ಭಾರತದ ಜೊತೆ ಕ್ಯಾತೆ ನಡುವೆಯೇ ಮಾಲ್ಡೀವ್ಸ್‌ ಅಧ್ಯಕ್ಷರಿಂದ ಚೀನಾ ಭೇಟಿ

By Santosh Naik  |  First Published Jan 6, 2024, 11:17 PM IST

ಹಲವು ವಿಚಾರಗಳಲ್ಲಿ ಭಾರತದ ಜೊತೆಗಿನ ಕ್ಯಾತೆಯ ನಡುವೆ ಮಾಲ್ಡೀವ್ಸ್‌ ದೇಶದ ಅಧ್ಯಕ್ಷ ಐದು ದಿನಗಳ ಕಾಲ ಚೀನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಬೀಜಿಂಗ್‌ ಅಧಿಕೃತವಾಗಿ ತಿಳಿಸಿದೆ.
 


ನವದೆಹಲಿ (ಜ.6):  ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಅವರು ಜನವರಿ 8 ರಿಂದ 12 ರವರೆಗೆ ಚೀನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಪುಟ್ಟ ದ್ವೀಪರಾಷ್ಟ್ರವಾದ ಮಾಲ್ಡೀವ್ಸ್‌ಗೆ ಭಾರತ ಬೃಹತ್‌ ನೆರೆಯ ದೇಶವಾಗಿದ್ದರೂ, ಭಾರತದ ಕಣ್ಣು ಕೆಂಪಾಗುವ ರೀತಿಯಲ್ಲಿ ಮಾಲ್ಡೀವ್ಸ್‌ ಅಧ್ಯಕ್ಷರ ಚೀನಾ ಭೇಟಿ ನಿಗದಿಯಾಗಿದೆ. ಆದರೆ, ಈ ಕುರಿತಾಗಿ ಮಾಲೆಯಲ್ಲಿರುವ ಅಧ್ಯಕ್ಷೀಯ ಕಚೇರಿಯಾಗಲಿ, ವಿದೇಶಾಂಗ ಇಲಾಖೆಯಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಹಿಂದೂ ಮಹಾಸಾಗರದ ನಡುವೆ ಇರುವ ದ್ವೀಪ ಸಮೂಹ ರಾಷ್ಟ್ರದಲ್ಲಿ ಕಳೆದ ನವೆಂಬರ್‌ನಲ್ಲಿ ದೊಡ್ಡ ಬದಲಾವಣೆಯಾಗಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ವಿರೋಧಿ ಧೋರಣೆ ಹೊಂದಿರುವ ಮೊಹಮದ್ ಮುಯಿಝು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಚುನಾವಣೆಯ ವೇಳೆ ತಮ್ಮ ಪ್ರಣಾಳಿಕೆಯಲ್ಲಿಯೇ, ದೇಶದ 'ಭಾರತ ಮೊದಲು' ಎನ್ನುವ ನಿಯಮವನ್ನು ಬದಲಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಅಧಿಕಾರ ಹಿಡಿದ ಕೆಲವೇ ಗಂಟೆಗಳಲ್ಲಿ ದೇಶದಲ್ಲಿದ್ದ 75 ಭಾರತೀಯ ಮಿಲಿಟರಿ ಸಿಬ್ಬಂದಿಯ ಪಡೆಯನ್ನು ಮಾಲ್ಡೀವ್ಸ್‌ ತೊರೆಯುವಂತೆ ಸೂಚನೆ ನೀಡಿದ್ದರು.

ಇನ್ನು ಮಾಲ್ಡೀವ್ಸ್‌ ಅಧ್ಯಕ್ಷ  ಮುಯಿಝು ಅವರು ಚೀನಾಕ್ಕೆ ಭೇಟಿ ನೀಡುವ ಕುರಿತಾಗಿ ಭಾರತ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದ ವಿದೇಶಾಂಗ ಇಲಾಖೆ, ಇದು ನಮಗೆ ಸಂಬಂಧಪಟ್ಟ ವಿಚಾರವಲ್ಲ ಎಂದು ಹೇಳಿದೆ. 'ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಯಾರೊಂದಿಗೆ ಇರಬೇಕು, ಯಾರೊಂದಿಗೆ ಇರಬಾರದು ಎನ್ನುವುದು ಆ ದೇಶದ ನಿರ್ಧಾರಕ್ಕೆ ಬಿಟ್ಟ ವಿಚಾರ' ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ. ಅದರೊಂದಿಗೆ ದ್ವೀಪರಾಷ್ಟ್ರದಲ್ಲಿ ಭಾರತದ ಮಿಲಿಟರಿ ಸಿಬ್ಬಂದಿಗಳನ್ನು ಹೊರಹಾಕಲಾಗಿದೆ ಎನ್ನುವ ವಿಚಾರವಾಗಿ ಹೆಚ್ಚಿನ ಅಪ್‌ಡೇಟ್‌ ಲಭ್ಯವಿಲ್ಲ ಎಂದು ರರಿಳಿಸಿದ್ದಾರೆ.

ಭಾರತ ಹಾಗೂ ಚೀನಾ ಎರಡೂ ದೇಶಗಳು ಕೂಡ ಪುಟ್ಟ ರಾಷ್ಟ್ರದ ಮೇಲೆ ತನ್ನ ಪ್ರಭಾವ ಇರುವಂತೆ ಪ್ರಯತ್ನ ಮಾಡುತ್ತಿದೆ. ಈ ನಡುವೆ ಮೊಹಮದ್ ಮುಯಿಝು ಸರ್ಕಾರ ಹೆಚ್ಚಾಗಿ ಚೀನಾ ಪರ ಒಲವು ಹೊಂದಿದೆ ಎನ್ನುವುದು ಈಗಾಗಲೇ ಗೊತ್ತಾಗಿದೆ.

Tap to resize

Latest Videos

ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿಯ ಪ್ರಕಾರ,  ಚೀನಾದ 1.3 ಬಿಲಿಯನ್‌ ಯುಎಸ್‌ ಡಾಲರ್‌ ಸಾಲದ ಹೊರೆಯಲ್ಲಿ ಮಾಲ್ಡೀವ್ಸ್‌ ದೇಶವಿದೆ. ಮಾಲ್ಡೀವ್ಸ್‌ ದೇಶಕ್ಕೆ ವಿದೇಶಿ ಸಾಲ ನೀಡುವ ದೊಡ್ಡ ದೇಶ ಚೀನಾ. ಪುಟ್ಟ ದೇಶದಲ್ಲಿ ಒಟ್ಟಾರೆ ಸಾರ್ವಜನಿಕ ಸಾಲದಲ್ಲಿ ಚೀನಾದ ಪಾಲು ಶೇ. 20ರಷ್ಟಾಗಿದೆ.

ಭಾರತದೊಂದಿಗೆ ಬೆರೆಯಲು ಮಾಲ್ಡೀವ್ಸ್ ಅಧ್ಯಕ್ಷ ಮನಸ್ಸು ತೋರುತ್ತಿಲ್ಲ. ಅವರ ನಿರ್ಧಾರಗಳು ಕೂಡ ಭಾರತದೊಂದಿಗೆ ಅಂತರ ಕಾಯ್ದುಕೊಳ್ಳುವುದೇ ಮುಖ್ಯ ಎಂದು ತೋರಿಸುತ್ತಿದೆ. ಚೀನಾದ ಜೊತೆಗೆ ನಿಕಟ ಸಂಬಂಧಕ್ಕಾಗಿ ಅವರು ಹಾತೊರೆಯುತ್ತಿದ್ದಾರೆ. ಇದು ಭಾರತದ ಆತಂಕಕ್ಕೆ ಕಾರಣವಾಗಬಹುದು ಎಂದು ಸಾಗರ ನೀತಿ ಉಪಕ್ರಮದ ಮುಖ್ಯಸ್ಥ ಅಭಿಜಿತ್ ಸಿಂಗ್ ನವದೆಹಲಿಯ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಥಿಂಕ್ ಟ್ಯಾಂಕ್‌ನಲ್ಲಿ ತಿಳಿಸಿದ್ದಾರೆ. ನವದೆಹಲಿಗೂ ಮೊದಲು ಅವರು ಬೀಜಿಂಗ್‌ಗೆ ಭೇಟಿ ನೀಡುತ್ತಿರುವುದು, ಬಹುಶಃ ಅವರ ಅವಧಿಯಲ್ಲಿ ಭಾರತಕ್ಕಿಂತ ಚೀನಾವೇ ಮಾಲ್ಡೀವ್ಸ್‌ಗೆ ಮುಖ್ಯ ಎನ್ನುವುದನ್ನು ತೋರಿಸಿದೆ ಎಂದಿದ್ದಾರೆ.

ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್‌ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್‌ ಉತ್ತರ!

ಹಿಂದಿನ ಮಾಲ್ಡೀವ್ಸ್‌ ಅಧ್ಯಕ್ಷರು ತಾವು ಚುನಾಯಿತರಾದ ಬಳಿಕ ಮೊದಲಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಮೊಹಮದ್ ಮುಯಿಝು ಮಾತ್ರ ಭಾರತದ ಜೊತೆ ಕೆಟ್ಟ ಸಂಬಂಧ ಹೊಂದಿರುವ ಟರ್ಕಿಗೆ ಮೊದಲ ಭೇಟಿ ನೀಡಿದ್ದರು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಒಪಿ28 ಸಭೆಯ ನಡುವೆ ಯುಎಇಯಲ್ಲಿ ಭೇಟಿಯಾಗಿದ್ದರು. 

Photos: ನೀವೆಷ್ಟೇ ಲಕ್ಷ ಖರ್ಚು ಮಾಡಿದ್ರೂ, ಲಕ್ಷದ್ವೀಪದ ಸೌಂದರ್ಯ ನಿಮಗೆಲ್ಲೂ ಸಿಗದು..

click me!