ದೇಶಾದ್ಯಂತ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಒಟ್ಟು 4,92,67,373 (4.92 ಕೋಟಿ) ತಲುಪಿದ್ದು ಈ ಪೈಕಿ 2022ರ ಡಿ.31 ರಲ್ಲಿ ಎಲ್ಲ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 4.32 ಕೋಟಿ ಪ್ರಕರಣಗಳು ಬಾಕಿ ಇವೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಗೆ ತಿಳಿಸಿದರು.
ನವದೆಹಲಿ: ದೇಶಾದ್ಯಂತ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಒಟ್ಟು 4,92,67,373 (4.92 ಕೋಟಿ) ತಲುಪಿದ್ದು ಈ ಪೈಕಿ 2022ರ ಡಿ.31 ರಲ್ಲಿ ಎಲ್ಲ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 4.32 ಕೋಟಿ ಪ್ರಕರಣಗಳು ಬಾಕಿ ಇವೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಗೆ ತಿಳಿಸಿದರು.
ಅಂತೆಯೇ 2023ರ ಫೆ.1ರ ಪ್ರಕಾರ ಸುಪ್ರೀಂಕೋರ್ಟ್‌ನಲ್ಲಿ ಒಟ್ಟು 69,511, ದೇಶದ 25 ಹೈಕೋರ್ಟ್‌ಗಳಲ್ಲಿ ಒಟ್ಟು 59,87,477 ಪ್ರಕರಣಗಳು ಬಾಕಿ ಇದ್ದು ಈ ಪೈಕಿ ಅಲಹಾಬಾದ್ ಹೈಕೋರ್ಟ್ ಒಂದರಲ್ಲೇ 10.30 ಲಕ್ಷ ಪ್ರಕರಣಗಳು ಬಾಕಿ ಇದ್ದು ಇದು ದೇಶದಲ್ಲೇ ಹೆಚ್ಚು ಬಾಕಿ ಪ್ರಕರಣಗಳನ್ನೊಳಗೊಂಡ ನ್ಯಾಯಾಲಯವಾಗಿದೆ. ಕೇವಲ 171 ಪ್ರಕರಣಗಳ ಮೂಲಕ ಸಿಕ್ಕಿಂ ಹೈಕೋರ್ಟ್ ಕಡಿಮೆ ಪ್ರಕರಣ ಇರುವ ನ್ಯಾಯಾಲಯವೆನಿಸಿದೆ.
ಸುಪ್ರೀಂಕೋರ್ಟ್‌ಗೆ 5 ಜಡ್ಜ್‌ಗಳ ನೇಮಕ: ಸುಪ್ರೀಂ ಅತೃಪ್ತಿ ಬೆನ್ನಲ್ಲೇ ಕೇಂದ್ರ ಸರ್ಕಾರ ಅಸ್ತು