ಕೇಂದ್ರ ಬಜೆಟ್ ಬಗ್ಗೆ ತೇಜಸ್ವಿ ಸೂರ್ಯ ಶ್ಲಾಘನೆ: ಸಂಸತ್‌ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ ಸಂಸದ

Published : Feb 10, 2023, 01:07 PM ISTUpdated : Feb 10, 2023, 02:03 PM IST
ಕೇಂದ್ರ ಬಜೆಟ್ ಬಗ್ಗೆ ತೇಜಸ್ವಿ ಸೂರ್ಯ ಶ್ಲಾಘನೆ: ಸಂಸತ್‌ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ ಸಂಸದ

ಸಾರಾಂಶ

ಕೇಂದ್ರ ಬಜೆಟ್‌ ಬಗ್ಗೆ ಸಂಸತ್‌ನಲ್ಲಿ  ಭಾಷಣ ಮಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕನ್ನಡದಲ್ಲೇ ಮಾತನಾಡಿದರು.

ನವದೆಹಲಿ: ಕೇಂದ್ರ ಬಜೆಟ್‌ ಬಗ್ಗೆ ಸಂಸತ್‌ನಲ್ಲಿ  ಭಾಷಣ ಮಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕನ್ನಡದಲ್ಲೇ ಮಾತನಾಡಿದರು.  ಇದೊಂದು ಪ್ರಗತಿಶೀಲ ಬಜೆಟ್, ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ ಅವಕಾಶ ಸಿಕ್ಕಿದೆ.   ಬಿಜೆಪಿ ಸರ್ಕಾರದಲ್ಲಿ ರೈಲ್ವೆ ಡಬಲಿಂಗ್ ಎರಡು ಪಟ್ಟು ಹೆಚ್ಚಿದೆ. ರೈಲ್ವೆ ಅಭಿವೃದ್ಧಿ ಗೆ 7 650 ಕೋಟಿ ನೀಡಲಾಗಿದೆ. 9 ಪಟ್ಟು ಬಜೆಟ್ ರೈಲ್ವೆಗೆ ನೀಡಲಾಗಿದೆ. 55 ರೈಲ್ವೆ ನಿಲ್ದಾಣ ಮೇಲ್ದರ್ಜೆಏರಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. 

ಇಂದಿರಾಗಾಂಧಿ ಅವರು ಚಿಕ್ಕಮಗಳೂರಿನಲ್ಲಿ (Chikkamagaluru) ಸ್ಪರ್ಧೆ ಮಾಡುವಾಗ ಚಿಕ್ಕಮಗಳೂರು- ಕಡೂರಿಗೆ ರೈಲ್ವೆ ಯೋಜನೆ ಬೇಕು ಎಂದು ಪ್ರಸ್ತಾಪ ಮಾಡಿದರು. ಆದರೆ ಇಂದಿರಾಗಾಂಧಿ(Indira Gandhi), ರಾಜೀವ್ ಗಾಂಧಿ, ಎಲ್ಲರ ಜಮಾನ ಮುಗಿದರು ರೈಲ್ವೆ ಮಾರ್ಗ ಬರಲೇ ಇಲ್ಲ ಎಂದು ತೇಜಸ್ವಿ ವ್ಯಂಗ್ಯವಾಡಿದರು.  ಕೇಂದ್ರದ ಉಡಾನ್ ಯೋಜನೆಯಡಿ  8  ವಿಮಾನ ನಿಲ್ದಾಣಗಳ ಅಭಿವೃದ್ಧಿ ಮಾಡಲಾಗಿದೆ. ಕಾರವಾರ ನೌಕಾನೆಲೆ ಅಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಮಧ್ಯಕರ್ನಾಟಕ ಭಾಗದ ಭದ್ರ ಮೇಲ್ದಂಡೆ ಯೋಜನೆಗೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ. ಮಹಾದಾಯಿ ಯೋಜನೆಗೆ ಡಿಪಿಆರ್‌ಗೆ  ಅನುಮತಿ ನೀಡಿದೆ. ಜಲಜೀವನ್ ಮಿಷನ್ (Jal Jivan Mission)ಅಡಿ 55 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನೀರು ಬರುವಂತೆ ಮಾಡಿದ್ದು ಮೋದಿ ಸರ್ಕಾರ. 40 ವರ್ಷದಿಂದ ಪೆಡಿಂಗ್ ಇದ್ದ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಅನುಮತಿ ನೀಡಿದ್ದು ಮೋದಿ ಸರ್ಕಾರ,  40 ವರ್ಷಗಳಲ್ಲಿ ಆಗದ ಯೋಜನೆಯನ್ನು ಮೋದಿ ಸರ್ಕಾರ 40 ತಿಂಗಳಲ್ಲಿ ಮಾಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. 

ವಿಮಾನದ ಡೋರ್ ತೆರೆದಿದೆ ಎಂದಿದ್ದೇ ತಪ್ಪಾಯ್ತಾ?: ತೇಜಸ್ವಿ ಸೂರ್ಯರನ್ನು ಸಮರ್ಥಿಸಿಕೊಂಡ ಸಿ.ಟಿ. ರವಿ

ಬೆಂಗಳೂರಿನ ಹೊರವಲಯದ ರಿಂಗ್ ರೋಡ್ (ಎಸ್ ಟಿ ಆರ್ ಆರ್) ಗೆ 17 ಸಾವಿರ ಕೋಟಿ ಅನುದಾನವನ್ನು ಮೋದಿ ಸರ್ಕಾರ ಕೊಟ್ಟಿದೆ.  ಮೆಟ್ರೋ ಸಂಪರ್ಕ, ಬೆಂಗಳೂರು ವಿಮಾನ ನಿಲ್ದಾಣದ 2 ನೇ ಟರ್ಮಿನಲ್ ಅಭಿವೃದ್ಧಿ ಇವು ಮೋದಿ ಸರ್ಕಾರದ ಸಾಧನೆಗಳು ಎಂದು ಅವರು ಸಂಸತ್‌ನಲ್ಲಿ ಹೇಳಿದರು. 

ಬಿಜೆಪಿಯಲ್ಲಿ ಬಿಗ್ ಚೇಂಜ್: ರಾಜ್ಯ ನಾಯಕರಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ