
ಬೆಂಗಳೂರು (ಜು.17): ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸಲು ಮಹಾ ಘಟಬಂಧನ್ 2ನೇ ಸಭೆಯನ್ನು ನಡೆಸುತ್ತಿರುವ ಪ್ರತಿಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಔತಣಕೂಟವನ್ನು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲ ಊಟ, ತಿಂಡಿಗಳನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿಯೂ ಚಿಕನ್, ಮಟನ್ ಸೇರಿ ಮಾಂಸಾಹಾರಕ್ಕೆ ಆದ್ಯತೆ ನೀಡಲಾಗಿದೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ನಾಯಕರಿಗೆ ಔತಣಕೂಟದಲ್ಲಿ ಭರ್ಜರಿ ಖಾದ್ಯಗಳ ಊಟ ಸಿದ್ಧವಾಗಿದೆ. ರಾಜ್ಯದ ಬಾಣಸಿಗರು ಎಲ್ಲ ಪ್ರತಿಪಕ್ಷಗಳ ನಾಯಕರಿಗೆ ವೆರೈಟಿ ತಿನಿಸುಗಳನ್ನ ಸಿದ್ಧಪಡಿಸಿದ್ದಾರೆ. ನಾಳೆ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿರುವ ನಾಯಕರಿಗೆ ತಿನಿಸುಗಳ ಪಟ್ಟಿಯ ಹೆರಸನ್ನು ಕೇಳಿದರೆ ನಿಮ್ಮ ಬಾಯಲ್ಲಿ ನೀರೂರುವುದು ಖಚಿತವಾಗಿದೆ. ದಕ್ಷಿಣ ಭಾರತ, ಉತ್ತರ ಭಾರತದ ಖಾದ್ಯಗಳ ಜೊತೆ ಈ ವಿಶೇಷವಾಗಿ ಈಶಾನ್ಯ ಭಾರತದ ಆಹಾರಗಳನ್ನು ಕೂಡ ಸಿದ್ಧಪಡಿಸಲಾಗಿದೆ. ಗಣ್ಯರಿಗೆ ಸಸ್ಯಾಹಾರದ ಜೊತೆಗೆ ಮಾಂಸಾಹಾರದ ಊಟದ ವ್ಯವಸ್ಥೆ ಮಾಡಲಾಗಿದೆ.
ರಾಹುಲ್ ಗಾಂಧಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ, ಮೈತ್ರಿ ಸಭೆಗೂ ಮುನ್ನವೇ ಶಾಕ್ ನೀಡಿದ ಕಾಂಗ್ರೆಸ್!
ಜೆಡಿಎಸ್ ಮುಳುಗಿ ಹೋಗಿದೆ ಎಂಬ ಭ್ರಮೆಯಲ್ಲಿದ್ದಾರೆ: ಮಹಾಘಟಬಂಧನ್ ಸಭೆಗೆ ಹೆಚ್‌ಡಿಕೆ ಟಾಂಗ್
ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿ: ದೇಶದಲ್ಲಿ ಬಿಜೆಪಿ ಹೊರತಾದ ಪಕ್ಷದಿಂದ ಬೇರೊಬ್ಬ ನಾಯಕರು ಅಧಿಕಾರ ಹಿಡಿಯಲು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿರುವ ವಿಪಕ್ಷಗಳು ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಬಿಹಾರದ ಸಭೆ ಬಳಿಕ ಇದೀಗ 2ನೇ ಸುತ್ತಿನ ಮಹಾ ಸಭೆ ಇಂದು(ಜು.17) ಹಾಗೂ ನಾಳೆ(ಜು.18) ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕೆಲವೇ ಹೊತ್ತಲ್ಲಿ ಸಭೆ ಆರಂಭಗೊಳ್ಳುತ್ತಿದೆ. ಆದರೆ ಈ ಸಭೆಗೂ ಮುನ್ನವೇ ಕಾಂಗ್ರೆಸ್ ದಾಳ ಉರುಳಿಸಿದೆ. ವಿಪಕ್ಷಗಳ ಮೈತ್ರಿ ಕೂಟದಲ್ಲಿ ರಾಹುಲ್ ಗಾಂಧಿಯ ಪ್ರಮುಖ ನಾಯಕ. ಹೀಗಾಗಿ ರಾಹುಲ್ ಗಾಂಧಿಯೇ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ. ಈ ಹೇಳಿಕೆ ಇದೀಗ ಮೈತ್ರಿ ಸಭೆಗೂ ಮುನ್ನವೇ ಮಿತ್ರ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ