ಟೆಂಡರ್‌ಗಳಿಂದ ಚೀನಾ ಕಂಪನಿ ಔಟ್, ಸೆಲೆಬ್ರಿಟಿಗಳಿಗೆ RSS ಅಂಗಸಂಸ್ಥೆ ಹೇಳಿದ್ದಿಷ್ಟು..!

By Suvarna NewsFirst Published Jun 17, 2020, 12:40 PM IST
Highlights

ಕೇಂದ್ರ ಸರ್ಕಾರ ಆಯೋಜಿಸುವ ಟೆಂಡರ್‌ಗಳಲ್ಲಿ ಚೀನಾ ಕಂಪನಿಗಳನ್ನು ಬಹಿಷ್ಕರಿಸಬೇಕು. ಈ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕು ಎಂದು ಆರ್‌ಎಸ್‌ಎಸ್‌ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್ ಕೇಂದ್ರಕ್ಕೆ ಮನವಿ ಮಾಡಿದೆ.

ನವದೆಹಲಿ(ಜೂ.17): ಕೇಂದ್ರ ಸರ್ಕಾರ ಆಯೋಜಿಸುವ ಟೆಂಡರ್‌ಗಳಲ್ಲಿ ಚೀನಾ ಕಂಪನಿಗಳನ್ನು ಬಹಿಷ್ಕರಿಸಬೇಕು. ಈ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕು ಎಂದು ಆರ್‌ಎಸ್‌ಎಸ್‌ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್ ಕೇಂದ್ರಕ್ಕೆ ಮನವಿ ಮಾಡಿದೆ.

ಗಲ್ವಾನ್ ಕಣಿವೆಯಲ್ಲಿ ಭಾರತದ ಸೈನಿಕರ ಮೇಲಿನ ಚೀನಾದ ದಾಳಿಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಭಾರತೀಯರಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ತಿಳಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರ ಸಲ್ಲಿಸಬೇಕು ಎಂದಿದೆ.

ಗಡಿ ಸಂಘರ್ಷ: ಭಾರತ ಸೇನೆ ಕೊಟ್ಟ ಎದುರೇಟಿಗೆ 43 ಚೀನಾ ಸೈನಿಕರು ಮಟಾಶ್

ಸಂಸ್ಥೆಯ ಕೋಕನ್ವೀನರ್ ಅಶ್ವಾನಿ ಮಹಾಜನ್ ಮಾತನಾಡಿ, ಜನರು ಚೀನಾ ನಿರ್ಮಿತ ವಸ್ತುಗಳನ್ನು ತೊರೆಯಬೇಕು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಚೀನಾ ಪತ್ಪನ್ನಗಳನ್ನು ಪ್ರಮೋಟ್ ಮಾಡದಂತೆ ಕ್ರಿಕಟರ್ಸ್, ನಟ ನಟಿಯರು ಹಾಗೂ ಇತರ ಸೆಲೆಬ್ರಿಟಿಗಳಿಗೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಆಯೋಜಿಸುವ ಟೆಂಟರ್‌ಗಳಿಗೆ ಚೈನೀಸ್ ಕಂಪನಿಗಳನ್ನು ಭಾಗವಹಿಸಲು ಬಿಡಬಾರದು, ಯಾವುದೇ ಚೀನಾ ವಸ್ತುಗಳನ್ನು ಸಂಗ್ರಹಿಸಲು ಬಿಡಬಾರದು ಎಂದಿದ್ದಾರೆ. ಕರ್ನಲ್ ಸೇರಿದಂತೆ 20 ಜನ ಯೋಧರು ಸೋಮವಾರ ಚೀನಾ ಸೈನಿಕರ ಜೊತೆ ನಡೆದ ಕಲಹದಲ್ಲಿ ಹುತಾತ್ಮರಾಗಿದ್ದಾರೆ.

click me!