
ಸಾಮಾನ್ಯವಾಗಿ ಬಹುತೇಕರು ಇನ್ನೇನು ನೈಸರ್ಗಿಕ ಕರೆ ತುರ್ತಾಗಿದೆ ಅಂತ ಅನಿಸಿದಾಗಲೇ ಟಾಯ್ಲೆಟ್ ಕಡೆ ಮುಖ ಮಾಡುತ್ತಾರೆ. ಹೀಗೆ ಹೋಗುವರು ಟಾಯ್ಲೆಟ್‌ನಲ್ಲಿ ಕೂರುವ ಮೊದಲು ಒಮ್ಮೆ ಸರಿಯಾಗಿ ಪರಿಶೀಲನೆ ಮಾಡುವುದು ಒಳಿತು ಏಕೆ ಅಂತೀರಾ ಈ ಸ್ಟೋರಿ ನೋಡಿ...
ಮಳೆಗಾಲ ಆರಂಭವಾಗುತ್ತಿದ್ದಂತೆ ಹಾವು ಹುಳ ಹುಪ್ಪಟೆಗಳ ಹಾವಳಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಹಾವುಗಳು ಶೂ, ಮಂಚದ ಅಡಿಯ ಖಾಲಿ ಜಾಗ, ಖಾಲಿ ಡಬ್ಬಿ ಪಾತ್ರೆ,, ವಾಹನಗಳ ಒಳಭಾಗದ ಸಂಕೀರ್ಣ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಕಡೆ ಹಾವು ಟಾಯ್ಲೆಟ್ ಬೇಸಿನ್ ಒಳಗಿನಿಂದ ಬುಶ್ ಬುಶ್ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮನೆಯ ಟಾಯ್ಲೆಟ್ ಬೇಸಿನ್ ಒಳಭಾಗದಿಂದ ಮನೆ ಮಂದಿಗೆ ಬುಸುಗುಡುವಂತೆ ಸದ್ದು ಕೇಳಿದೆ. ಹೀಗಾಗಿ ಇದೇನಿರಬಹುದು ಎಂದು ಅವರು ಟಾಯ್ಲೆಟ್ ಒಳಭಾಗದಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಅದು ನೀರಿನ ಸದ್ದಂತೂ ಆಗಿರಲಿಲ್ಲ. ಅಲ್ಲಿ ಹಾವೊಂದು ಬುಸುಗುಡುತ್ತಿತ್ತು. ಕೂಡಲೇ ಅವರು ಹಾವು ಹಿಡಿಯುವುದಕ್ಕೆ ಪ್ರಸಿದ್ಧಿ ಪಡೆದಿರುವ ಶೀತಲ್ ಕಸರ್ ಎಂಬುವವರನ್ನು ಕರೆಸಿದ್ದಾರೆ.
ಭಾರತದಲ್ಲಿ ವಾಸುಕಿ ಸರ್ಪ ಇದ್ದದ್ದು ಸುಳ್ಳಲ್ಲ ಅಂತಾಯ್ತು! ಈಗ ಅದರ 3 ಕತೆ ಓದಿ
ಶೀತಲ್ ಹಾವು ಹಿಡಿಯುವುದರಲ್ಲಿ ಎಕ್ಸ್‌ಫರ್ಟ್ ಆಗಿದ್ದು, ಮನೆಯ ಟಾಯ್ಲೆಟ್ ಒಳಗಿನಿಂದ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಈ ವೀಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಜೊತೆಗೆ ಅವರು ಈ ವೀಡಿಯೋದಲ್ಲಿ ಈ ಹಾವು ವಿಷಕಾರಿಯಲ್ಲ, 9 ರಿಂದ 10 ಅಡಿ ಉದ್ದ ಇತ್ತು ಎಂದು ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಈ ಹಾವು ನಿಧಾನವಾಗಿ ಟಯ್ಲೆಟ್ ಬೇಸಿನ್‌ನಿಂದ ಹೊರಗೆ ಬರುವುದನ್ನು ಕಾಣಬಹುದಾಗಿದೆ. ಅದು ಹೊರಗೆ ಬರುತ್ತಿದ್ದಂತೆ ಮನೆಯವರು ಕೂಡ ಅದರ ಉದ್ದವನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಈ ವೇಳೆ ಹಾವು ಹಿಡಿಯುವ ಶೀತಲ್ ಅವರು ಹಾವನ್ನು ಧೈರ್ಉವಾಗಿ ಕೈಯಲ್ಲಿ ಹಿಡಿದು ಮನೆಯಿಂದ ಹೊರಗೆ ತಂದು ಚೀಲದಲ್ಲಿ ತುಂಬಿಸಿದ್ದಾರೆ. ಇತ್ತ ಶೀತಲ್ ಧೈರ್ಯವನ್ನು ನೋಡಿ ಅನೇಕರು ಅಚ್ಚರಿ ಪಟ್ಟಿದ್ದಾರೆ.
ಪವಾಡವಾಗುವ ನಂಬಿಕೆ: ಹಾವು ಕಚ್ಚಿ ಮೃತನಾದ ಯುವಕನ ಶವ ಗಂಗೆಯಲ್ಲಿ ಮುಳುಗಿಸಿಟ್ಟ ಪೋಷಕರು
ಈ ಹಾವುಗಳು ಉದ್ದವಾಗಿ ಇಲಾಸ್ಟಿಕ್ ದೇಹವನ್ನು ಹೊಂದಿದ್ದು, ಹಲವು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇವುಗಳ ಮುಖದ ಮೇಲೆ ಹೊಲಿಗೆಗಳಂತಹ ಕಪ್ಪು ಗೆರೆಗಳಿರುತ್ತವೆ ಮತ್ತು ಅವು ತುಂಬಾ ಚುರುಕಾಗಿ ಚಲಿಸುತ್ತವೆ. ಈ ಹಾವುಗಳು ಮುಖ್ಯವಾಗಿ ಮಾಟೆ ಗುಹೆಗಳಲ್ಲಿ ಮತ್ತು ಜನವಸತಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಹಾವುಗಳು ವಿಷಕಾರಿಯಲ್ಲ ಮತ್ತು ಸಾಮಾನ್ಯವಾಗಿ ಇಲಿಗಳು ಮತ್ತು ಕಪ್ಪೆಗಳನ್ನು ತಿನ್ನುತ್ತವೆ ಎಂದು ಶೀತಲ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ