ಹಾರಾಟದ ನಡುವೆ ಬಾಂಗ್ಲಾದೇಶ ವಿಮಾನ ಪೈಲೆಟ್‌ಗೆ ಹೃದಯಾಘಾತ, ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ!

By Suvarna NewsFirst Published Aug 27, 2021, 3:54 PM IST
Highlights
  • ಭಾರತದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬಾಂಗ್ಲಾದೇಶ ವಿಮಾನ
  • ಪೈಲೆಟ್‌ಗೆ ತೀವ್ರ ಹೃದಯಾಘಾತ, ನೆರವು ಕೇಳಿದ ಬಾಂಗ್ಲಾಗೆ ಭಾರತ ಸಹಾಯ
  • ನಾಗ್ಪುರದಲ್ಲಿ ಭೂಸ್ಪರ್ಶಕ್ಕೆ ಅನುವು ಮಾಡಿಕೊಟ್ಟ ಭಾರತ

ನಾಗ್ಪುರ(ಆ.27): ಕಳವಳಕಾರಿ ಬೆಳವಣಿಗೆಯೊಂದು ಏರ್‌ಲೈನ್ಸ್‌ನಲ್ಲಿ ನಡೆದಿದೆ. ಮಾಸ್ಕೋದಿಂದ ಬಾಂಗ್ಲಾದೇಶದ ಢಾಕಾಗೆ ಪ್ರಯಾಣ ಬೆಳೆಸಿದ್ದ ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನದ ಪೈಲೈಟ್‌ಗೆ ಹಾರಾಟದ ಮಧ್ಯೆ ತೀವ್ರ ಹೃದಯಾಘಾತಾಗಿದೆ. ನೆರವು ಕೇಳಿದ ಬಾಂಗ್ಲಾದೇಶಕ್ಕೆ ಭಾರತ ತುರ್ತು ಭೂಸ್ಪರ್ಶ ಮಾಡಲು ಅನುವು ಮಾಡಿಕೊಟ್ಟಿದೆ.

ಭಾರತ ಮೂಲಕ ಆಫ್ಗಾನ್ ಪ್ರವೇಶಕ್ಕೆ ಬಾಂಗ್ಲಾ ಮೂಲಭೂತವಾದಿಗಳ ಸರ್ಕಸ್; ಗಡಿಯಲ್ಲಿ ಹೈ ಅಲರ್ಟ್!

ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನ ಯಾವುದೇ ಸಮಸ್ಯೆ ಇಲ್ಲದೆ ಸಾಗಿತ್ತು. ಆದರೆ ಹಾರಾಟದ ನಡುವೆ ಕ್ಯಾಪ್ಟನ್‌ಗೆ ತೀವ್ರ ಹೃದಯಾಘಾತವಾಗಿದೆ. ಬೇರೆ ದಾರಿ ಕಾಣದ ಸಹ ಪೈಲೆಟ್ ನೇರವಾಗಿ ಕೋಲ್ಕತಾ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ನೆರವು ನೀಡಬೇಕಾಗಿ ಮನವಿ ಮಾಡಿದ್ದಾರೆ.

ಬಾಂಗ್ಲಾದೇಶ ಮನವಿಗೆ ಸ್ಪಂದಿಸಿದ ಭಾರತ, ನಾಗ್ಪುರ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಂಗ್ಲಾದೇಶ ವಿಮಾನ ತುರ್ತು ಭೂಸ್ಪರ್ಶಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಪರಿಣಾಣ ಬಾಂಗ್ಲಾದೇಶ ವಿಮಾನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಫ್ಲೈಟ್‌ ಕ್ಯಾನ್ಸಲ್‌ : 10 ಲಕ್ಷ ಡಾಲರ್‌ ಬಂಪರ್‌ ಲಾಟರಿ!

ಲ್ಯಾಂಡ್ ಆದ ಬೆನ್ನಲ್ಲೇ ತಕ್ಷಣವೇ ಹೃದಯಾಘಾತಕ್ಕೊಳಗಾದ ಪೈಲೆಟನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕ್ಯಾಪ್ಟನ್ ಆರೋಗ್ಯ ಮಾಹಿತಿ ಹೊರಬಿದ್ದಿಲ್ಲ. ಇತ್ತ ಬಾಂಗ್ಲಾದೇಶ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.

ಕೊರೋನಾ ವೈರಸ್ ಕಾರಣ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಭಾರತ ಹಾಗೂ ಬಾಂಗ್ಲಾದೇಶ ಸ್ಥಗಿತಗೊಳಿಸಿದೆ. ಇದರ ನಡುವೆ ತುರ್ತು ಕಾರಣಕ್ಕಾಗಿ ಬಾಂಗ್ಲಾದೇಶ ವಿಮಾನ ಲ್ಯಾಂಡ್ ಆಗಲು ಅವಕಾಶ ಮಾಡಿಕೊಟ್ಟಿದೆ. 

click me!