Bengaluru devotee donation to Tirupati: ತಿರುಪತಿಗೆ ಬೆಂಗಳೂರು ಭಕ್ತೆಯಿಂದ ₹95 ಲಕ್ಷದ 7 ಚಿನ್ನದ ಪದಕ ದಾನ!

Ravi Janekal   | Kannada Prabha
Published : Apr 25, 2026, 09:37 AM IST
7 gold medals worth ₹95 lakh donated by Bengaluru devotees to Tirupati

ಸಾರಾಂಶ

Bengaluru devotee donation to Tirupati ಬೆಂಗಳೂರಿನ ಭಕ್ತರೊಬ್ಬರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ದಾನವಾಗಿ ನೀಡಿದ್ದಾರೆ. ಎಂ.ಮಹದೇವಮ್ಮ ಎಂಬ ಭಕ್ತೆಯು ಟಿಟಿಡಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಬೃಹತ್ ದೇಣಿಗೆಯನ್ನು ಸಮರ್ಪಿಸಿದ್ದಾರೆ.

ಪಿಟಿಐ ತಿರುಪತಿ (ಏ.25):  ತಿರುಪತಿ ಭೇಟಿ ನೀಡುವ ಭಕ್ತರು ಅಪಾರ ದೇಣಿಗೆ ಉಡುಗೊರೆಗಳನ್ನ ನೀಡುತ್ತಾರೆ. ಕೆಲವರು ಭಕ್ತರು ಹುಂಡಿಗಳಿಗೆ ಸಾವಿರ ಲಕ್ಷಗಟ್ಟಲೆ ಹಣ ಹಾಕಿದರೆ ಇನ್ನು ಕೆಲವರು ತಮ್ಮಲ್ಲಿನ ಚಿನ್ನಾಭರಣಗಳನ್ನೇ ತಿಮ್ಮಪ್ಪನಿಗೆ ಉಡುಗೊರೆಯಾಗಿ ಕೊಡುತ್ತಾರೆ. ಕೆಲವು ಭಕ್ತರು ಟಿಟಿಡಿ ನಡೆಸುವ ಟ್ರಸ್ಟ್‌ಗಳಿಗೆ ದೇಣಿಗೆ ನೀಡುತ್ತಾರೆ. ಚಿನ್ನ, ಬೆಳ್ಳಿ, ವಾಹನಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಭಗವಂತನಿಗೆ ದಾನ ಮಾಡುತ್ತಾರೆ. ವಿಚಿತ್ರವೆನಿಸಬಹುದು ಕೆಲವು ಭಕ್ತರು ಭಕ್ತಿಯಿಂದ ತಮ್ಮ ಆಸ್ತಿಯನನ್ನೇ ಭಗವಂತನ ಮೇಲೆ ನೋಂದಾಯಿಸುವವರು ಇದ್ದಾರೆ. ಇತ್ತೀಚೆಗೆ ಭಕ್ತರೊಬ್ಬರು, ಭಕ್ತಿಯಿಂದ ತಿರುಮಲ ಶ್ರೀಗಳಿಗೆ ದುಬಾರಿ ಉಡುಗೊರೆಯನ್ನು ಅರ್ಪಿಸಿದರು.

ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಬೆಂಗಳೂರು ಭಕ್ತೆಯೊಬ್ಬರು ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ಶುಕ್ರವಾರ ದಾನವಾಗಿ ನೀಡಿದ್ದಾರೆ.

ಎಂ.ಮಹದೇವಮ್ಮ ಹೆಸರಿನ ಭಕ್ತೆ 753 ಗ್ರಾಂ ತೂಕದ ಪದಕಗಳನ್ನು ವೆಂಕಟೇಶ್ವರ ದೇಗುಲದ ಒಳಗಿನ ರಂಗನಾಯಕಕುಲ ಮಂಟಪದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ರವಿಚಂದ್ರ, ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್.ವೆಂಕಯ್ಯ ಚೌಧರಿ ಸಮ್ಮುಖ ದಾನ ನೀಡಿದರು ಎಂದು ದೇಗುಲ ನಿರ್ವಹಣಾ ಸಂಸ್ಥೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಹೇಳಿಕೆ ತಿಳಿಸಿದೆ.

ಇಲ್ಲಿಯ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಬೆಂಗಳೂರು ಭಕ್ತೆಯೊಬ್ಬರು ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ಶುಕ್ರವಾರ ದಾನವಾಗಿ ನೀಡಿದ್ದಾರೆ.ಇಲ್ಲಿಯ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಬೆಂಗಳೂರು ಭಕ್ತೆಯೊಬ್ಬರು ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ಶುಕ್ರವಾರ ದಾನವಾಗಿ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Monsoon 2026: ಈ ವರ್ಷ ಮೇ 25ಕ್ಕೇ ಕೇರಳಕ್ಕೆ ಮುಂಗಾರು ಆಗಮನ ಸಾಧ್ಯತೆ
India Latest News Live: Bengaluru devotee donation to Tirupati - ತಿರುಪತಿಗೆ ಬೆಂಗಳೂರು ಭಕ್ತೆಯಿಂದ ₹95 ಲಕ್ಷದ 7 ಚಿನ್ನದ ಪದಕ ದಾನ!