ಬಂಗಾಳದಿಂದ ಟಾಟಾ ಓಡಿಸಿದ್ದು ಸಿಪಿಎಂ, ನಾನಲ್ಲ : ಮಮತಾ ಬ್ಯಾನರ್ಜಿ

By Kannadaprabha News  |  First Published Oct 20, 2022, 10:06 AM IST

ಟಾಟಾ ಮೋಟರ್ಸ್‌ ಅನ್ನು ಪಶ್ಚಿಮ ಬಂಗಾಳದ ಸಿಂಗೂರನ್ನು ಬಿಟ್ಟು ತೆರಳುವಂತೆ ಮಾಡಿದ್ದು ನಾನಲ್ಲ, ಸಿಪಿಎಂ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. 


ಸಿಲಿಗುರಿ: ‘ಟಾಟಾ ಮೋಟರ್ಸ್‌ ಅನ್ನು ಪಶ್ಚಿಮ ಬಂಗಾಳದ ಸಿಂಗೂರನ್ನು ಬಿಟ್ಟು ತೆರಳುವಂತೆ ಮಾಡಿದ್ದು ನಾನಲ್ಲ, ಸಿಪಿಎಂ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಟಾಟಾ ಕಾರು ಉತ್ಪಾದನಾ ಘಟಕ ಬಂಗಾಳದಲ್ಲಿ ಸ್ಥಾಪನೆಯಾಗದಂತೆ ತಡೆಯಲು ಮಮತಾ ಭೂಸ್ವಾಧೀನದ ವಿರುದ್ಧ ಚಳವಳಿ ನಡೆಸಿದ್ದರು. ಇದರಿಂದ ಸೃಷ್ಟಿಯಾಗಬೇಕಾಗಿದ್ದ ಉದ್ಯೋಗಾವಕಾಶಗಳಿಗೆ ಕತ್ತರಿ ಬಿತ್ತು ಎಂದು ವಿಪಕ್ಷ ಸಿಪಿಎಂ ಆರೋಪಿಸಿತ್ತು. ಇದಕ್ಕೆ ಮಮತಾ, ಟಾಟಾ ಬಂಗಾಳ ಬಿಟ್ಟು ತೆರಳಲು ಕಾರಣ  ನಾನಲ್ಲ, ಸಿಪಿಎಂ. 

ಸಿಪಿಎಂ(CPM) ಬಲಪೂರ್ವಕವಾಗಿ ಜನರ ಭೂಮಿ ವಶಪಡಿಸಿಕೊಂಡಿದ್ದನ್ನು ನಾನು ಮರಳಿಸಿದ್ದೇನೆ. ನಾವು ಹಲವಾರು ಅಭಿವೃದ್ಧಿ (Development) ಯೋಜನೆ ಕೈಗೊಂಡರೂ ಯಾರಿಂದಲೂ ಭೂಮಿ (Land)ಒತ್ತಾಯಪೂರ್ವಕವಾಗಿ ಕಸಿದುಕೊಂಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Tap to resize

Latest Videos

Bengal Politics ಸಂಕಷ್ಟದಲ್ಲಿ ಸಿಎಂ ಮಮತಾ ಬ್ಯಾನರ್ಜಿ, ದೀದಿ ಕುಟುಂಬಸ್ಥರ ವಿರುದ್ಧ ದಿಟ್ಟ ಹೆಜ್ಜೆ ಇಟ್ಟ ಹೈಕೋರ್ಟ್!

ನಾನು ಟಾಟಾ ಸಮೂಹವನ್ನು ಪಶ್ಚಿಮ ಬಂಗಾಳದಿಂದ ಓಡಿಸಿದ್ದೇನೆ ಎಂದು ಹಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಆ ರೀತಿ ಮಾಡಿಲ್ಲ. ಸಿಪಿಐ(ಎಂ) ಅವರನ್ನು ಓಡಿಸಿತು ಎಂದು ಮಮತಾ ಹೇಳಿದ್ದಾರೆ. ಸಿಲಿಗುರಿಯಲ್ಲಿ ನಡೆದ ಬಿಜಯ ಸಮಿಲ್ಲಾನಿ (ವಿಜಯ ಸಮ್ಮಿಲನ) ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 

ಸಿಂಗೂರಿನಲ್ಲಿ ಟಾಟಾ ಮೋಟಾರ್ಸ್‌ನ ನ್ಯಾನೋ ಯೋಜನೆಗಾಗಿ ಹಿಂದಿನ ಎಡಪಕ್ಷ ಸರ್ಕಾರವು ಜನರಿಂದ ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮಾತ್ರ ನಾನು ಜನರಿಗೆ ಹಿಂದಿರುಗಿಸಿದ್ದೇನೆ. ನೀವು (ಸಿಪಿಐಎಂ) ಯೋಜನೆಗಾಗಿ ಜನರಿಂದ ಬಲವಂತವಾಗಿ ಭೂಮಿ ತೆಗೆದುಕೊಂಡಿದ್ದೀರಿ, ನಾವು ಆ ಭೂಮಿಯನ್ನು ಜನರಿಗೆ ಹಿಂದಿರುಗಿಸಿದ್ದೇವೆ. ನಾವು ಅನೇಕ ಯೋಜನೆಗಳನ್ನು ಮಾಡಿದ್ದೇವೆ, ಆದರೆ ಯಾರಿಂದಲೂ ಬಲವಂತವಾಗಿ ಯಾವುದೇ ಭೂಮಿಯನ್ನು ತೆಗೆದುಕೊಂಡಿಲ್ಲ. ನಾವೇಕೆ ಹಾಗೆ ಮಾಡಬೇಕು? ಇಲ್ಲಿ ಭೂಮಿಯ ಕೊರತೆ ಇಲ್ಲ ಎಂದು ದೀದೀ ಹೇಳಿದರು.

ಗುಡ್ ಫೆಲೋಸ್ ನಲ್ಲಿ ರತನ್ ಟಾಟಾ ಹೂಡಿಕೆ;ವೃದ್ಧರ ಒಂಟಿತನ ದೂರ ಮಾಡಲಿದೆ ಈ ವಿನೂತನ ಸ್ಟಾರ್ಟಪ್‌

ಆದರೆ ವಿರೋಧ ಪಕ್ಷಗಳು ಮಾತ್ರ ಮಮತಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ, ಅವರು ವಿಶ್ವದ ಅತ್ಯುತ್ತಮ ಸುಳ್ಳುಗಾರ್ತಿ, ಅವರು ತಮ್ಮ ಜೀವನದಲ್ಲಿ ಒಂದೇ ಒಂದು ಸತ್ಯ ಮಾತನಾಡಿಲ್ಲ. ಅವರು ಈ ರಾಜ್ಯವನ್ನು ಹಾಳು ಮಾಡಿದ್ದು ಯಾವುದೇ ಉದ್ಯಮವು ಇಲ್ಲಿಗೆ ಬರುವುದಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದರು.  ಸಿಪಿಐ(ಎಂ) ನಾಯಕ ಸುಜನ್ ಚಕ್ರವರ್ತಿ (Sujan Chakraborty) ಈ ಬಗ್ಗೆ ಪ್ರತಿಕ್ರಿಯಿಸಿ, ಸುಳ್ಳು ಹೇಳಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರಿಗೆ ಡಾಕ್ಟರೇಟ್ (D.Litt) ಸಿಗಬಹುದು. ಟಾಟಾ ಸಮೂಹವನ್ನು ಸಿಂಗೂರಿನಿಂದ ಓಡಿಸಲು ಬುದ್ಧದೇವ್ ಭಟ್ಟಾಚಾರ್ಯ (Buddhadeb Bhattacharjee) ಪ್ರತಿಭಟನೆಗೆ ಕುಳಿತಿದ್ದರು ಎಂದು ಅವರು ಈಗ ಹೇಳಬಹುದು ಎಂದು ತಿರುಗೇಟು ನೀಡಿದ್ದಾರೆ.

ಇತ್ತ ಮಮತಾ ಹೇಳಿಕೆಯನ್ನು ಬೆಂಬಲಿಸಿದ ಟಿಎಂಸಿ ವಕ್ತಾರ ಕುನಾಲ್ ಘೋಷ್ (Kunal Ghosh), ಅವರು ಹೇಳಿದ್ದು ಸಂಪೂರ್ಣವಾಗಿ ಸರಿ. ನಾವು ಯಾವುದೇ ಉದ್ಯಮದ ವಿರುದ್ಧ ಪ್ರತಿಭಟಿಸಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

 

click me!