PubG Couple: ಪಬ್‌ಜಿ ಲವರ್ಸ್‌ ಪ್ರೇಮ್‌ ಕಹಾನಿ: ಬಂಗಾಳದ ಯುವಕನನ್ನು ವರಿಸಿದ ಕರ್ನಾಟಕದ ಕುವರಿ!

By Suvarna News  |  First Published Jan 12, 2022, 1:28 PM IST

ಪಬ್‌ಜಿ ಗೇಮ್‌ನಿಂದಾಗಿ  ಹಲವಾರು ಒಳ್ಳೆಯ ಮತ್ತು ಕೆಟ್ಟ ಘಟನೆಗಳು ಸಂಭವಿಸಿವೆ. ಈಗ ಈ ಆಟವು ಎರಡು ವಿಭಿನ್ನ ರಾಜ್ಯಗಳ ಪ್ರೇಮಿಗಳನ್ನು ಒಂದುಗೂಡಿಸುವಲ್ಲಿ ಯುಶಸ್ವಿಯಾಗಿದೆ. 


ಪಶ್ಚಿಮ ಬಂಗಾಳ(ಜ. 12): ಪಬ್‌ಜಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಕೆಲ ದಿನಗಳ ಹಿಂದೆ ಸಾಕಷ್ಟು ಹವಾ ಸೃಷ್ಟಿಸಿದ್ದ ಪಬ್‌ಜಿ, ಗೇಮಿಂಗ್ ದುನಿಯಾದಲ್ಲಿ (Gaming Market)‌ ರಾರಾಜಿಸಿತ್ತು. ಬಹಳಷ್ಟು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಡಿಯೊ ಗೇಮ್ (Video Game) ಪಬ್‌ಜಿಯನ್ನು ಆಡುತ್ತಿದ್ದರು. ಇದು ಕೆಲವರಿಗೆ ಹವ್ಯಾಸವಾಗಿ ಬೆಳದಿದ್ದಷ್ಟೇ ಅಲ್ಲದೇ ಅನೇಕರು ಇದರಿಂದ ಲಕ್ಷಾಂತರ ಹಣ ಗಳಿಸಿದ್ದರು. ಆದರೆ ಚೀನಾದೊಂದಿಗಿನ ಸಂಪರ್ಕದಿಂದಾಗಿ ಈ ರೀತಿಯ ಅಪ್ಲಿಕೇಶನ್‌ಗಳಿಂದ ಇರುವ ಅಪಾಯವನ್ನು ಉಲ್ಲೇಖಿಸಿ ಭಾರತ ಸರ್ಕಾರವು ಪಬ್‌ಜಿ ಮೊಬೈಲ್ (PubG Mobile) ಅನ್ನು ನಿಷೇಧಿಸಿತ್ತು. ನಂತರ PubG: New State ಕೂಡ ಬಿಡುಗಡೆಯಾಗಿತ್ತು. ಪಬ್‌ಜಿ ಗೇಮ್‌ನಿಂದಾಗಿ  ಹಲವಾರು ಒಳ್ಳೆಯ ಮತ್ತು ಕೆಟ್ಟ ಘಟನೆಗಳು ಸಂಭವಿಸಿವೆ. ಈಗ ಈ ಆಟವು ಎರಡು ವಿಭಿನ್ನ ರಾಜ್ಯಗಳ ಪ್ರೇಮಿಗಳನ್ನು ಒಂದುಗೂಡಿಸುವಲ್ಲಿ ಯುಶಸ್ವಿಯಾಗಿದೆ. 

ಹೌದು! ಪಶ್ಚಿಮ ಬಂಗಾಳದ (West Bengal) ಧುಪ್ಗುರಿ ನಿವಾಸಿ ಸೈನೂರ್ ಆಲಂ (Sainur Alam) ನಿಯಮಿತವಾಗಿ ಪಬ್ಜಿ ಆಡುತ್ತಿದ್ದರು. ಆಟ ಆಡುವಾಗ ಕರ್ನಾಟಕದ (Karnataka) ಫ್ರಿಜಾ (Friza) ಎಂಬ ಮಹಿಳೆಯ ಪರಿಚಯವಾಗಿತ್ತು. ಆಟ ಆಡುವಾಗ ಇಬ್ಬರೂ ಮೊದಲು ಸ್ನೇಹಿತರಾದರು. ನಂತರ, ಅವರು ತಮ್ಮ ಭಾವನೆಗಳನ್ನು ಅರಿತುಕೊಂಡಾಗ, ಅವರು ಫೋನ್‌ ನಂಬರ್ಸ್‌ ವಿನಿಮಯ ಮಾಡಿಕೊಂಡರು ಮತ್ತು ಗಂಟೆಗಳ ಕಾಲ ಫೋನ್ನಲ್ಲಿ ಪರಸ್ಪರ ಮಾತನಾಡುತ್ತಿದ್ದರು. ಇದು ಹೀಗೆ ಕೆಲ ದಿನಗಳ ಕಾಲ ಮುಂದುವರೆದಿತ್ತು. 

Tap to resize

Latest Videos

undefined

ಇದನ್ನೂ ಓದಿ: ನೂರಾರು ಜನರ ಜೀವ ಉಳಿಸಿದ ಪಬ್ ಜಿ, ಆಡೋರಿಗೆ ಇನ್ನುಂದೆ ಬೈಯಂಗಿಲ್ಲ!

ಕೆಲ ತಿಂಗಳ ಹಿಂದೆ ಇಬ್ಬರೂ  ಪರಸ್ಪರ ತಮ್ಮ ಭಾವನೆಗಳನ್ನು ಅರಿತು ಪ್ರೇಮ ನಿವೇದನೆ ಮಾಡಿದ್ದರು, ಆದರೆ ಈ ಮೊದಲು ಇವರಿಬ್ಬರೂ ಯಾವುತ್ತು ಮುಖಾಮುಖಿಯಾಗಿರಲಿಲ್ಲ. ಶನಿವಾರ ಈ ಪಬಜಿ ಪ್ರೇಮಿಗಳ ಭೇಟಿಗೆ ಡೇಟ್‌ ಫಿಕ್ಸ್‌ ಆಗಿತ್ತು. ಫ್ರಿಜಾ ಬೆಂಗಳೂರಿನಿಂದ ಬಾಗ್ದೋಗ್ರಾ ಮೂಲಕ ವಿಮಾನದಲ್ಲಿ ಧುಪ್ಗುರಿಗೆ (Dhupguri) ಬಂದಿಳಿದಿದ್ದರು.  ಮನೆಯ ಕಾಲಿಂಗ್‌ ಬೆಲ್ ಸದ್ದು ಕೇಳಿ ಬಾಗಿಲು ತೆರೆದಿದ್ದ ಸೈನೂರ್‌ಗೆ ಅಚ್ಚರಿ ಕಾದಿತ್ತು. ಪಬ್‌ ಜಿ ಆಟದ ಮೂಲಕ ಪರಿಚಯವಾಗಿದ್ದ ಗೆಳತಿ ತನ್ನ ಮನೆ ಮುಂದೆ ನಿಂತಿದನ್ನು ನೋಡಿ ಸೈನೂರ್‌ ಶಾಕ್‌ ಆಗಿದ್ದರು.  “ಫ್ರಿಜಾ ನನ್ನ ಮುಂದೆ ನಿಂತಿರುವುದನ್ನು ನೋಡಿದಾಗ ನನಗೆ ಅಚ್ಚರಿಯಾಯಿತು. ನಾನು ಇದನ್ನು ನಿರೀಕ್ಷಿಸಿರಲಿಲ್ಲ" ಎಂದು ಸೈನೂರ್‌ ಹೇಳಿದ್ದಾರೆ.

'ಇಲ್ಲಿಗೆ ಬರಬಹುದೆಂದು ಊಹಿಸಿರಲಿಲ್ಲ'

ಮೊದಲಿಗೆ, ಸೈನೂರ್ ಅವರ ಕುಟುಂಬ ಸದಸ್ಯರು ಕೂಡ ಇದು ನಂಬಲಿಲ್ಲ. ಪ್ರೀತಿಗೊಸ್ಕರ ಫ್ರಿಜಾ 2554 ಕಿಲೋಮೀಟರ್ ದಾಟಿ ಇಲ್ಲಿಗೆ ಬರಬಹುದೆಂದು ಅವರು ಊಹಿಸಿರಲಿಲ್ಲ. ಆದರೆ ಪಬ್‌ಜಿ ಜೋಡಿ ಕೊನೆಗೂ ಒಂದಾಯಿತು.  ಫ್ರಿಜಾ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿ ಇಬ್ಬರು ವಿವಾಹವಾದರು. ಆಟದಿಂದ ಗ್ರಾಮಕ್ಕೆ ಸೊಸೆ ಸಿಕ್ಕಿದ್ದಕ್ಕೆ ಸ್ಥಳೀಯರಾದ ಮಕ್ಬೂಲ್ ಹೊಸೈನ್ ಮತ್ತು ಫಿರೋಜ್ ಹೊಸೇನ್ ಸಂತಸ ವ್ಯಕ್ತಪಡಿಸಿದ್ದಾರೆ. “ನಾಲ್ಕು ವರ್ಷಗಳ ಸಂಬಂಧವು ಪಬ್‌ಜಿಯಿಂದ ಸಾಧ್ಯವಾಯಿತು. ನಾವು ತುಂಬಾ ಸಂತೋಷವಾಗಿದ್ದೇವೆ." ಎಂದು ಸೈನೂರ್ ಅವರ ತಂದೆ ಹೇಳಿದ್ದಾರೆ

click me!