
ಸೋಶಿಯಲ್ ಮೀಡಿಯಾದಲ್ಲಿ ಮನಮುಟ್ಟುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಬೆಂಕಿಗೆ ಆಹುತಿಯಾಗಲಿದ್ದ ಕರಡಿ ಮರಿಯನ್ನು ಕಾಪಾಡಿದ್ದಾರೆ. ತನ್ನ ಕೆಲಸ ಮುಗಿದ ಬಳಿಕ ಆವ್ಯಕ್ತಿ ಹೊರಡಲನುವಾದಾಗ ನಡೆದ ದೃಶ್ಯ ಮಾತ್ರ ಬಹುತೇಕರ ಕಣ್ಣಂಚಿನಲ್ಲಿ ನೀರು ತರಿಸಿದೆ.
ಹೌದು ತನ್ನನ್ನು ಕಾಪಾಡಿದ ವ್ಯಕ್ತಿ ಹೊರಡಲು ಸಿದ್ಧವಾಗುತ್ತಿರುವುದನ್ನು ಕಂಡ ಕರಡಿ ಮರಿ ಕೂಡಲೇ 'ನನ್ನನ್ನು ಕಾಪಾಡಿದ ನೀ ಎಲ್ಲಿಗೂ ಹೋಗಬೇಡ' ಎಂದು ಬೇಡಿಕೊಳ್ಳುವಂತೆ ಆ ವ್ಯಕ್ತಿಯ ಕಾಲನ್ನು ಗಟ್ಟಿಯಾಗಿ ಹಿಡಿದು ತಡೆದಿದೆ. ಈ ವಿಡಿಯೋ ನೆಟ್ಟಿಗರನ್ನು ಭಾವುಕರನ್ನಾಗಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.
ಕರಡಿ ಮರಿಯ ಈ ಪ್ರೀತಿ ಕಂಡ ಆ ವ್ಯಕ್ತಿ ಕೊಂಚ ಸಮಯ ಅದರೊಂದಿಗೆ ಆಡಿ ಅಲ್ಲೇ ಉಳಿದುಕೊಂಡಿದ್ದಾರೆ. ಜೂಲಿ ಎಂಬವರು ಈ ವಿಡಿಯೋ ಟ್ವೀಟ್ ಮಾಡಿದ್ದು 'ಬೆಂಕಿಯಿಂದ ಕರಡಿ ಮರಿಯನ್ನು ಈ ವ್ಯಕ್ತಿ ಕಾಪಾಡಿದ್ದಾರೆ. ಹೀಗಾಗಿ ಕರಡಿ ಮರಿ ಅವರನ್ನು ಹೋಗಲು ಬಿಡಲಿಲ್ಲ' ಎಂದು ಬರೆದಿದ್ದಾರೆ.
ಜನವರಿ 1ರಂದು ಶೇರ್ ಮಾಡಿಕೊಂಡಿರುವ ಈ ವಿಡಿಯೋ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರೀ ಪ್ರಮಾಣದಲ್ಲಿ ಶೇರ್ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ