ಮಾಯಾವತಿ ಸರ್ಕಾರದ ಅಕ್ರಮ,ಸಹೋದರನಿಗೆ ಶೇ.46 ಡಿಸ್ಕೌಂಟ್‌ನಲ್ಲಿ 261 ಫ್ಲ್ಯಾಟ್ ಹಂಚಿಕೆ!

Published : Jun 15, 2023, 08:31 PM ISTUpdated : Jun 15, 2023, 08:34 PM IST
ಮಾಯಾವತಿ ಸರ್ಕಾರದ ಅಕ್ರಮ,ಸಹೋದರನಿಗೆ  ಶೇ.46 ಡಿಸ್ಕೌಂಟ್‌ನಲ್ಲಿ 261 ಫ್ಲ್ಯಾಟ್ ಹಂಚಿಕೆ!

ಸಾರಾಂಶ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಆಡಳಿತದಲ್ಲಿ ನಡೆದ ಅತೀ ದೊಡ್ಡ ಹಗರಣ ಬಯಲಾಗಿದೆ. ಸಿಎಂ ಆಗಿದ್ದ ವೇಳೆ ಮಾಯಾವತಿ ತನ್ನ ಸಹೋದರ ಹಾಗೂ ಆತನ ಪತ್ನಿಗೆ ಬರೋಬ್ಬರಿ 262 ಮನೆಯನ್ನು ಶೇಕಡಾ 46 ರಷ್ಟು ಡಿಸ್ಕೌಂಟ್ ನೀಡಿ ಹಂಚಿಕೆ ಮಾಡಲಾಗಿದೆ.

ಲಖನೌ(ಜೂ.15): ಬಹುಜನ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಮಾಯವತಿ ಆಡಳಿತದಲ್ಲಿ ನಡೆದಿರುವ ಅತೀ ದೊಡ್ಡ ಹಗರಣವೊಂದು ಬಯಲಾಗಿದೆ. ಮಾಯಾವತಿ ಮುಖ್ಯಮಂತ್ರಿ ಆಗಿದ್ದ ವೇಳೆ ತಮ್ಮ ಸಹೋದರ ಹಾಗೂ ಆತನ ಪತ್ನಿಗೆ ಬರೋಬ್ಬರಿ 261 ಫ್ಲ್ಯಾಟ್ ಹಂಚಿಕೆ ಮಾಡಲಾಗಿದೆ. 46 ಪರ್ಸೆಂಟ್ ಡಿಸ್ಕೌಂಟ್ ಮೂಲಕ ಈ ಫ್ಲ್ಯಾಟ್‌ಗಳನ್ನು ಮಾಯಾವತಿ ಅಧಿಕಾರ ಬಳಸಿ ತಮ್ಮ ಸಹೋದರನ ಕುಟುಂಬಕ್ಕೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಆಂಗ್ಲ ಮಾಧ್ಯಮ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಲಾಜಿಕ್ಸ್ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ರಿಯಲ್ ಎಸ್ಟೇಟ್ ಕಂಪನಿ ಈ ನಿವೇಶನ ಕಟ್ಟಿತ್ತು. ಆದರೆ ಇದೇ ಕಂಪನಿ 261 ಮನೆಗಳನ್ನು ಮಾಯಾವತಿ ಸಹೋದರ ಹಾಗೂ ಆತನ ಪತ್ನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದೆ. ಇದೀಗ ಲಾಜಿಕ್ಸ್ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೂ ತೂಗುಗತ್ತಿ ನೇತಾಡುತ್ತಿದೆ. 

 

ಕರ್ನಾಟಕದ ಎಲ್ಲೆಡೆ ಬಿಎಸ್ಪಿ ಸೋಲು: ಮಾಯಾವತಿ ತೀವ್ರ ಬೇಸರ

2007ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಮಾಯವಾತಿ ಆಡಳಿತದಲ್ಲಿ ಈ ಅಕ್ರಮ ನಡೆದಿದೆ. ಅಧಿಕಾರಕ್ಕೆ ಬಂದ ಬಳಿಕ ಮಾಯಾವತಿ ಸದ್ದಿಲ್ಲದೇ ಲಾಜಿಕ್ಸ್ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ರಿಯಲ್ ಎಸ್ಟೇಟ್ ಕಂಪನಿ ಸ್ಥಾಪಿಸಿದ್ದಾರೆ.  2010ರಲ್ಲಿ ನಿವೇಶನಗಳನ್ನು ಸಹೋದರ ಹಾಗೂ ಆತನ ಪತ್ನಿಗೆ ಮಾರಾಟ ಮಾಡಲಾಗಿದೆ. ನೋಯ್ಡಾದ ಬ್ಲೂಸಮ್ ಗ್ರೀನ್ ಪ್ರಾಜೆಕ್ಟ್ ಅಡಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗಿತ್ತು. ಮಾಯಾವತಿ ಸಹೋದರ ಆನಂದ್ ಕುಮಾರ್ ಎರಡು ಲಕ್ಷ ಚದರ ಅಡಿ ಒಟ್ಟು ವಿಸ್ತೀರ್ಣದ ಈ ನಿವೇಶಗಳನ್ನು ಕೇವಲ 46.02 ಕೋಟಿ ರೂಪಾಯಿಗೆ ಹಾಗೂ  ಆನಂದ್ ಕುಮಾರ್ ಪತ್ನಿ ವಿಚಿತರ್ ಲತಾ 46.92 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ರಿಯಲ್ ಎಸ್ಟೇಟ್ ಕಂಪನಿ ಸರ್ಕಾರಿ ಬೆಲೆಗಿಂತ ಅತ್ಯಂತ ಕಡಿಮೆಬೆಲೆಯಲ್ಲಿ ಮನೆಗಳನ್ನು ಮಾಯಾವತಿ ಸಹೋದರ ಹಾಗೂ ಆತನ ಪತ್ನಿಗೆ ಮಾರಾಟ ಮಾಡಲಾಗಿದೆ.  ಬ್ಲಾಸಮ್ ಗ್ರೀನ್ ಪ್ರಾಜೆಕ್ಟ್‌ನಲ್ಲಿ 2010 ರಿಂದ 2023ರ ವರೆಗೆ ಲಾಜಿಕ್ಸ್ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ 2,538 ನಿವೇಶನಗಳನ್ನು ಮಾರಾಟ ಮಾಡಿದೆ. ಇದರಲ್ಲಿ 261 ಫ್ಲ್ಯಾಟ್ ರಿಯಾಯಿತಿ ದರದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ.

 

ಬೆಂಗಳೂರು: EVM ಬಂದ ನಂತರ ಬಿಎಸ್‌ಪಿಗೆ ಸೋಲಾಯಿತು: ಮಾಯಾವತಿ!

ಒಂದು ಚದರ ಅಡಿಗೆ 4,350 ರೂಪಾಯಿ ಮಾರುಕಟ್ಟೆ ಬೆಲೆ ಇದ್ದರೂ ಮಾಯಾವತಿ ಸಹೋದರನಿಗೆ 2,300 ರೂಪಾಯಿಗೆ ಫ್ಲ್ಯಾಟ್ ಮಾರಾಟ ಮಾಡಲಾಗಿದೆ. ಬರೋಬ್ಬರಿ ಶೇಕಡಾ 46 ರಷ್ಟು ಡಿಸ್ಕೌಂಟ್ ಮೂಲಕ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಆನಂದ್ ಕುಮಾರ್‌ಗೆ ನೀಡಿರುವ ನಿವೇಶನಗಳಲ್ಲಿ 30ಕ್ಕೂ ಹೆಚ್ಚು ನಿವೇಶನ ಇತರರಿಗೆ ಮಾರಾಟ ಮಾಡಲಾಗಿದೆ. ಈ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್ ಮಾಧ್ಯಮ ದಾಖಲೆ ಸಮೇತ ವರದಿ ಪ್ರಕಟಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್