
ಕೊಯಂಬತ್ತೂರು(ನ.23) ಪ್ರತಿಷ್ಠಿತ ಖಾಸಗಿ ಶಾಲೆ. ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ನೀಡಲಾಗುತ್ತದೆ. ಪಿವಿ ಸಿಂಧೂವಿನಿಂದ ಪ್ರೇರಣೆ ಹಾಗೂ ಸ್ಪೂರ್ತಿ ಪಡೆದ ಪಿಯುಸಿ ವಿದ್ಯಾರ್ಥಿನಿ ಬ್ಯಾಡ್ಮಿಂಟನ್ ತರಬೇತಿಗೆ ಸೇರಿಕೊಂಡಿದ್ದಾಳೆ. ಆರಂಭದಲ್ಲಿ ಕೆಲ ದಿನ ತರಬೇತಿ ನೀಡಲಾಗಿದೆ. ಆದರೆ ಶಾಲೆಯ ಬ್ಯಾಡ್ಮಿಂಟನ್ ಕೋಚ್ ವರಸೆ ಬದಲಾಗಿದೆ. ವಿದ್ಯಾರ್ಥಿನಿಗೆ ವ್ಯಾಟ್ಸ್ಆ್ಯಪ್ ಸಂದೇಶ ಕಳುಹಿಸಲು ಆರಂಭಿಸಿದ್ದಾನೆ. ಪ್ರೀತಿ ನಾಟಕ ಆಡಲು ಶುರಮಾಡಿದ್ದಾನೆ. ಆದರೆ ಇದೆಲ್ಲವನ್ನೂ ನಿರ್ಲಕ್ಷಿಸಿದ್ದ ವಿದ್ಯಾರ್ಥಿನಿ ಶಾಲೆ ಹಾಗೂ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾಳೆ. ಕೊನೆಗೆ ಬೆತ್ತಲೆ ಫೋಟೋ ಕಳುಹಿಸುವಂತೆ ಕಿರುಕುಳ ನೀಡಲು ಶುರುಮಾಡಿದ್ದಾನೆ. ಕಿರುಕುಳ ಹೆಚ್ಚಾದಂತೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಇದೇಗ ಪೋಕ್ಸ್ ಪ್ರಕರಣದಡಿ ಈ ಬ್ಯಾಡ್ಮಿಂಟನ್ ಕೋಚ್ ಬಂಧನವಾಗಿದೆ. ತಮಿಳುನಾಡಿನ ಕೊಯಂಬತ್ತೂರಿನ ಸೆಂಟ್ರಲ್ ಮಹಿಳಾ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅರುಣ್ ಬ್ರೂನ್ ಅನ್ನೋ ಬ್ಯಾಡ್ಮಿಂಟನ್ ಕೋಚ್ ಕಳೆದ ಆರು ತಿಂಗಳಿನಿಂದ ಖಾಸಗಿ ಶಾಲೆಯಲ್ಲಿ ತರಬೇತಿ ಶಿಕ್ಷಕನಾಗಿ ಸೇರಿಕೊಂಡಿದ್ದಾನೆ. ತಾತ್ಕಾಲಿಕವಾಗಿ ಈತನ ನೇಮಕ ಮಾಡಲಾಗಿದೆ. 17 ವರ್ಷದ ಮೊದಲ ವರ್ಷದ ಪಿಯುಸಿ ವಿದ್ಯಾರ್ಥಿನಿಯನ್ನು ಬಳಸಿಕೊಳ್ಳಲು ಈ ಅರುಣ್ ಬ್ರೂನ್ ಭಾರಿ ಪ್ಲಾನ್ ಮಾಡಿದ್ದಾನೆ. ವ್ಯಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಲು ಶುರುಮಾಡಿದ್ದಾನೆ.
ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ 13 ವರ್ಷದ ಬಾಲಕಿಗೆ ಬ್ಲ್ಯಾಕ್‌ಮೇಲ್, 70 ಸಾವಿರ ಸುಲಿಗೆ!
ಕೋಚ್ ಕಾರಣಕ್ಕಾಗಿ ಆರಂಭದಲ್ಲಿ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿದ್ದಾಳೆ. ಬರು ಬರುತ್ತಾ, ಇಂದು ನೀನು ಚೆನ್ನಾಗಿ ಕಾಣಿಸುತ್ತಿದ್ದಿ, ಡ್ರೆಸ್ ಚೆನ್ನಾಗಿದೆ ಎಂದೆಲ್ಲಾ ಸಂದೇಶಗಳು ಬರತೊಡಗಿದೆ. ಕೋಚ್ ಸಂದೇಶದ ದಾಟಿ ಬದಲಾಗಿದೆ. ಸಂದೇಶಗಳು ಬದಲಾಗುತ್ತಿದ್ದಂತೆ ವಿದ್ಯಾರ್ಥಿನಿ ನಿರ್ಲಕ್ಷ್ಯಿಸಲು ಆರಂಭಿಸಿದ್ದಾಳೆ. ಹಲವು ಸಂದೇಶಗಳಿಗೆ ಮೌನವಾಗಿದ್ದ ಕಾರಣ ಕೋಚ್, ಮೌನವೇ ಸಮ್ಮತಿ ಲಕ್ಷಣಂ ಎಂದು ಭಾವಿಸಿದ್ದಾನೆ.
ಹೀಗಿರುವಾಗ ಬೆತ್ತಲೆ ಫೋಟೋ ಕಳುಹಿಸುವಂತೆ ವಿದ್ಯಾರ್ಥಿನಿಗೆ ಸಂದೇಶ ಕಳುಹಿಸಿದ್ದಾನೆ. ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿನಿ ಸಮವಸ್ತ್ರದಲ್ಲಿರುವ ಫೋಟೋ ಒಂದನ್ನು ಕಳುಹಿಸಿದ್ದಾಳೆ. ಈ ಫೋಟೋ ಅಲ್ಲ, ಬೆತ್ತಲೇ ಫೋಟೋ ತೆಗೆದು ಕಳುಹಿಸು ಎಂದು ಮತ್ತೊಂದು ಸಂದೇಶ ಹಾಕಿದ್ದಾನೆ. ಕೋಚ್ ಮೆಸೇಜ್ ನೋಡಿ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾಳೆ. ಬೆತ್ತಲೇ ಫೋಟೋ ಕಳುಹಿಸದ ಕಾರಣ, ವಿದ್ಯಾರ್ಥಿನಿ ತರಬೇತಿ ವೇಳೆ ಡ್ರೆಸ್ ಬದಲಿಸುವ ಕೆಲ ಫೋಟೋಗಳನ್ನು ಕೋಚ್ ರಹಸ್ಯವಾಗಿ ಸೆರೆಹಿಡಿದಿದ್ದಾನೆ. ಈ ಫೋಟೋಗಳನ್ನು ಆಕೆಗೆ ಕಳುಹಿಸಿ ಬ್ಲಾಕ್‌ಮೇಲ್ ಮಾಡುವ ತಂತ್ರ ಪ್ರಯೋಗಿಸಿದ್ದಾನೆ.
ಬೆಂಗಳೂರಿನಲ್ಲಿ ಲೀವ್ ಇನ್ ಪಾರ್ಟ್ನರ್ ಕ್ರೈಂ, ಗೆಳತಿ ಮಾರ್ಫ್ ಫೋಟೋ ಹರಿಬಿಟ್ಟ ಬಾಯ್‌ಫ್ರೆಂಡ್!
ತೀವ್ರವಾಗಿ ಮಾನಸಿಕ ಕಿರುಕುಳ ಎದುರಿಸಿದ ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಗಾಬರಿಗೊಂಡ ಪೋಷಕರು ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸ್ ಪ್ರಕರಣ ದಾಖಲಿಸಿದ ಪೊಲೀಸರು ನೇರವಾಗಿ ಈ ಕಾಮುಕ ಕೋಚ್‌ನ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ