ಪ್ರಿಯತಮನನ್ನು ಮದುವೆಯಾಗಲು ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿದ ಯುವತಿ

Published : May 31, 2022, 10:04 PM ISTUpdated : May 31, 2022, 10:39 PM IST
ಪ್ರಿಯತಮನನ್ನು ಮದುವೆಯಾಗಲು ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿದ ಯುವತಿ

ಸಾರಾಂಶ

ಬಾಂಗ್ಲಾದೇಶದ ಯುವತಿಯೊಬ್ಬಳ ತನ್ನ ಗೆಳೆಯನನ್ನು ಮದುವೆಯಾಗಲು ಗಡಿಯುದ್ದಕ್ಕೂ ಈಜಿಕೊಂಡು ಭಾರತವನ್ನು ತಲುಪಿದ್ದಾಳೆ

ನವದೆಹಲಿ (ಮೇ 31):  22 ವರ್ಷದ ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದ ತನ್ನ ಗೆಳೆಯನನ್ನು ಮದುವೆಯಾಗಲು ಗಡಿಯುದ್ದಕ್ಕೂ ಈಜಿಕೊಂಡು ಭಾರತವನ್ನು ತಲುಪಿದ್ದಾಳೆ. ಯುವತಿ ಸುಂದರ್‌ಬನ್‌ನ ದಟ್ಟ ಕಾಡುಗಳ ಮೂಲಕ ಧೈರ್ಯದಿಂದ ಸಾಗಿ  ಸುಮಾರು ಒಂದು ಗಂಟೆ ಈಜಿ ತನ್ನ ಪ್ರೀಯತಮನೊಂದಿಗೆ ಒಂದಾಗಲು ಭಾರತವನ್ನು ಪ್ರವೇಶಿಸಿದ್ದಾಳೆ. ಬಾಂಗ್ಲಾದೇಶದ ಮಹಿಳೆಯನ್ನು ಕೃಷ್ಣ ಮಂಡಲ್ ಎಂದು ಗುರುತಿಸಲಾಗಿದ್ದು, ಅಭಿಕ್ ಮಂಡಲ್ ಅವರನ್ನು ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಆಕೆ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಅಕ್ರಮವಾಗಿ ಗಡಿ ದಾಟಲು ನಿರ್ಧರಿಸಿದ್ದಳು

ಕೃಷ್ಣ ರಾಯಲ್ ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾದ ಸುಂದರಬನ್ಸ್‌ಗೆ ಮೊದಲು ಪ್ರವೇಶಿಸಿ, ನಂತರ ಅವಳು ತನ್ನ ಗಮ್ಯಸ್ಥಾನವನ್ನು ತಲುಪಲು ನದಿಯಲ್ಲಿ ಸುಮಾರು ಒಂದು ಗಂಟೆ ಈಜಿದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಮುಂದಾಗಿದ್ದೇನು?: ಮೂರು ದಿನಗಳ ಹಿಂದೆ, ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಕೃಷ್ಣ ಅಭಿಕ್ ಅವರನ್ನು ವಿವಾಹವಾದರು. ಆದರೆ, ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಸೋಮವಾರ ಬಂಧಿಸಲಾಯಿತು. ಕೃಷ್ಣ ಅವರನ್ನು ಬಾಂಗ್ಲಾದೇಶ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿಪುಟ್ಟ ಕಂದನ ಬೆನ್ನಿಗೆ ಕಟ್ಟಿ ಕಸಗುಡಿಸುವ ಮಹಿಳೆ, ತಾಯಿ ಸ್ವಾವಲಂಬಿ ಬದುಕಿಗೆ ಜನರ ಸಲಾಂ!

ಈ ವರ್ಷದ ಆರಂಭದಲ್ಲಿ, ಬಾಂಗ್ಲಾದೇಶದ ಹದಿಹರೆಯದ ಯುವಕನೊಬ್ಬ ಭಾರತದಿಂದ ಚಾಕೊಲೇಟ್ ಖರೀದಿಸಲು ಗಡಿಯುದ್ದಕ್ಕೂ ಈಜಿ ಬಂದಿದ್ದ ಘಟನೆ ವರದಿಯಾಗಿತ್ತು. ಎಮಾನ್ ಹೊಸೈನ್ ಎಂಬ ಯುವಕ ಸಣ್ಣ ನದಿಯನ್ನು ದಾಟಿ ತನ್ನ ನೆಚ್ಚಿನ ಚಾಕೊಲೇಟ್ ಬಾರ್ ಪಡೆಯಲು ಬೇಲಿಯಲ್ಲಿದ್ದ ರಂಧ್ರದ ಮೂಲಕ ಭಾರತದ ಗಡಿಯನ್ನು ದಾಟಿದ್ದ. ಬಳಿಕ ಎಮಾನ್ ಹೊಸೈನ್‌ನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿತ್ತು, ನಂತರ ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಯುವಕನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ಸಿಇಒ ವಜಾಕ್ಕೆ ಕೇಂದ್ರ ಸೂಚನೆ ಸಾಧ್ಯತೆ
ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ