ಸೆರಂನಿಂದ 10 ಕೋಟಿ ಅಗ್ಗದ ಲಸಿಕೆ!

By Kannadaprabha NewsFirst Published Aug 8, 2020, 7:30 AM IST
Highlights

10 ಕೋಟಿ ಕೊರೋನಾ ಲಸಿಕೆ ತಯಾರಿಗೆ ಸೆರಂ ಸಂಸ್ಥೆ ಒಪ್ಪಂದ| ಭಾರತ ಸೇರಿ 92 ಬಡ-ಮಧ್ಯಮ ಆದಾಯದ ದೇಶಗಳಿಗೆ ಪೂರೈಕೆ| ಕೇವಲ 225 ರು.ಗೆ ಸಿಗಲಿದೆ ಒಂದು ಡೋಸ್‌ ಕೊರೋನಾ ಲಸಿಕೆ

ನವದೆಹಲಿ(ಆ.08): ಪುಣೆಯಲ್ಲಿರುವ ಪ್ರಸಿದ್ಧ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕಂಪನಿ ಜಾಗತಿಕ ಮಟ್ಟದಲ್ಲಿ ಸಂಶೋಧಿಸಲ್ಪಡುತ್ತಿರುವ ಎರಡು ಮುಂಚೂಣಿ ಕೊರೋನಾ ಲಸಿಕೆಗಳ 10 ಕೋಟಿ ಡೋಸ್‌ ಉತ್ಪಾದಿಸಲು ಗವಿ ಮತ್ತು ಬಿಲ್‌ ಆ್ಯಂಡ್‌ ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆಸ್ಟ್ರಾಜೆನೆಕಾ ಮತ್ತು ನೋವಾವ್ಯಾಕ್ಸ್‌ ಕಂಪನಿಗಳು ಸಂಶೋಧಿಸುತ್ತಿರುವ ಕೊರೋನಾ ಲಸಿಕೆಗಳು ಯಶಸ್ವಿಯಾದರೆ ಅವು ಸೆರಂ ಕಂಪನಿಯಲ್ಲಿ ಉತ್ಪಾದನೆಯಾಗಿ ಭಾರತವೂ ಸೇರಿದಂತೆ 92 ಬಡ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ಪೂರೈಕೆಯಾಗಲಿವೆ. ಒಂದು ಡೋಸ್‌ ಲಸಿಕೆಗೆ ಸೆರಂ ಕಂಪನಿ ಗರಿಷ್ಠ 3 ಡಾಲರ್‌ (ಸುಮಾರು 225 ರು.) ದರ ನಿಗದಿಪಡಿಸಿದೆ.

ಕೊರೋನಾಗೆ ಪರಿಣಾಮಕಾರಿಯಾದ ಲಸಿಕೆ ಕಂಡುಹಿಡಿದಿದ್ದೇವೆ; ಸಿಹಿ ಸುದ್ದಿ ನೀಡಿದ ಇಸ್ರೇಲ್!

ಆಸ್ಟ್ರಾಜೆನೆಕಾ ಮತ್ತು ನೋವಾವ್ಯಾಕ್ಸ್‌ ಕಂಪನಿಗಳು ಸಂಶೋಧನೆ ನಡೆಸುತ್ತಿರುವ ಕೋವ್ಯಾಕ್ಸ್‌ ಲಸಿಕೆ ಬಹುತೇಕ ಕೊನೆಯ ಹಂತದಲ್ಲಿದ್ದು, ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದ ಒಪ್ಪಿಗೆ ದೊರೆತ ತಕ್ಷಣ ಸೆರಂನಲ್ಲಿ ಉತ್ಪಾದನೆ ಆರಂಭವಾಗಲಿದೆ. ಬಹುತೇಕ 2021ರ ಮೊದಲರ್ಧದಲ್ಲಿ ಈ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ.

ಕೊರೋನಾ ಸಾವಿನ ಪ್ರಮಾಣ ಇಳಿಸೋಕೆ ಕೇಜ್ರಿ ಸರ್ಕಾರ ಮಾಡಿದ ಪ್ಲಾನ್ ಇದು..!

ಜಗತ್ತಿನ ಬೇರೆ ಬೇರೆ ದೇಶಗಳನ್ನು ಕಾಡುತ್ತಿರುವ ನಾನಾ ರೋಗಗಳನ್ನು ತಡೆಯಲು ನೀಡಲಾಗುವ ಎಲ್ಲಾ ಲಸಿಕೆಗಳ ಪೈಕಿ ಶೇ.70ರಷ್ಟುಲಸಿಕೆಗಳು ಭಾರತದ ಸೆರಂ ಕಂಪನಿಯಲ್ಲಿ ತಯಾರಾಗುತ್ತವೆ ಎಂದು ಹೇಳಲಾಗಿದೆ. ಈಗ ಕೊರೋನಾಗೂ ಲಸಿಕೆ ತಯಾರಿಸಲು ಸೆರಂ ತುದಿಗಾಲಿನಲ್ಲಿ ನಿಂತಿದ್ದು, ಬೇರೆ ಬೇರೆ ದೇಶಗಳಲ್ಲಿ ಲಸಿಕೆಯ ಸಂಶೋಧನೆ ನಡೆಸುತ್ತಿರುವ ಔಷಧ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

click me!