ರೈಲ್ವೆ ಪರೀಕ್ಷೆಯಲ್ಲಿ ಜನಿವಾರದ ಜೊತೆ ಕರಿಮಣಿ, ಕಾಲುಂಗುರಕ್ಕೂ ಕುತ್ತು: ಅಭ್ಯರ್ಥಿಗಳು ನಿರಾಳ

Published : Apr 28, 2025, 01:13 PM ISTUpdated : Apr 28, 2025, 03:38 PM IST
ರೈಲ್ವೆ ಪರೀಕ್ಷೆಯಲ್ಲಿ ಜನಿವಾರದ ಜೊತೆ ಕರಿಮಣಿ, ಕಾಲುಂಗುರಕ್ಕೂ ಕುತ್ತು: ಅಭ್ಯರ್ಥಿಗಳು ನಿರಾಳ

ಸಾರಾಂಶ

ರೈಲ್ವೆ ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಹುದ್ದೆಯ ಪರೀಕ್ಷಾರ್ಥಿಗಳು ಧಾರ್ಮಿಕ ಸಂಕೇತಗಳನ್ನು ತೆಗೆಯಬೇಕೆಂಬ ಸುತ್ತೋಲೆ ವಿವಾದ ಸೃಷ್ಟಿಸಿತ್ತು. ಮಂಗಳಸೂತ್ರ, ಜನಿವಾರ ತೆಗೆಯುವಂತೆ ಪ್ರವೇಶಪತ್ರದಲ್ಲಿ ಉಲ್ಲೇಖವಿತ್ತು. ಆದರೆ, ಸಚಿವ ಸೋಮಣ್ಣ ಸದ್ಯ ಈ ನಿಯಮವಿಲ್ಲ ಎಂದಿದ್ದಾರೆ. ಸಂಸದ ಬ್ರಿಜೇಶ್ ಚೌಟ ರೈಲ್ವೆ ಸಚಿವರ ಗಮನ ಸೆಳೆದ ಬಳಿಕ ಈ ನಿರ್ಧಾರ ಬಂದಿದೆ.

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಕ್ರಮ ತೀವ್ರ ವಿವಾದಕ್ಕೆ ಒಳಗಾಗಿರುವ ಮಧ್ಯೆಯೇ, ಇದೀಗ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ ವಿವಾದ ಸೃಷ್ಟಿಸಿದೆ. ನಾಳೆಯಿಂದ ಅಂದ್ರೆ ಏಪ್ರಿಲ್​ 29ರಿಂದ ರೈಲ್ವೆ ಇಲಾಖೆಯ ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಹುದ್ದೆಗೆ ಪರೀಕ್ಷೆ ಆರಂಭವಾಗಲಿದ್ದು,  ಪ್ರವೇಶ ಪತ್ರದಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಅಭ್ಯರ್ಥಿಗಳು ಹೊಂದಿರಬಾರದು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಈ ಪರೀಕ್ಷೆಯು ಮಂಗಳೂರಿನ ಬೋಂದೆಲ್‌ನ ಕಾಲೇಜಿನಲ್ಲಿ ನಡೆಯಲಿದೆ. ಇದರಲ್ಲಿ ಪರೀಕ್ಷೆ ಬರೆಯುವ ಮೊದಲು ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಕಾಲುಂಗುರ, ತಿಲಕ, ಜನಿವಾರ, ಕೈಬಳೆ ಇನ್ನಿತರ ಎಲ್ಲವುಗಳನ್ನೂ ತೆಗೆದಿಟ್ಟು ಪರೀಕ್ಷಾ ಕೊಠಡಿ ಪ್ರವೇಶ ಮಾಡುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇಂದು ತಂತ್ರಜ್ಞಾನ ಸಾಕಷ್ಟು ಪ್ರಗತಿಯಾಗಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳು ಸುಲಭದಲ್ಲಿ, ಇವುಗಳ ಮೂಲಕ ಮಷಿನ್​ ಅಳವಡಿಸಿಕೊಂಡು ಕಾಪಿ ಮಾಡುವುದು ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ, ಈ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಮಂಗಳಸೂತ್ರ, ಕಾಲುಂಗುರ, ಜನಿವಾರ ಎಲ್ಲವೂ ಭಾವನಾತ್ಮಕ ಸಂಬಂಧ ಹೊಂದಿದೆ. ಅದರಲ್ಲಿಯೂ ಬಹುತೇಕ ವಿವಾಹಿತೆಯರು ಯಾವ ಕಾರಣಕ್ಕೂ ಮಂಗಳಸೂತ್ರ, ಕಾಲುಂಗುರ, ಕೈಬಳೆ, ತಿಲಕ ತೆಗೆಯುವುದೇ ಇಲ್ಲ. ಈಗಿನ ಕೆಲವು ಹೆಣ್ಣುಮಕ್ಕಳಿಗೆ ಇವೆಲ್ಲಾ ಫ್ಯಾಷನ್​ ಸಂಕೇತ ಆಗಿದ್ದು, ಅವರು ಅವುಗಳನ್ನು ಬೇಕಾದಾಗೆಲ್ಲಾ ತೆಗೆದು ತಮ್ಮ ಡ್ರೆಸ್​ಗೆ ಮ್ಯಾಚ್​ ಮಾಡಿಕೊಂಡರೂ, ಬಹುತೇಕ ಮಂದಿಗೆ ಇದು ಅಸಾಧ್ಯವಾಗಿರುವ ಮಾತು. ಇವು ಕೇವಲ ಆಭರಣ ಅಲ್ಲ, ಬದಲಿಗೆ ಭಾವನಾತ್ಮಕ ಸಂಬಂಧ ಹೊಂದಿವೆ. ಆದ್ದರಿಂದ ಈ ಬಗ್ಗೆ ಇನ್ನಿಲ್ಲದಂತೆ ಆಕ್ರೋಶ ವ್ಯಕ್ತವಾಗಿದೆ. 

ಮಿಸ್ಡ್​ ಕಾಲ್​ ಕೊಟ್ಟು ಪಿಎಫ್​ ಬ್ಯಾಲೆನ್ಸ್​ ತಿಳಿಯಿರಿ, ರಿಸೈನ್​ ಬಳಿಕ ದುಡ್ಡು ತೆಗೆಯದಿದ್ರೆ ಏನಾಗುತ್ತೆ?
   
ಈ ಸುತ್ತೋಲೆ ದೇಶವ್ಯಾಪಿ ಗಲಾಟೆಗೆ ಕಾರಣವಾಗಿದ್ದರೂ, ಕರ್ನಾಟಕದ ಅಭ್ಯರ್ಥಿಗಳು ನಿರಾಳರಾಗಿದ್ದಾರೆ. ಇದಕ್ಕೆ ಕಾರಣ, ಸಚಿವ ವಿ.ಸೋಮಣ್ಣ ಅವರು,  ಅಭ್ಯರ್ಥಿಗಳು, ಇವುಗಳನ್ನು ತೆಗೆಯುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಮನಸ್ಸಿಗೆ ಘಾಸಿ ಉಂಟು ಮಾಡುವ ಈ ಸುತ್ತೋಲೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯುವಂತೆ ದಕ್ಷಿಣ ಕನ್ನಡ ಬಿಜೆಪಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಈ ವಿಚಾರವನ್ನು ರೈಲ್ವೆ ಇಲಾಖೆ ಸಚಿವರ ಗಮನಕ್ಕೆ ತಂದಿದ್ದರು. ಇದರ ನಡುವೆಯೇ ಸಚಿವ ವಿ.ಸೋಮಣ್ಣ ಈ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಸ್ಪಷ್ಟಪಡಿಸಿರುವ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ‘ಭಾರತೀಯ ರೈಲ್ವೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ಬರೆಯುವವರು ಮಂಗಳಸೂತ್ರ, ಜನಿವಾರದಂತಹ ಧಾರ್ಮಿಕ ಸಂಕೇತಗಳು ಮತ್ತು ಆಭರಣಗಳನ್ನು ತೆಗೆಯುವಂತೆ ಮಾಡಬಾರದು. ಜನಿವಾರ, ಮಂಗಳಸೂತ್ರ ತೆಗೆಸದಂತೆ ಅಧಿಕಾರಿಗಳಿಗೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸೂಚನೆ ನೀಡಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಮಂಗಳಸೂತ್ರ ಹಾಗೂ ಧಾರ್ಮಿಕ ಸಂಕೇತಗಳನ್ನು ತೆಗೆಯಬೇಕೆಂದು ಹಾಲ್​ಟಿಕೆಟ್​ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಬಗ್ಗೆ ನಾವು ಅವರ ಗಮನಕ್ಕೆ ತಂದಿದ್ದೆವು. ಅವರು ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಎಕ್ಸ್​ ಖಾತೆಯಲ್ಲಿ ತಿಳಿಸಿದ್ದಾರೆ.   

ನಿಷೇಧಿತ ವಸ್ತುಗಳು 

-ಮೊಬೈಲ್ ಫೋನ್, ಪೇಜರ್, ಗಡಿಯಾರ, ಕ್ಯಾಲ್ಕುಲೇಟರ್, ಬುಕ್
-ಇಯರ್‌ಫೋನ್, ಬ್ಲೂಟೂತ್ ಸಾಧನ, ಮೈಕ್, ಹ್ಯಾಂಡ್ ಬ್ಯಾಗ್
-ಪರ್ಸ್, ಪೇನ್, ಪೆನ್ಸಿಲ್, ಇರೇಸರ್, ಪೌಚ್, ಸ್ಕೇಲ್, ಪೇಪರ್
-ಕ್ಯಾಮರಾ, ವಾಟರ್ ಬಾಟಲ್, ಪ್ಯಾಕ್ ಆಹಾರ ವಸ್ತು, ಎಲೆಕ್ಟ್ರಾನಿಕ್ ಸಾಧನ

 ಅನುಮತಿಸಲಾದ ವಸ್ತು: 

-ಇ-ಕಾಲ್ ಲೆಟರ್ ಮಾತ್ರ (ಪರೀಕ್ಷಾ ಕೇಂದ್ರದಲ್ಲಿ ಪೇನ್ ಒದಗಿಸಲಾಗುವುದು)

-ಲೋಹದ ವಸ್ತು, ಜನಿವಾರ, ಧಾರ್ಮಿಕ ಚಿಹ್ನೆಗಳು, ಬಳೆ, ಮಂಗಲಸೂತ್ರ,
ಒಡವೆ

ನೀಲಿ ಆಧಾರ್​ ಕಾರ್ಡ್​ ಇದ್ಯಾ? ಇದರ ಪ್ರಯೋಜನ- ಆನ್​ಲೈನ್​ನಲ್ಲೇ ಮಾಡಿಸೋ ಬಗೆ ತಿಳಿಯಿರಿ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..