ಇಸ್ಲಾಮಿಕ್ ಮೂಲಭೂತವಾದಿಗಳ ಬೆದರಿಕೆ ಇರುವವರಿಗೆ ಬಜರಂಗದಳದ ಸಹಾಯವಾಣಿ!

By Suvarna News  |  First Published Jul 7, 2022, 3:45 PM IST
  • ಹಿಂದು ಸಂಘಟನೆ ಸದಸ್ಯರು, ಯುವಕರಿಗೆ ಬೆದರಿಕೆ ಭೀತಿ
  • ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆದರಿಕೆ ಪ್ರಕರಣ
  • ಬೆದರಿಕೆ ಇರುವವರು ತಕ್ಷಣ ಕರೆ ಮಾಡಿ ಮಾಹಿತಿ ತಿಳಿಸಲು ಸೂಚನೆ

ನವದೆಹಲಿ(ಜು.07): ಉದಯಪುರ, ಮಹಾರಾಷ್ಟ್ರ, ಇದೀಗ ಕರ್ನಾಟಕದಲ್ಲೂ ನೂಪುರ್ ಶರ್ಮಾ ಬೆಂಬಲಿಸಿದವರ ಮೇಲೆ ದಾಳಿಯಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಈ ದಾಳಿ ಹಾಗೂ ಹತ್ಯೆಗಳು ಮರುಕಳಿಸುತ್ತಿದೆ. ಹಿಂದೂ ಯುವಕರಿಗೆ, ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಈಗಾಗಲೇ ಬೆದರಿಕೆ ಕರೆಗಳು, ಸೂಚನೆಗಳು ಬಂದಿದೆ. ಹೀಗಾಗಿ ಬಜರಂಗಳ ದಳ ವಿಶೇಷ ಸಹಾಯವಾಣಿ ಪ್ರಕಟಿಸಲು ಮುಂದಾಗಿದೆ. ಇಸ್ಲಾಮಿಕ್ ಮೂಲಭೂತವಾದಿಗಳಿನಿಂದ ಬೆದರಿಕೆ ಇರುವವರು ಈ ಸಹಾಯವಾಣಿಗೆ ಕರೆ ಮಾಹಿತಿ ನೀಡಲು ಮನವಿ ಮಾಡಿದೆ.

ನೂಪುರ್ ಶರ್ಮಾ ಬೆಂಬಲಿಸಿದವರಿಗೆ, ಹಿಂದೂ ಕಾರ್ಯಕರ್ತರು, ಹಿಂದೂ ಯುವಕರು ಸೇರಿದಂತೆ ಹಿಂದೂ ಸಮೂಹಕ್ಕೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಯಾವುದೇ ರೀತಿಯ ಬೆದರಿಕೆ ಇದ್ದರೂ ಈ ಸಹಾಯವಾಣಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. 

Tap to resize

Latest Videos

 

ನೂಪುರ್‌ಗೆ ಬೆಂಬಲ ಸೂಚಿಸಿದ ಟಿ ಸ್ಟಾಲ್ ಹಿಂದೂ ಯುವಕನ ಮೇಲೆ 20 ಮಂದಿಯಿಂದ ಭೀಕರ ದಾಳಿ!

ಈ ಸಹಾಯವಾಣಿ ಕುರಿತು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಸುರೇಂದ್ರ ಜೈನ್ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಭಯದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ದೇಶದಲ್ಲಿ ಭಯೋತ್ಪಾದನೆ ಮಾರ್ಗ ಮೂಲಕ ತಮ್ಮ ಕಾರ್ಯಸಾಧನೆಗೆ ಮುಂದಾಗಿದ್ದಾರೆ. ಉದಯಪುರದಲ ಕನ್ಹಯ್ಯಲಾಲ್ ಹಾಗೂ ಅಮರಾವತಿಯ ಉಮೇಶ್ ಕೊಲ್ಹೆ ಹತ್ಯೆ ಮಾಡಿ ಹಿಂದೂಗಳಲ್ಲಿ ಭಯದ ವಾತವಾರಣ ಸೃಷ್ಟಿಸಲಾಗಿದೆ. 

ಇಸ್ಲಾಮ್ ಮೂಲಭೂತವಾದಿಗಳು ಹಿಂದೂ ಕಾರ್ಯಕರ್ತರನ್ನು, ಹಿಂದೂ ಯುವಕರಿಗೆ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ಎರಡು ಹತ್ಯೆ ಘಟನೆ ಮೂಲಕ ದೇಶದಲ್ಲಿ ಭಯೋತ್ಪದನಾ ಚಟುವಟಿಕೆ ಹೆಚ್ಚಿಸಲು ಇಸ್ಲಾಮ್ ಮೂಲಭೂತ ವಾದಿಗಳು ಸಜ್ಜಾಗಿದ್ದಾರೆ. ಇಂತಹ ವಿಚಾರಗಳನ್ನು ಹಿಂದೂ ಸಮಾಜ ಸಹಿಸಿಕೊಂಡು ಇರುವುದಿಲ್ಲ ಎಂದು ಸುರೇಂದ್ರ ಜೈನ್ ಹೇಳಿದ್ದಾರೆ.

ಕರ್ನಾಟಕದ ಹಿಂದೂಪರ ಹೋರಾಟಗಾರರಿಗೆ ಜೀವ ಬೆದರಿಕೆ: ಮಹತ್ವದ ಸೂಚನೆ ನೀಡಿದ ಗುಪ್ತಚರ ಇಲಾಖೆ

ಯಾವುದೇ ರೀತಿಯ ಎಚ್ಚರಿಕೆ, ಬೆದರಿಕೆ ಇದ್ದರೆ ತಕ್ಷಣ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಬಜರಂಗದಳ ಸದಾ ನಿಮ್ಮೊಂದಿಗೆ. ಯಾವುದೇ ಕ್ಷಣದಲ್ಲಿ ಕರೆ ಮಾಡಿ, ಮಾಹಿತಿ ನೀಡಿ ಎಂದು ಸುರೇಂದ್ರ ಜೈನ್ ಮನವಿ ಮಾಡಿದ್ದಾರೆ. ಹೀಗಾಗಿ ಸಹಾಯವಾಣಿ ದೂರವಾಣಿ ಸಂಖ್ಯೆ ನೀಡಲಾಗುತ್ತಿದೆ ಎಂದಿದ್ದಾರೆ. 

ನೂಪುರ್ ಶರ್ಮಾ ಬೆಂಬಿಲಿಸದವರನ್ನು ಟಾರ್ಗೆಟ್ ಮಾಡಿರುವ ಇಸ್ಲಾಮ್ ಮೂಲಭೂತವಾದಿಗಳು ಹತ್ಯೆಗೆ ಪ್ಲಾನ್ ಹಾಕಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ನೋಡುವುದು ಆಯಾ ರಾಜ್ಯದ ಪೊಲೀಸರ ಕರ್ತವ್ಯವಾಗಿದೆ. ಆದರೆ ಹಿಂದೂಗಳ ದೂರುಗಳನ್ನು ಹಲವು ರಾಜ್ಯಗಳಲ್ಲಿ ಪೊಲೀಸರು ನಿರ್ಲಕ್ಷ್ಯಿಸುತ್ತಿದ್ದಾರೆ. ಹೀಗಾಗಿ ಬಜರಂಗದಳ ಹಿಂದೂಗಳ ರಕ್ಷಣೆಯ ಜವಾಬ್ದಾರಿ ಹೊಂದಿದೆ ಸಂಘಟನೆಯಾಗಿದೆ. ಹೀಗಾಗಿ ಹಿಂದೂಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಸುರೇಂದ್ರ ಜೈನ್ ಹೇಳಿದ್ದಾರೆ.

ಉದಯಪುರ ಹಾಗೂ ಮಹಾರಾಷ್ಟ್ರ ಘಟನೆ ಬಳಿಕ ನಿನ್ನೆ(ಜು.06) ಬಾಗಲಕೋಟೆ ಜಿಲ್ಲೆ ಕೆರೂರ ಪಟ್ಟಣದಲ್ಲಿಜಿಲ್ಲಾ ಹಿಂದೂ ಜಾಗರಣಾ ವೇದಿಕೆ ಕಾರ್ಯದರ್ಶಿ ಸೇರಿ ಮೂವರ ಮೇಲೆ ಅನ್ಯಕೋಮಿನವರು ಚೂರಿಯಿಂದ ಇರಿದು, ಹಲ್ಲೆ ನಡೆಸಿದ ಘಟನೆ ನಡೆದಿದೆ. ಜಿಲ್ಲಾ ಹಿಂದೂ ಜಾಗರಣಾ ವೇದಿಕೆ ಕಾರ್ಯದರ್ಶಿ ಅರುಣ ಕಟ್ಟೀಮನಿ, ಹಿಂದೂಪರ ಸಂಘಟನೆಯ ಲಕ್ಷ್ಮಣ ಕಟ್ಟಿಮನಿ, ಯಮನೂರಪ್ಪ ಚುಂಗಿನ ಗಾಯಗೊಂಡವರು. ಮೂವರನ್ನೂ ಹೆಚ್ಚಿನ ಚಿಕಿತ್ಸೆಗೆಂದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

click me!