ಇನ್ಮುಂದೆ ಎಲ್ಲ ಟ್ರೈನ್‌ಗೂ ಸ್ವಯಂಚಾಲಿತ ಬಾಗಿಲು, 2 ಎಂಜಿನ್‌ಗಳು: ಪ್ರಯಾಣ ಸಮಯ ಕಡಿಮೆ ಮಾಡಲು ರೈಲ್ವೆ ಪ್ಲ್ಯಾನ್‌ ಹೀಗಿದೆ..

By BK Ashwin  |  First Published Jul 20, 2023, 2:50 PM IST

ಎಲ್ಲಾ ರೈಲುಗಳಿಗೆ ಸ್ವಯಂಚಾಲಿತ ಬಾಗಿಲುಗಳು,  ಹಠಾತ್ ಜರ್ಕ್‌ಗಳಿಂದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಆಂಟಿ-ಜರ್ಕ್ ಸಂಯೋಜಕಗಳು ಮತ್ತು ಸೆಮಿ ಹೈ-ಸ್ಪೀಡ್ ರೈಲುಸೆಟ್‌ಗಳಿಗೆ ಕಡಿಮೆ-ವೆಚ್ಚದ ಪರ್ಯಾಯವಾಗಿ ರೈಲನ್ನು ಎಳೆಯುವ ಎರಡು ಎಂಜಿನ್‌ಗಳನ್ನು ಹಾಕಲು ರೈಲ್ವೆ ಇಲಾಖೆ ಪ್ಲ್ಯಾನ್‌ ಮಾಡ್ತಿದೆ.


ನವದೆಹಲಿ (ಜುಲೈ 20, 2023): ಕಳೆದ ಕೆಲ ವರ್ಷಗಳಿಂದ ಭಾರತೀಯ ರೈಲ್ವೆಯಲ್ಲಿ ಹೆಚ್ಚು ಬದಲಾವಣೆಗಳಾಗ್ತಿದೆ. ಇದಕ್ಕೆ ಇತ್ತೀಚಿನ ವಂದೇ ಭಾರತ್‌ ರೈಲುಗಳೂ ಉತ್ತಮ ಉದಾಹರಣೆ. ಇದೇ ರೀತಿ ಕೇಂದ್ರ ಸರ್ಕಾರ ಮುಂದಿನ ಎರಡು ವರ್ಷಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ನೋಡುತ್ತಿದೆ, ಇದು ಭಾರತೀಯ ರೈಲ್ವೆಯ ರೋಲಿಂಗ್ ಸ್ಟಾಕ್ ಅನ್ನು ಪ್ರಮಾಣೀಕರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಈ ಯೋಜಿಸಲಾದ ಬದಲಾವಣೆಗಳಲ್ಲಿ ಎಲ್ಲಾ ರೈಲುಗಳಿಗೆ ಸ್ವಯಂಚಾಲಿತ ಬಾಗಿಲುಗಳು,  ಹಠಾತ್ ಜರ್ಕ್‌ಗಳಿಂದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಆಂಟಿ-ಜರ್ಕ್ ಸಂಯೋಜಕಗಳು ಮತ್ತು ಸೆಮಿ ಹೈ-ಸ್ಪೀಡ್ ರೈಲುಸೆಟ್‌ಗಳಿಗೆ ಕಡಿಮೆ-ವೆಚ್ಚದ ಪರ್ಯಾಯವಾಗಿ ರೈಲನ್ನು ಎಳೆಯುವ ಎರಡು ಎಂಜಿನ್‌ಗಳನ್ನು ಹಾಕಲು ರೈಲ್ವೆ ಇಲಾಖೆ ಪ್ಲ್ಯಾನ್‌ ಮಾಡ್ತಿದೆ.

Tap to resize

Latest Videos

ಇದನ್ನು ಓದಿ: ಒಡಿಶಾ ರೈಲು ದುರಂತಕ್ಕೆ ಸಿಬ್ಬಂದಿ ಕಾರಣ: ರೈಲ್ವೆ ತನಿಖಾ ವರದಿ; ವಿಧ್ವಂಸಕ ಕೃತ್ಯದ ಅನುಮಾನದ ಬಗ್ಗೆ ಸಿಬಿಐ ತನಿಖೆ ಮುಂದುವರಿಕೆ

ಹಿಂಭಾಗದಲ್ಲಿ ಒಂದು ಎಂಜಿನ್ ಮತ್ತು ಮುಂಭಾಗದಲ್ಲಿ ಇನ್ನೊಂದು ಎಂಜಿನ್‌ ಚಾಲನೆಯಲ್ಲಿರುವ ರೈಲುಗಳ ಪುಶ್-ಪುಲ್ ವಿಧಾನ ಅಳವಡಿಕೆ ಮಾಡಲು ಯೋಜಿಸಲಾಗ್ತಿದೆ. ಈ ಮೂಲಕ ವಿತರಿಸಿದ ವಿದ್ಯುತ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ವಂದೇ ಭಾರತ್ ರೈಲುಗಳಂತೆ ಕೆಲ ಕ್ಷಣಗಳಲ್ಲಿ ಸ್ಪೀಡ್‌ ಹೆಚ್ಚಿಸಲು ಮತ್ತು ನಿಧಾನಗತಿಯ ಚಲನೆಯನ್ನು ಅನುಮತಿಸುತ್ತದೆ. ಅಸ್ತಿತ್ವದಲ್ಲಿರುವ LHB ಕೋಚ್‌ಗಳನ್ನು ಬಳಸುವುದಕ್ಕಿಂತಲೂ ಈ ಹೊಸ  ತಂತ್ರಜ್ಞಾನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಮುಂಬೈ-ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ 2019 ರಿಂದ ಕಡಿಮೆ ಪ್ರಯಾಣ ಸಮಯದೊಂದಿಗೆ ಚಾಲನೆಯಲ್ಲಿದೆ. ಕಡಿಮೆ ದರದ, ಸೆಮಿ ಹೈಸ್ಪೀಡ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದನ್ನು ಹೆಚ್ಚಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್‌ನಲ್ಲಿ ಅಂತಹ ವೇಗದ ಸಾಮರ್ಥ್ಯವನ್ನು ಹೊಂದಿರುವ WAP-5 ಮತ್ತು WAP-7 ವರ್ಗಗಳ ಎಂಜಿನ್‌ಗಳಲ್ಲಿ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಅಕ್ಟೋಬರ್ ವೇಳೆಗೆ ಒಂದು ರೇಕ್ ಹೊರತರುವ ನಿರೀಕ್ಷೆಯಿದೆ ಎಂದೂ ತಿಳಿದುಬಂದಿದೆ. ರೋಲಿಂಗ್ ಸ್ಟಾಕ್‌ನ ಪ್ರಮಾಣೀಕರಣದ ಸುತ್ತಲಿನ ಕಲ್ಪನೆಯು ಭವಿಷ್ಯದಲ್ಲಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದು ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಒಡಿಶಾ ರೈಲು ಅಪಘಾತವಾಗಿ 27 ದಿನ: ಇನ್ನೂ ಪತ್ತೆ ಆಗದ 81 ಶವಗಳ ಗುರುತು; ಶವಗಳಿಗಾಗಿ ಕಾಯುತ್ತಿರುವ 35 ಕುಟುಂಬಗಳು

ಈ ಮಧ್ಯೆ, ಪೂರ್ವ ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮುಂತಾದ ನಗರಗಳು, ಕೇರಳದ ಕೆಲ ಸ್ಥಳಗಳು ಮತ್ತು ಇತರೆ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಸಾಮಾನ್ಯ ಕೋಚ್‌ಗಳು ಮತ್ತು ನಾನ್ ಎಸಿ ಸ್ಲೀಪರ್ ಕ್ಲಾಸ್‌ಗಳನ್ನು ಒಳಗೊಂಡ ಸಾಮಾನ್ಯ ರೈಲುಗಳನ್ನು ಹೊರತರಲು ರೈಲ್ವೆ ಈಗಾಗಲೇ ಮಾರ್ಗಗಳನ್ನು ಗುರುತಿಸಿದೆ. 

“ಇವು ಪ್ರಸ್ತುತ ರೈಲುಗಳ ಪೂರೈಕೆಗಿಂತ ಹೆಚ್ಚಿನ ದೀರ್ಘಕಾಲಿಕ ಬೇಡಿಕೆಯನ್ನು ಪೂರೈಸುವ ನಿಯಮಿತ ರೈಲುಗಳಾಗಿವೆ. ಇವುಗಳು ವಿಪರೀತ ರಶ್‌ ನಿರ್ವಹಿಸಲು ನಾವು ನಡೆಸುವ ಸೀಸನ್‌ ಸ್ಪೆಶಲ್‌ ರೈಲು ಸೇವೆಗಿಂತ ಹೆಚ್ಚಿನದಾಗಿರುತ್ತದೆ’’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಇದನ್ನೂ ಓದಿ: ಅಯ್ಯೋ! ಟ್ರೈನ್‌ ಟಾಯ್ಲೆಟ್‌ಗಳನ್ನು ಬರಿಗೈಯಲ್ಲಿ ಸ್ವಚ್ಛಗೊಸಿದ ಕಾರ್ಮಿಕರು: ವಿಡಿಯೋ ಸಾಕ್ಷ್ಯ ಸಮೇತ ದೂರು

click me!