
ತಿರುವನಂತಪುರಂ (ಏ.25): ‘ವಾಡಿಕೆಯಂತೆ ಕೇರಳಕ್ಕೆ ಜೂ.1ರ ಸುಮಾರಿಗೆ ಆರಂಭವಾಗುತ್ತಿದ್ದ ಮಾನ್ಸೂನ್ ಈ ವರ್ಷ ಮೇ ಕೊನೆಯ ವಾರದಲ್ಲೇ (ಮೇ.25-ಜೂ.1) ಆರಂಭವಾಗಲಿದ್ದು, ಬಿಸಿಲಿನ ಧಗೆಗೆ ಬೇಸತ್ತಿರುವ ದಕ್ಷಿಣ ಭಾರತಕ್ಕೆ ಶೀಘ್ರವಾಗಿ ತಂಪೆರೆಯಲಿದೆ’ ಎಂದು ಯುರೋಪ್ ಹವಾಮಾನ ಮುನ್ಸೂಚನೆ ಕೇಂದ್ರ ಹೇಳಿದೆ.
ದಕ್ಷಿಣ-ಪೂರ್ವ ಅರಬ್ಬೀ ಸಮುದ್ರದಲ್ಲಿ ಬಲವಾದ ಪಶ್ಚಿಮ ಗಾಳಿಗಳು ರೂಪುಗೊಳ್ಳುವುದರಿಂದ ಕೇರಳ ಮತ್ತು ದಕ್ಷಿಣ ತಮಿಳುನಾಡು ಪ್ರದೇಶಗಳಿಗೆ ಹೆಚ್ಚಿನ ತೇವಾಂಶವುಂಟಾಗಬಹುದು. ಇದು ಸಾಧ್ಯವಾದರೆ, ಕೇರಳದಲ್ಲಿ ಮಾನ್ಸೂನ್ ಮೇ 25ರಷ್ಟು ಮುಂಚಿತವಾಗಿ ಆರಂಭವಾಗಬಹುದು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೇ 18ರಿಂದ 25ರ ನಡುವೆ, ದಕ್ಷಿಣ ಭಾರತಕ್ಕೆ ಮೇ ಕೊನೆಯ ವೇಳೆಗೆ ಮಾನ್ಸೂನ್ ತಲುಪುವ ನಿರೀಕ್ಷೆ ಇದೆ. ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮೇ 25ರಿಂದ ಜೂ.1ರವರೆಗೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ