ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಸಂಪತ್ತು ಹಂಚಿಕೆ ಮಾಡಲಿದೆ. ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಆಡಿದ ಮಾತಿನ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿರುವ ಬೆಂಗಳೂರಿನ ನ್ಯಾಯಲಯ ಇಂದು ಆದೇಶ ಪ್ರಕಟಿಸಲಿದೆ.
ಬೆಂಗಳೂರು(ಜೂ.26) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತನ್ನು ಮುಸ್ಲಿಮರಿಗೆ ಹಂಚಲಿದೆ ಎಂದಿದ್ದರು. ಈ ಹೇಳಿಕೆ ವಿರುದ್ಧ ಜಿಯಾ ಉರ್ ರೆಹಮಾನ್ ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಲಯ ಇಂದು ಆದೇಶ ಪ್ರಕಟಿಸಲಿದೆ.
18ನೇ ಲೋಕಸಭಾ ಚುನಾವಣಾ ಪ್ರಚಾರ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ವಿರುದ್ದ ಹರಿಹಾಯ್ದಿದ್ದರು. ರಾಜಸ್ಥಾನದಲ್ಲಿನ ಪ್ರಚಾರ ಭಾಷಣದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ದ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತದ ಸಂಪತನ್ನು ಮುಸ್ಲಿಮರಿಗೆ ಹಂಚಲಿದೆ ಎಂದಿದ್ದರು. ಈ ಹೇಳಿಕೆ ವಿರುದ್ದ ಹಲೆವೆಡೆ ದೂರು ದಾಖಲಾಗಿತ್ತು. ಈ ಪೈಕಿ ಜಿಯಾ ಉರ್ ರಹೆಮಾನ್ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಲೋಕಸಭಾ ಸ್ವೀಕರ್ ಆಗಿ ಓಂ ಬಿರ್ಲಾ ಆಯ್ಕೆ, ಇಂಡಿಯಾ ಕೂಟದ ಅಭ್ಯರ್ಥಿಗೆ ಸೋಲು!
ದೂರಿ ಅರ್ಜಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆ ನಡೆಸಿದೆ. ಬಳಿಕ ಜೂನ್ 26ಕ್ಕೆ ಆದೇಶ ಕಾಯ್ದಿರಿಸಿತ್ತು. ಇಂದು ಈ ಪ್ರಕರಣದ ಆದೇಶ ಪ್ರಕಟಗೊಳ್ಳಲಿದೆ. ಮೋದಿ ಪರವಾಗಿ ಆದೇಶ ಬರುತ್ತಾ, ಇಲ್ಲಾ ಮೋದಿ ವಿರುದ್ಧವಾಗಿರುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.
2006ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಮುಸ್ಲಿಮರಿಗೆ ದೇಶದ ಸಂಪನ್ಮೂಲಗಳಲ್ಲಿ ಮೊದಲ ಹಕ್ಕು ಎಂದು ಹೇಳಿದ್ದ ಹೇಳಿಕೆ ಹಾಗೂ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಯೋಜನೆಗಳನ್ನು ಉಲ್ಲೇಖಿಸಿ ಮೋದಿ ತಿರುಗೇಟು ನೀಡಿದ್ದರು. ರಾಜಸ್ಥಾನದ ಬನ್ಸ್‌ವಾರಾದಲ್ಲಿನ ಚುನಾವಣಾ ಪ್ರಚಾರದಲ್ಲಿ ಮೋದಿ ಈ ಮಾತು ಹೇಳಿದ್ದರು.
ಮೋದಿ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದರೆ, ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಮೋದಿ ಏನಿದೆಯೋ ಅದನ್ನು ಮುಚ್ಚುಮರೆ ಇಲ್ಲದೆ ನಿಷ್ಠುರವಾಗಿ ಮಾತನಾಡಿದ್ದಾರೆ ಮತ್ತು ಜನರ ಭಾವನೆಗಳನ್ನು ಪ್ರತಿಧ್ವನಿಸಿದ್ದಾರೆ ಎಂದಿತ್ತು. ಮೋದಿ ಅವರು ಪ್ರತಿಪಕ್ಷಕ್ಕೆ ಈ ಹಿಂದೆ ಎಸಗಿದ ಕೃತ್ಯಗಳ ಕನ್ನಡಿ ತೋರಿಸಿದ್ದರಿಂದ ಪ್ರತಿಪಕ್ಷಗಳು ನೋವು ಅನುಭವಿಸುತ್ತಿವೆ. ಮೋದಿ ಹೇಳಿಕೆಗಳು ಜನರಲ್ಲಿ ಪ್ರತಿಧ್ವನಿಸಿವೆ. ಏಕೆಂದರೆ, ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದವರು ಮುಸ್ಲಿಮರಾಗಿದ್ದರೆ ಅವರನ್ನು ದೇಶದ ನಾಗರಿಕರಿಗಿಂತ ಇಂಡಿಯಾ ಕೂಟದ ನಾಯಕರು ಹೆಚ್ಚು ಪ್ರೀತಿಯಿಂದ ಕಾಣುತ್ತಾರೆ’ ಎಂದಿತ್ತು.
ಜುಲೈ 2ಕ್ಕೆ ಪ್ರಧಾನಿ ಮೋದಿ ರಷ್ಯಾ ಪ್ರವಾಸ, ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ!
ಇತ್ತ ಕಾಂಗ್ರೆಸ್ ಮೋದಿ ದೇಶದಲ್ಲಿ ಸಾಮರಸ್ಯ ಒಡೆಯುತ್ತಿದ್ದಾರೆ. ಸಮುದಾಯವನ್ನು ಗುರಿಯಾಸಿ ವಾಗ್ದಾಳಿ ನಡೆಸುತ್ತಿದ್ದಾರೆ ಎಂದಿತ್ತು. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರಲಿದೆ ಎಂದು ಕಾಂಗ್ರೆಸ್ ಹೇಳಿತ್ತು.