ಇಡಿ ಮೇಲೆ ಅಟ್ಯಾಕ್‌ ಬಳಿಕ ನಾಪತ್ತೆಯಾದ ಟಿಎಂಸಿ ನಾಯಕ: ಕುಟುಂಬ ಸಮೇತ ಎಸ್ಕೇಪ್; ಲುಕ್‌ಔಟ್‌ ನೋಟಿಸ್‌ ಜಾರಿ

Published : Jan 06, 2024, 08:50 PM IST
ಇಡಿ ಮೇಲೆ ಅಟ್ಯಾಕ್‌ ಬಳಿಕ ನಾಪತ್ತೆಯಾದ ಟಿಎಂಸಿ ನಾಯಕ: ಕುಟುಂಬ ಸಮೇತ ಎಸ್ಕೇಪ್; ಲುಕ್‌ಔಟ್‌ ನೋಟಿಸ್‌ ಜಾರಿ

ಸಾರಾಂಶ

ರೇಡ್‌ ಸಮಯದಲ್ಲಿ ಶಹಜಹಾನ್‌ ಶೇಖ್‌ ಮನೆಯಲ್ಲಿದ್ದರು. ಆದರೆ, ತನಿಖಾ ಸಂಸ್ಥೆ ಅಧಿಕಾರಿಗಳ ಮೇಲೆ ದಾಳಿಯ ನಂತರ ಅವರು ತಮ್ಮ ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊಸದಿಲ್ಲಿ (ಜನವರಿ 6, 2024): ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಜಾರಿ ನಿರ್ದೇಶನಾಲಯ ಅಥವಾ ಇಡಿ ತಂಡದ ಮೇಲೆ ಉದ್ರಿಕ್ತ ಗುಂಪು ದಾಳಿ ಮಾಡಿದ ಘಟನೆ ನಡೆದಿತ್ತು. ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ವಿರುದ್ಧ ಇಡಿ ರೇಡ್‌ ನಡೆಸಲು ಹೋಗಿದ್ದವರ ಮೇಲೆ ಈ ದಾಳಿ ನಡೆದಿತ್ತು. ಆದರೆ, ಈ ದಾಳಿ ಬಳಿಕ ರೇಡ್‌ಗೊಳಗಾದ ಟಿಎಂಸಿ ನಾಯಕ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಈ ಹಿನ್ನೆಲೆ ಶಹಜಹಾನ್‌ ಶೇಖ್‌ ಕೇಂದ್ರೀಯ ತನಿಖಾ ಸಂಸ್ಥೆ ಟಿಎಂಸಿ ನಾಯಕ ಶೇಖ್‌ಗೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ರೇಡ್‌ ಸಮಯದಲ್ಲಿ ಶಹಜಹಾನ್‌ ಶೇಖ್‌ ಮನೆಯಲ್ಲಿದ್ದರು. ಆದರೆ, ತನಿಖಾ ಸಂಸ್ಥೆ ಅಧಿಕಾರಿಗಳ ಮೇಲೆ ದಾಳಿಯ ನಂತರ ಅವರು ತಮ್ಮ ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: ತನಿಖೆಗೆ ತೆರಳಿದ್ದಾಗ ಮಾರಣಾಂತಿಕ ಹಲ್ಲೆ ಬಂಗಾಳದಲ್ಲಿ ಇಡಿ ಮೇಲೆಯೇ ದಾಳಿ!

ತೃಣಮೂಲ ಕಾಂಗ್ರೆಸ್‌ ನಾಯಕ ಬಾಂಗ್ಲಾದೇಶಕ್ಕೆ ಪಲಾಯನ ಮಾಡಲು ಪ್ರಯತ್ನಿಸಿದರು. ಆದರೆ ಗಡಿ ಭದ್ರತಾ ಪಡೆ ಮತ್ತು ಬಾಂಗ್ಲಾದೇಶ ರೈಫಲ್ಸ್‌ನಿಂದ ಗಡಿಯಲ್ಲಿ ಕಟ್ಟುನಿಟ್ಟಿನ ಕಾವಲು ಇದ್ದ ಕಾರಣ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಬಾಂಗ್ಲಾದೇಶದಲ್ಲಿ ಭಾನುವಾರ ಮತದಾನ ನಡೆಯಲಿದೆ. ಈ ಹಿನ್ನೆಲೆ ಶೇಖ್ ಮತ್ತು ಅವರ ಕುಟುಂಬದವರು ಪಶ್ಚಿಮ ಬಂಗಾಳದಲ್ಲೇ ಎಲ್ಲೋ ಅಡಗಿಕೊಂಡಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ಊಹಿಸಿದೆ. 

ಪಡಿತರ ವಿತರಣೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ಸಂಸ್ಥೆಯ ತಂಡವು ತೃಣಮೂಲ ನಾಯಕನ ನಿವಾಸದ ಮೇಲೆ ರೇಡ್‌ ಮಾಡಿತ್ತು. ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಬಂಧನಕ್ಕೊಳಗಾಗಿದ್ದ ರಾಜ್ಯ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ಆಪ್ತ ಸಹಾಯಕ ಶೇಖ್ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಾಜಿ ಕಾಂಗ್ರೆಸ್ ಶಾಸಕ, INLD ಎಂಎಲ್‌ಎ ಮನೆ ಮೇಲೆ ಇಡಿ ರೇಡ್: 5 ಕೋಟಿ ನಗದು, 300 ಬಂದೂಕು, ಚಿನ್ನ ವಶಕ್ಕೆ

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ತನ್ನ ಶೋಧ ತಂಡದ ಮೇಲೆ ಉದ್ರಿಕ್ತ ಗುಂಪು ದಾಳಿ ಮಾಡಿತ್ತು. ಈ ವೇಳೆ ತನ್ನ ಮೂವರು ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿದೆ. ಮತ್ತು ಅವರ ವೈಯಕ್ತಿಕ ವಸ್ತುಗಳಾದ ಮೊಬೈಲ್ ಫೋನ್‌ಗಳು ಮತ್ತು ವ್ಯಾಲೆಟ್‌ಗಳನ್ನು ಸಹ ಕಸಿದುಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಥವಾ ಇಡಿ ಹೇಳಿದೆ.

ಅಲ್ಲದೆ, ಟಿಎಂಸಿ ನಾಯಕನ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಆ ಸಮಯದಲ್ಲಿ ಮೊಬೈಲ್ ಲೊಕೇಷನ್‌  ಮನೆಯೊಳಗೆ ಇದ್ದುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಸತತ 3ನೇ ಬಾರಿ ಇಡಿ ಸಮನ್ಸ್‌ ತಪ್ಪಿಸಿಕೊಂಡ ಅರವಿಂದ್ ಕೇಜ್ರಿವಾಲ್‌: ದೆಹಲಿ ಸಿಎಂಗೆ ಬಂಧನ ಭೀತಿ?

ಆ ವೇಳೆ, ಇಡಿ ತಂಡಕ್ಕೆ ಅರ್ಧ ಗಂಟೆಯೊಳಗೆ ಸುಮಾರು 800-1,000 ಜನರ ಗುಂಪು ತಮ್ಮ ಕೈಯಲ್ಲಿ ಲಾಠಿ, ಕಲ್ಲು, ಇಟ್ಟಿಗೆ ಮುಂತಾದ ಆಯುಧಗಳೊಂದಿಗೆ ಅವರ ಕಡೆಗೆ ಸಾಗಲು ಪ್ರಾರಂಭಿಸಿತು ಮತ್ತು ಇಡಿ ಅಧಿಕಾರಿಗಳು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ತಂಡಕ್ಕೆ ಘೇರಾವ್ ಹಾಕಿತು ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
 .
 ಈ ದಾಳಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರು ರಾಜ್ಯವು "ಬನಾನಾ ರಿಪಬ್ಲಿಕ್‌" ಅಲ್ಲ ಎಂದು ಹೇಳಿದರೆ, ಬಿಜೆಪಿ ಈ ದಾಳಿಯನ್ನು "ಫೆಡರಲ್ ರಚನೆಯ ಮೇಲಿನ ನೇರ ದಾಳಿ" ಎಂದು ಬಣ್ಣಿಸಿದೆ. ಮಿತ್ರಪಕ್ಷವಾದ ಕಾಂಗ್ರೆಸ್ ಸಹ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವಂತೆ ಒತ್ತಾಯಿಸಿತು.ಆದರೆ, ಈ ವೇಳೆ ಇಡಿ ಅಧಿಕಾರಿಗಳು ಸ್ಥಳೀಯರನ್ನು ಪ್ರಚೋದಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ