
ಅನಾರೋಗ್ಯ ಮತ್ತು ವಿಕಲಾಂಗತೆಯ ನಟನೆ ಮಾಡಿ ಸಾರ್ವಜನಿಕರ ಸಹಾನುಭೂತಿ ಗಿಟ್ಟಿಸಿಕೊಂಡು ಭಿಕ್ಷೆ ಬೇಡುವ ಕಪಟಿಗಳ ನಾಟಕಕ್ಕೆ ಕೊನೆಯೇ ಇಲ್ಲದಂತಾಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ತೀವ್ರ ವೈರಲ್ ಆಗುತ್ತಿದ್ದು, ಪಾರ್ಶ್ವವಾಯುಬಂದಂತೆ ನಟಿಸುತ್ತಿದ್ದ ಭಿಕ್ಷುಕನೊಬ್ಬ ಇಂಜೆಕ್ಷನ್ ಕೊಡಲು ಬಂದ ಯುವಕನನ್ನು ನೋಡಿ ಕ್ಷಣಾರ್ಧದಲ್ಲಿ ಎದ್ದು ಓಟ ಕಿತ್ತ ಘಟನೆ ನೆಟ್ಟಿಗರ ನಗುವಿಗೆ ಕಾರಣವಾಗಿದೆ.
ವೈರಲ್ ಆಗಿರುವ ಈ ವೀಡಿಯೊದಲ್ಲಿ, ‘ಮೊಹಮ್ಮದ್ ತೋಹಾ 09’ ಎಂಬ ಯೂಸರ್ ಕ್ಯಾಮೆರಾ ಹಿಡಿದು ರಸ್ತೆ ಬದಿಯಲ್ಲಿ ಕುಳಿತಿದ್ದ ಭಿಕ್ಷುಕನ ಬಳಿಗೆ ತೆರಳುತ್ತಾನೆ. ಆತ ಆ ಭಿಕ್ಷುಕನಿಗೆ ನಿಮಗೆ ಪಾರ್ಶ್ವವಾಯು ಯಾವಾಗ ಬಂತು? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೀರಿ? ವೈದ್ಯರು ಏನು ಹೇಳಿದರು? ಎಂದು ಸರಣಿ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾನೆ. ಈ ವೇಳೆ ಉತ್ತರ ನೀಡಲಾಗದೆ ತಬ್ಬಿಬ್ಬಾದ ಭಿಕ್ಷುಕ, ತನ್ನದೇ ಹೇಳಿಕೆಗಳನ್ನು ಬದಲಾಯಿಸುತ್ತಾ ಗೊಂದಲಕ್ಕೊಳಗಾಗುತ್ತಾನೆ.
ಆ ವ್ಯಕ್ತಿ ನಟಿಸುತ್ತಿರುವುದನ್ನು ತಕ್ಷಣವೇ ಊಹಿಸಿದ ಯುವಕ, ತನ್ನ ಬಳಿಯಿದ್ದ ಇಂಜೆಕ್ಷನ್ ಸೂಜಿಯೊಂದನ್ನು ಹೊರತೆಗೆದು, ನಿಮಗೆ ಯಾಕೆ ತೊಂದರೆ? ಈ ಇಂಜೆಕ್ಷನ್ ತಗೊಳ್ಳಿ, ತಕ್ಷಣವೇ ನಿಮ್ಮ ಕಾಯಿಲೆ ಸಂಪೂರ್ಣವಾಗಿ ಗುಣವಾಗುತ್ತದೆ! ಎಂದು ಪ್ರೀತಿಯಿಂದಲೇ ಚುಚ್ಚುಮದ್ದು ನೀಡಲು ಮುಂದಾಗುತ್ತಾನೆ.
ಅಷ್ಟೇ! ಅಲ್ಲಿಯವರೆಗೆ ಅಸಹಾಯಕನಂತೆ ಕುಳಿತಿದ್ದ ಭಿಕ್ಷುಕ, ಇಂಜೆಕ್ಷನ್ ಸೂಜಿಯನ್ನು ನೋಡುತ್ತಿದ್ದಂತೆಯೇ ಯಾವ ಕೋಲು ಇಲ್ಲ, ಕಾಲ ನೋವು ಇಲ್ಲ ನೆಟ್ಟಗೆ ಎದ್ದು ಒಂದೇ ಉಸಿರಿನಲ್ಲಿ ಒಲಿಂಪಿಕ್ ಅಥ್ಲೀಟ್‌ನಂತೆ ಸ್ಥಳದಿಂದ ಓಟ ಕಿತ್ತಿದ್ದಾನೆ. ಆತನ ಈ ಹಠಾತ್ ಜಂಪ್ ಮತ್ತು ಓಟವನ್ನು ಕಂಡು ವಿಡಿಯೋ ಮಾಡುತ್ತಿದ್ದ ಯುವಕನಿಗೂ ನಗು ತಡೆಯಲಾಗಲಿಲ್ಲ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಕಪಟಿ ಭಿಕ್ಷುಕನ ಬಣ್ಣ ಬಯಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಳಕೆದಾರರು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಒಬ್ಬ ಬಳಕೆದಾರ, ವೈದ್ಯರು ಪಾರ್ಶ್ವವಾಯು ಗುಣಪಡಿಸಲು ವರ್ಷಗಟ್ಟಲೆ ಸಮಯ ತಗೋತಾರೆ, ಆದ್ರೆ ಈ ಬ್ರದರ್ ಸೂಜಿ ತೋರಿಸಿದ ತಕ್ಷಣ ಆತ ಒಲಿಂಪಿಕ್ ಓಟಗಾರನಾದ! ಎಂದು ಹಾಸ್ಯ ಮಾಡಿದ್ದಾರೆ.
ಇನ್ನೊಬ್ಬರು, ಒಂದೇ ಸೆಕೆಂಡಿನಲ್ಲಿ ರೋಗಿಯನ್ನು ಗುಣಪಡಿಸಿ ಓಡುವಂತೆ ಮಾಡಿದ ಈ ಯುವಕನಿಗೆ ವೈದ್ಯಕೀಯ ಕ್ಷೇತ್ರದ ‘ನೋಬೆಲ್ ಪ್ರಶಸ್ತಿ’ ನೀಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ಒಂದು ನಿಮಿಷ ಆತ ನೆಲದ ಮೇಲಿದ್ದ, ಮರುಕ್ಷಣವೇ ಟ್ರೈನ್ ಹಿಡಿಯುವಂತೆ ಓಡುತ್ತಿದ್ದಾನೆ. ಆತನ ಮುಖ್ಯ ಆದಾಯದ ಮೂಲಕ್ಕೇ ಕನ್ನ ಹಾಕಿದಂತಾಯಿತು! ಎಂದು ವ್ಯಂಗ್ಯವಾಡಿದ್ದಾರೆ.
ಸುಳ್ಳು ಅನಾರೋಗ್ಯದ ನೆಪ ಒಡ್ಡಿ ಸಾರ್ವಜನಿಕರನ್ನು ಮೂರ್ಖರನ್ನಾಗಿಸುವ ಕಪಟಿಗಳ ನೈಜ ಬಣ್ಣವನ್ನು ಬಯಲು ಮಾಡಲು ಇದು ಸೂಕ್ತ ಮಾರ್ಗ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ