SDG Urban index: Bengaluru ಉತ್ತಮ ಉದ್ಯೋಗ, ಆರ್ಥಿಕ ಅಭಿವೃದ್ಧಿಯಲ್ಲಿ ನಂ.1!

Kannadaprabha News   | Asianet News
Published : Nov 27, 2021, 09:03 AM IST
SDG Urban index: Bengaluru ಉತ್ತಮ ಉದ್ಯೋಗ, ಆರ್ಥಿಕ ಅಭಿವೃದ್ಧಿಯಲ್ಲಿ ನಂ.1!

ಸಾರಾಂಶ

*ನೀತಿ ಆಯೋಗದ ನಗರ ಸೂಚ್ಯಂಕದಲ್ಲಿ ಸಿಲಿಕಾನ್‌ ಸಿಟಿಗೆ ಗರಿ *56 ನಗರಗಳು ಸಮೀಕ್ಷೆಯಲ್ಲಿ ಭಾಗಿ  : ಉದ್ಯಾನ ನಗರಿ ನಂ. 1 *ಮಾನದಂಡ ಪೂರೈಸಿದ ಏಕೈಕ ನಗರ ಬೆಂಗಳೂರು

ನವದೆಹಲಿ(ನ.27): ಬೆಂಗಳೂರು (Bengaluru) ನಗರವು ದೇಶದಲ್ಲಿ ‘ಉತ್ತಮ ಉದ್ಯೋಗ  ಹಾಗೂ ಆರ್ಥಿಕ ಬೆಳವಣಿಗೆ’ಯ ಭರವಸೆ ನೀಡುವ ಏಕೈಕ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ನೀತಿ ಆಯೋಗ ಹೊಸದಾಗಿ ಬಿಡುಗಡೆ ಮಾಡಿರುವ ಮೊದಲ ‘ಸುಸ್ಥಿರ ಅಭಿವೃದ್ಧಿ ಗುರಿಗಳು-ನಗರ ಸೂಚ್ಯಂಕ’ (Sustainable Development Goals Urban Index) ವರದಿಯಲ್ಲಿ ಈ ಮಹತ್ವದ ಅಂಶವಿದೆ. ‘ಉತ್ತಮ ಉದ್ಯೋಗ (Jobd) ಹಾಗೂ ಆರ್ಥಿಕ ಬೆಳವಣಿಗೆ (Economic growth)’ ವಿಭಾಗದಲ್ಲಿ 56 ನಗರಗಳಲ್ಲಿ 100 ಅಂಕಗಳಿಗೆ ಸಮೀಕ್ಷೆ (Survey) ನಡೆಸಲಾಗಿತ್ತು. ಇದರಲ್ಲಿ ಬೆಂಗಳೂರಿಗೆ 79 ಅಂಕ ಬಂದಿದ್ದು, ಮೊದಲ ಸ್ಥಾನದಲ್ಲಿದೆ ಹಾಗೂ ಏಕೈಕ ಮುಂಚೂಣಿ ನಗರ ಎಂಬ ಹಣೆಪಟ್ಟಿಪಡೆದಿದೆ. ಇದರಿಂದಾಗಿ ದೇಶದಲ್ಲೇ ಬೆಂಗಳೂರು ನಗರವನ್ನು ಜನ ಏಕೆ ಅಷ್ಟುಇಷ್ಟಪಡುತ್ತಾರೆ ಎಂದು ಮತ್ತೊಮ್ಮೆ ಸಾಬೀತಾದಂತಾಗಿದೆ.

65ರಿಂದ 99 ಅಂಕ ಬಂದರೆ ‘ಮುಂಚೂಣಿ ನಗರ (front-runner)’, 50ರಿಂದ 64 ಅಂಕ ಪಡೆದರೆ ‘ಸಾಧಿಸಬೇಕಾಗಿರುವ ನಗರ (performers)’ ಹಾಗೂ 50ಕ್ಕಿಂತ ಕಮ್ಮಿ ಅಂಕ ಪಡೆದರೆ ‘ಆಕಾಂಕ್ಷಿ ನಗರ (aspirants)’ ಎಂದು ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. ಇದರಲ್ಲಿ ಬೆಂಗಳೂರು ಮಾತ್ರ 65 ಅಂಕ ದಾಟಿದ ಏಕೈಕ ನಗರ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಛತ್ತೀಸ್‌ಗಢದ ರಾಯ್‌ಪುರ (Raipur)  (64), ಉತ್ತರಾಖಂಡದ ಡೆಹ್ರಾಡೂನ್‌ (Dehradun) (59) ಹಾಗೂ ಗೋವಾ ರಾಜಧಾನಿ ಪಣಜಿ (Panjim) (59) ಇವೆ. ಆದರೆ ಈ ನಗರಗಳು 65 ಅಂಕ ದಾಟಿಲ್ಲ. ಹೀಗಾಗಿ ಈ ನಗರಗಳಿಗೆ ‘ಇನ್ನೂ ಸಾಧಿಸಬೇಕಾಗಿದ್ದು ಬಹಳಷ್ಟಿದೆ’ ಎಂದು ತಿಳಿಸಲಾಗಿದೆ.

Multidimensional Poverty Index : ಬಿಹಾರ, ಜಾರ್ಖಂಡ್‌, ಉತ್ತರಪ್ರದೇಶ ದೇಶದ ಅತಿ ಬಡರಾಜ್ಯಗಳು!

ಇಷ್ಟಲ್ಲದೆ, ಶಿಕ್ಷಣದ ಗುಣಮಟ್ಟ (education), ಲಿಂಗ ಸಮಾನತೆ (Gender Equality), ಸ್ವಚ್ಛ ನೀರು (Clean water) ಹಾಗೂ ನೈರ್ಮಲ್ಯ, ಕೈಗೆಟಕುವ ಹಾಗೂ ಸ್ವಚ್ಛ ಇಂದನ, ಹವಾಮಾನ ಹಾಗೂ ಶಾಂತಿ, ನ್ಯಾಯ, ಉತ್ತಮ ಸಂಸ್ಥೆಗಳು- ಎಂಬ 6 ಪ್ರತ್ಯೇಕ ಮಾನದಂಡಗಳಲ್ಲಿ ನಡೆದ ಸಮೀಕ್ಷೆಯಲ್ಲಿ ‘ಮುಂಚೂಣಿಯಲ್ಲಿರುವ ನಗರ’ ಎಂಬ ಕೀರ್ತಿ ಪಡೆದಿದೆ. ಆದರೆ, ಶೂನ್ಯ ಹಸಿವು ಸೇರಿದಂತೆ ಕೆಲವು ಕೆಟಗರಿಗಳಲ್ಲಿ ನಗರವು ಹಿಂದೆ ಬಿದ್ದಿದೆ.

ಸುಸ್ಥಿರ ಅಭಿವೃದ್ಧಿ- ಶಿಮ್ಲಾ ನಂ.1:

ಈ ನಡುವೆ, ‘ಒಟ್ಟಾರೆ ಸುಸ್ಥಿರ ಅಭಿವೃದ್ಧಿ ಕಂಡ ನಗರಗಳು’ ಎಂಬ ಪ್ರತ್ಯೇಕ ವಿಭಾಗದಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾ (Shimla) 75.5 ಅಂಕಳೊಂದಿಗೆ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ತಮಿಳುನಾಡಿನ ಕೊಯಮತ್ತೂರು (Coimbotore) (ಶೇ.73.29), ತಿರುವನಂತಪುರ  (Thiruvananthapuram) (ಶೇ.72.36) ಇವೆ.

ರಾಜ್ಯದ ಅತಿ ಬಡ ಜಿಲ್ಲೆಗಳ ಪಟ್ಟಿ ಬಿಡುಗಡೆ: ಯಾದಗಿರಿ ಮೊದಲ ಸ್ಥಾನ!

ಬಿಹಾರ, ಜಾರ್ಖಂಡ್‌, ಉತ್ತರಪ್ರದೇಶ ದೇಶದ ಅತಿ ಬಡರಾಜ್ಯಗಳು!

ನೀತಿ ಆಯೋಗದ ‘ಬಹುಆಯಾಮದ ಬಡತನ ವರದಿ’(Multidimensional Poverty Index) ಯಲ್ಲಿ ಬಿಹಾರ (Bihar), ಜಾರ್ಖಂಡ್‌ (Jharkhand) ಹಾಗೂ ಉತ್ತರ ಪ್ರದೇಶಗಳು (Uttar Pradesh) ದೇಶದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ. ಕರ್ನಾಟಕ (Karnataka) ಬಡತನದಲ್ಲಿ 19ನೇ ಸ್ಥಾನ ಪಡೆದಿದೆ. ಶುಕ್ರವಾರ ಬಿಡುಗಡೆ ಆದ ಸೂಚ್ಯಂಕ ವರದಿಯಲ್ಲಿ ಬಿಹಾರ ಅತಿ ಕಡುಬಡವ ರಾಜ್ಯ ಎಂದು ಸ್ಥಾನ ಗಿಟ್ಟಿಸಿದೆ. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ.51.91 ಬಡವರಿದ್ದಾರೆ. ನಂತರದ ಸ್ಥಾನದಲ್ಲಿ ಜಾರ್ಖಂಡ್‌ (ಶೇ.42.16 ಬಡವರು) ಹಾಗೂ ಉತ್ತರ ಪ್ರದೇಶ (ಶೇ.37.39 ಬಡವರು) ರಾಜ್ಯಗಳಿವೆ. 4 ಹಾಗೂ 5ನೇ ಸ್ಥಾನದಲ್ಲಿ ಕ್ರಮವಾಗಿ ಮಧ್ಯಪ್ರದೇಶ (ಶೇ.36.65 ಬಡವರು) ಹಾಗೂ ಮೇಘಾಲಯ (ಶೇ.32.67 ಬಡವರು) ಇವೆ. ಇದೇ ವೇಳೆ, ಕರ್ನಾಟಕ 19ನೇ ಸ್ಥಾನದಲ್ಲಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.13.16ರಷ್ಟುಜನರು ಬಡವರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್