ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಒಂದೊಂದು ಕೆತ್ತನೆ ಕಲಾಕೃತಿ ರಚನೆಗಳಿಗೆ ಒಂದೊಂದು ಭಾಗದ ವಸ್ತು ಕಚ್ಚಾ ಸಾಮಗ್ರಿಗಳನ್ನು ಬಳಕೆ ಮಾಡಲಾಗುತ್ತಿದೆ.
ಅಯೋಧ್ಯೆ: ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಒಂದೊಂದು ಕೆತ್ತನೆ ಕಲಾಕೃತಿ ರಚನೆಗಳಿಗೆ ಒಂದೊಂದು ಭಾಗದ ವಸ್ತು ಕಚ್ಚಾ ಸಾಮಗ್ರಿಗಳನ್ನು ಬಳಕೆ ಮಾಡಲಾಗುತ್ತಿದೆ. ಅದೇ ರೀತಿ ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರಕ್ಕೆ ಅಗತ್ಯವಾಗಿರುವ ಬಾಗಿಲುಗಳ ನಿರ್ಮಾಣಕ್ಕೆ ಮಹಾರಾಷ್ಟ್ರದಿಂದ ತೇಗದ ಮರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ದೇವಾಲಯದಲ್ಲಿ(Temple) ಒಟ್ಟು 42 ಬಾಗಿಲುಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕಾಗಿ 1,700 ಕ್ಯೂಬಿಕ್ ಅಡಿಯಷ್ಟು ಮರದ ಅವಶ್ಯಕತೆ ಇದೆ. ಮಹಾರಾಷ್ಟ್ರದಿಂದ ತರಿಸಿದ ತೇಗದ ಮರಗಳಿಂದ ಇದನ್ನು ನಿರ್ಮಾಣ ಮಾಡಲಾಗುವುದು ಎಂದು ದೇವಸ್ಥಾನ ಮಂಡಳಿ ಹೇಳಿದೆ. ಈ ಬಾಗಿಲುಗಳ ಮೇಲೆ ನವಿಲು (Peacock), ಕಳಶ, ಸೂರ‍್ಯ (Sun), ಚಕ್ರ(Chakra), ಶಂಖ (Shanka), ಗಧೆ ಮತ್ತು ವಿವಿಧ ಹೂವುಗಳನ್ನು ಕೆತ್ತಲಾಗುತ್ತದೆ.
ಪ್ರಸ್ತುತ ಗರ್ಭಗೃಹ ಮತ್ತು 5 ಮಂಟಪಗಳು ಸೇರಿದಂತೆ ದೇವಸ್ಥಾನದ ನಿರ್ಮಾಣದಲ್ಲಿ ಕೆಳ ಅಂತಸ್ತುಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಅಕ್ಟೋಬರ್‌ನ ಮೊದಲ ವಾರ ಸುರಿದ ಭಾರಿ ಮಳೆ ನಿರ್ಮಾಣ ಕಾರ‍್ಯಕ್ಕೆ ಕೊಂಚ ತಡೆ ಒಡ್ಡಿತ್ತು. ಈಗ ನಿರ್ಮಾಣ ಕಾರ‍್ಯ ಆರಂಭವಾಗಿದ್ದು, ಮೊದಲಿನ ಯೋಜನೆಯಂತೆ 2023ರ ಡಿಸೆಂಬರ್‌ಗೆ ನಿರ್ಮಾಣ ಪೂರ್ಣವಾಗಿ ಭಕ್ತರು ರಾಮನ ದರ್ಶನ ಪಡೆಯಬಹುದು ಎಂದು ಟ್ರಸ್ಟ್ ಹೇಳಿದೆ.
ಅಯೋಧ್ಯೆ ರೀತಿ ಕೋರ್ಟ್‌ನಲ್ಲಿಯೇ ಇತ್ಯರ್ಥವಾಗಲಿದ್ದಾನೆ ಕಾಶಿ ವಿಶ್ವನಾಥ!
ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶಿಖರ ಅರ್ಪಣೆಗೆ ಚಿಂತನೆ