ಬೆಂಗಳೂರಿನಿಂದ ಹೊರಟ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ, ಎಲ್ಲಾ ಪ್ರಯಾಣಿಕರು ಸುರಕ್ಷಿತ!

Published : Jun 15, 2023, 09:29 PM ISTUpdated : Jun 15, 2023, 09:34 PM IST
ಬೆಂಗಳೂರಿನಿಂದ ಹೊರಟ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ, ಎಲ್ಲಾ ಪ್ರಯಾಣಿಕರು ಸುರಕ್ಷಿತ!

ಸಾರಾಂಶ

ಬೆಂಗಳೂರಿನಿಂದ ಹೊರಟ ವಿಮಾನ ಅಹಮ್ಮದಾಬಾದ್ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಡ ಸಂಭವಿಸಿದೆ. ಅದೃಷ್ಠವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ

ಅಹಮ್ಮದಾಬಾದ್(ಜೂ.15): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಅಹಮ್ಮದಾಬಾದ್ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಆತಂಕ ಎದುರಿಸಿದೆ. ವಿಮಾನ ಬಾಲ ನೆಲಕ್ಕೆ ಬಡಿದು ಅಪಘಾತವಾಗಿದೆ. ಆದರೆ ವಿಮಾನ ಸುರಕ್ಷಿತವವಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಬೆಂಗಳೂರಿನಿಂದ ಅಹಮ್ಮಬಾದ್‌ಗೆ ಹೊರಟ ಇಂಡಿಗೋ  6E6595 ವಿಮಾನ ಲ್ಯಾಡಿಂಗ್ ಅವಘಡದಿಂದ ಆತಂಕ ಎದುರಿಸಿತ್ತು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಾಗರೀಕ ವಿಮಾನಯಾನ ಸಚಿವಾಲಯ ತನಿಖೆಗೆ ಆದೇಶಿಸಿದೆ. ಇತ್ತೀಚೆಗ ಕೋಲ್ಕತಾ ದೆಹಲಿ ವಿಮಾನ ಕೂಡ ಲ್ಯಾಡಿಂಗ್ ವೇಳೆ ಇದೇ ರೀತಿ ಆತಂಕ ಎದುರಿಸಿತ್ತು. ಅಹಮ್ಮಾದಾಬಾದ್ ನಿಲ್ದಾಣದಲ್ಲಿ ಲ್ಯಾಂಡಿಂಗ್  ಸಮಸ್ಯೆಗೆ ಪ್ರತಿಕೂಲ ಹವಾಮಾನ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಆಹಮ್ಮಾದಾಬಾದ್‌ ವಿಮಾನ ನಿಲ್ದಾಣದಲ್ಲಿ ಬಿಪೊರ್‌ಜಾಯ್ ಚಂಡಮಾರುತದ ತೀವ್ರ ಪರಿಣಾಮ ಇರಲಿಲ್ಲ ಅನ್ನೋ ವಾದವೂ ಇದೆ. ಇದೀಗ ಈ ಪ್ರಕರಣ 

Mangaluru : ವಿಮಾನಕ್ಕೆ ಹಕ್ಕಿ ಡಿಕ್ಕಿ, ಫೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅವಘಡ!

 ಬಿಪೊರ್‌ಜಾಯ್ ಚಂಡಮಾರುತದಿಂದ ಗುಜರಾತ್, ಮುಂಬೈನಲ್ಲಿ ವಿಮಾನ ಲ್ಯಾಡಿಂಗ್ ಸವಾಲಾಗುತ್ತಿದೆ. ಲಖನೌದಿಂದ ಆಗಮಿಸಿದ್ದ ವಿಮಾನ ಚಂಡಮಾರುತ ಪರಿಣಾಮ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿಲ್ಲ. 2 ಪ್ರಯತ್ನದ ಬಳಿಕ ವಿಮಾನವನ್ನು ಜೈಪುರ ನಿಲ್ದಾಣದಲ್ಲಿ ಇಳಿಸಲು ಸೂಚನೆ ನೀಡಲಾಯಿತು. 

ಇತ್ತೀಚೆಗೆ ಹವಾಮಾನ ವೈಪರಿತ್ಯದಿಂದ ವಿಮಾನ ಹಾರಾಟದಲ್ಲಿ ವ್ಯತ್ಯಾಸ, ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ವೇಳೆ ಸಮಸ್ಯೆ ಎದುರಾದ ಘಟನೆಗಳು ನಡೆದಿದೆ. 

 

ರಷ್ಯಾದಲ್ಲಿ ತುರ್ತು ಲ್ಯಾಂಡ್ ಆದ ದೆಹಲಿ To ಅಮೆರಿಕಾ ವಿಮಾನ: ನೀರು ಆಹಾರವಿಲ್ಲದೆ ಪ್ರಯಾಣಿಕರ ಪರದಾಟ

ಹವಾಮಾನ ವೈಪರಿತ್ಯದಿಂದ 30 ನಿಮಿಷ ಪಾಕ್‌ ಮೇಲೆ ಇಂಡಿಗೋ ವಿಮಾನ ಹಾರಾಟ
ಇಂಡಿಗೋ ಸಂಸ್ಥೆ ವಿಮಾನವೊಂದು ಭಾನುವಾರ ಹವಮಾನ ವೈಪರೀತ್ಯದ ಕಾರಣ ದಿಕ್ಕು ತಪ್ಪಿ ಕೆಲ ಕಾಲ ಪಾಕಿಸ್ತಾನದ ವಾಯುಸೀಮೆಯಲ್ಲಿ ಸಂಚರಿಸಿದ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ 7.30ಕ್ಕೆ ಪಂಜಾಬಿನ ಅಮೃತಸರದಿಂದ ಗುಜರಾತ್‌ನ ಅಹಮದಾಬಾದ್‌ಗೆ ಹೊರಟಿದ್ದ ವಿಮಾನವು ಹವಾಮಾನ ವೈಪರಿತ್ಯ ಇದ್ದ ಕಾರಣ ಕೆಲಕಾಲ ಪಾಕಿಸ್ತಾನದ ಲಾಹೋರ್‌ ವಾಯುಸೀಮೆಯಲ್ಲಿ ಹಾರಾಟ ನಡೆಸಿದೆ. 30 ನಿಮಿಷ ಪಾಕಿಸ್ತಾನದ ಮೇಲೆ ಹಾರಾಟ ನಡೆಸಿ ಬೆಳಗ್ಗೆ 8 ಗಂಟೆ ಭಾರತದ ವಾಯು ಸೀಮೆಗೆ ಮರಳಿ ಪ್ರವೇಶಿಸಿತು ಎಂದು ಪಾಕಿಸ್ತಾನ ಡಾನ್‌ ಪತ್ರಿಕೆ ವರದಿ ಮಾಡಿದೆ. ಕಳೆದ ತಿಂಗಳು ಪಾಕಿಸ್ತಾನ ವಿಮಾನವು ಹವಾಮಾನ ವೈಪರಿತ್ಯದ ಕಾರಣ ಭಾರತದ ವಾಯು ಸೀಮೆ ಮೇಲೆ ಹಾರಾಟ ನಡೆಸಿತ್ತು.

ಇತ್ತೀಚೆಗೆ ಗುವಾಹಟಿ-ದಿಬ್ರುಗಢ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ, ದಿಬ್ರುಗಢದ ಬದಲು ವಿಮಾನವು ಗುವಾಹಟಿಗೇ ಮತ್ತೆ ಬಂದಿಳಿದಿದೆ. ಇದರಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ರಾಮೇಶ್ವರ್‌ ತೇಲಿ ಹಾಗೂ ಅಸ್ಸಾಂನ ಇಬ್ಬರು ಬಿಜೆಪಿ ಶಾಸಕರು ಇದ್ದರು. ಅದೃಷ್ಟವಶಾತ್‌ ಜನರಿಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !