undefined

ಕೇವಲ 107 ಭಾಷೆ ಮಾತ್ರವಲ್ಲ, 107 ಸಂಸ್ಕೃತಿಯೂ ಇಲ್ಲಿ ಮೇಳೈಸಿದೆ.  ಬ್ರೂಕಿಂಗ್ ಸಂಸ್ಥೆಯ ಅನಿವಾಸಿ ಶಮಿಕಾ ರವಿ ಹಾಗೂ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ(ISI) ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಪಕ ಮುಡಿತ್ ಕಂಪೂರ್ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದಿದ್ದಿದೆ. 2011ರ ಜನಗಣತಿಯ ದತ್ತಾಂಶದ ವಿಶ್ಲೇಷಣೆ ನಡೆಸಿ ಭಾರತದಲ್ಲಿ ಆಯಾ ರಾಜ್ಯ, ಜಿಲ್ಲೆ, ನಗರಗಳಲ್ಲಿನ ಭಾಷ ವೈವಿಧ್ಯತೆ ಕುರಿತು ಮಹತ್ವದ ಮಾಹಿತಿಯನ್ನು ಹೊರಹಾಕಿದೆ.

ಬೆಂಗಳೂರು ದೇಶದ ಅತೀ ಹೆಚ್ಚು ಭಾಷಿಕರನ್ನು ಹೊಂದಿದ ಜಿಲ್ಲೆ. ಇಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನರು, ವಿದೇಶಿಗರು ನೆಲೆಸಿದ್ದಾರೆ. ಹೀಗಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ 107 ಭಾಷೆಗಳು ಬೆಂಗಳೂರಿನಲ್ಲಿ ಜೀವಂತವಾಗಿದೆ. ಆದರೆ ಕನ್ನಡಿಗರಿಗೆ ಬೇಸರದ ವಿಚಾರವೊಂದಿದೆ. ಬೆಂಗಳೂರಿನಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಶೇಕಡಾ 44.5. 

 

Just look at the number of languages spoken across districts in India! Bangalore has the highest = 107 pic.twitter.com/YNX7LNOlfp

— Prof Shamika Ravi (@ShamikaRavi)

ಬೆಂಗಳೂರಿನಲ್ಲಿ ಶೇಕಡಾ 15ರಷ್ಟು ಮಂದಿ ತಮಿಳು, ಶೇಕಡಾ 14ರಷ್ಟು ಮಂದಿ ತೆಲುಗು, ಶೇಕಡಾ 12 ರಷ್ಟು ಮಂದಿ ಉರ್ದು, ಶೇಕಡಾ 6 ರಷ್ಟು ಮಂದಿ ಹಿಂದಿ, ಶೇಕಡಾ 3 ರಷ್ಟು ಮಂದಿ ಮಲೆಯಾಳಂ ಮಾತನಾಡುವ ಜನರಿದ್ದಾರೆ. ಇನ್ನು ಬಂಗಾಳಿ, ಕಾಶ್ಮೀರಿ, ಬಿಹಾರಿ, ಗುಜರಾತಿ ಸೇರಿದಂತೆ ಭಾರತದಲ್ಲಿರುವ ಎಲ್ಲಾ ಭಾಷ ಮಾತಾನಾಡುವ ಜನ ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ  22 ಶೆಡ್ಯೂಲ್ಡ್ ಹಾಗೂ 84 ನಾನ್ ಶೆಡ್ಯೂಲ್ಡ್ ಭಾಷೆ ಮಾತನಾಡುತ್ತಿದ್ದಾರೆ. 

ಅಮೆರಿಕದಲ್ಲಿ ಕನ್ನಡ ಕಲರವ..! ಮಕ್ಳನ್ನು ಕೂರಿಸಿ ಕನ್ನಡ ಕಲಿಸ್ತಾರೆ ಈ ದಂಪತಿ

ಇನ್ನು ದೇಶದ ಇತರ ಜಿಲ್ಲೆಗಳಲ್ಲೂ 100ಕ್ಕೂ ಹೆಚ್ಚು ಭಾಷೆ ಮಾತಾನಾಡುವ ಪ್ರಾಂತ್ಯಗಳಿವೆ. ನಾಗಾಲ್ಯಾಂಡ್‌ನ ದಿಮಾಪುರದಲ್ಲಿ 103 ಮತ್ತು ಸೋನಿತ್ಪುರದಲ್ಲಿ 101 ಭಾಷೆಗಳನ್ನು ಮಾತನಾಡುತ್ತಾರೆ. ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ 98 ಭಾಷೆಗಳು, ಮೇಘಾಲಯದ ಪೂರ್ವ ಖಾಸಿ ಹಿಲ್ಸ್ 96, ದೆಹಲಿಯಲ್ಲಿ 97, ಅಸ್ಸಾಂನ ಕಾರ್ಬಿ ಅಂಗ್ಲಾಂಗ್‌ನಲ್ಲಿ 95, ಪುಣೆಯಲ್ಲಿ 93, ಡಾರ್ಜಲಿಂಗ್ 91 ಭಾಷೆಗಳಿವೆ.ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ 98 ಭಾಷೆಗಳು, ಮೇಘಾಲಯದ ಪೂರ್ವ ಖಾಸಿ ಹಿಲ್ಸ್ 96, 81 ಭಾಷೆಗಳನ್ನು ಮಾತನಾಡುತ್ತಾರೆ.

ಈ ಪೈಕಿ ಬೆಂಗಳೂರು ಅತೀ ಹೆಚ್ಚು ವಲಸಿಗರನ್ನು ಹೊಂದಿದ ಜಿಲ್ಲೆ. ದೇಶ ವಿದೇಶಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವವರ ಸಂಖ್ಯೆ ಹೆಚ್ಚಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ 107 ಭಾಷೆಗಳಿದೆ. ಭಾಷಾ ವೈವಿಧ್ಯತೆಯಲ್ಲಿ ಮೊದಲ ಸ್ಥಾನ ಪಡೆದಿರುವ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಸಂಖ್ಯೆ ಮತ್ತಷ್ಟು ಹೆಚ್ಚಾದರೆ ಸಂಭ್ರಮ ಡಬಲ್ ಆಗುವುದರಲ್ಲಿ ಅನುಮಾನವಿಲ್ಲ.

click me!