
ಢಾಕಾ (ಏ.26): ಕೊರೋನಾದ 2ನೇ ಅಲೆಯ ಭೀಕರತೆ ಪರಿಣಾಮ ಏ.14ರಿಂದಲೇ ಭಾರತದ ಜೊತೆಗಿನ ವಿಮಾನ ಸೇವೆಗೆ ನಿಷೇಧ ಹೇರಿದ ಬಾಂಗ್ಲಾದೇಶ ಇದೀಗ 2 ವಾರಗಳ ಕಾಲ ಭಾರತಕ್ಕೆ ಹೊಂದಿಕೊಂಡಿರುವ ತನ್ನೆಲ್ಲಾ ಗಡಿಗಳನ್ನು 2 ವಾರಗಳ ಕಾಲ ಬಂದ್ ಮಾಡಿದೆ.
ಕೊರೋನಾದ 2ನೇ ಅಲೆಯ ತೀವ್ರತೆ ಹೆಚ್ಚಿರುವ ಕಾರಣಕ್ಕೆ 2 ವಾರ ಕಾಲ ಉಭಯ ದೇಶಗಳ ಮಧ್ಯೆಯ ಮಾನವ ಸಂಚಾರ ಸೇರಿದಂತೆ ಎಲ್ಲಾ ಚಟುವಟಿಕೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಕೊರೋನಾ 2ನೇ ಅಲೆ; ಕನೆಡಾ ವಿಮಾನ ಪ್ರಯಾಣ ರದ್ದುಗೊಳಿಸಿದ ಏರ್ ಇಂಡಿಯಾ
ಆದರೆ ಸರಕು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ತಿಳಿಸಿದ್ದಾರೆ.
14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...
ಈಗಾಗಲೇ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗಿದ್ದು ಸಾವಿನ ಸಂಖ್ಯೆಯೂ ಮಿತಿ ಮೀರಿದೆ. ಭಾರತದಲ್ಲಿ ಮಹಾಮಾರಿ ಅಟ್ಟಹಾಸ ಅತ್ಯಂತ ವಿಕೋಪದ ಹಂತಕ್ಕೆ ತಲುಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ