ಆಸ್ಪತ್ರೆಗೆ ಸೈಫ್ ಜೊತೆ ಬಂದಿದ್ದು ಮಗ ಇಬ್ರಾಹಿಂ ಅಲ್ಲ ಎಂದ ಆಟೋ  ಚಾಲಕ

Published : Jan 18, 2025, 08:19 AM IST
ಆಸ್ಪತ್ರೆಗೆ ಸೈಫ್ ಜೊತೆ ಬಂದಿದ್ದು ಮಗ ಇಬ್ರಾಹಿಂ ಅಲ್ಲ ಎಂದ ಆಟೋ  ಚಾಲಕ

ಸಾರಾಂಶ

ಸೈಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ, ಸೈಫ್ ಜೊತೆ ಇಬ್ರಾಹಿಂ ಅಲ್ಲ ಎಂದು ಹೇಳಿದ್ದಾರೆ. ಸೈಫ್ ಮೇಲಿನ ದಾಳಿಗೆ ಕಳ್ಳತನವೇ ಕಾರಣ ಎಂದು ಮಹಾರಾಷ್ಟ್ರ ಗೃಹ ಸಚಿವರು ತಿಳಿಸಿದ್ದಾರೆ.

ಮುಂಬೈ: ಆಗಂತುಕನ ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡಿದ್ದ ಸೈಫ್‌ ಅಲಿಖಾನ್‌ ಅವರನ್ನು ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದಿದ್ದು ಅವರ ಹಿರಿಯ ಮಗ ಇಬ್ರಾಹಿಂ ಅಲ್ಲ, ಕಿರಿ ಮಗ ತೈಮುರ್ ಎಂದು ಆಟೋ ಚಾಲಕ ಭಜನ್‌ ಸಿಂಗ್‌ ರಾಣಾ ಹೇಳಿದ್ದಾರೆ.

‘ಮಹಿಳೆಯೊಬ್ಬರು ಓಡಿ ಬಂದು ಆಟೋ ಆಟೋ ಎಂದು ಕೂಗಿದರು. ಆಗ ಸಣ್ಣ ಬಾಲಕನೊಬ್ಬ ಆಟೋದಲ್ಲಿ, ರಕ್ತಸಿಕ್ತನಾಗಿದ್ದ ವ್ಯಕ್ತಿ ಜತೆ ಆಟೋ ಏರಿದ. ಲೀಲಾವತಿ ಆಸ್ಪತ್ರೆಗೆ ಹೋಗಿ ಎಂದು ರಕ್ತಸಿಕ್ತನಾಗಿದ್ದ ವ್ಯಕ್ತಿ ಹೇಳಿದ. ಆಸ್ಪತ್ರೆ ಬಂದಾಗ ‘ಸ್ಟ್ರೆಚರ್‌ ತೆಗೆದುಕೊಂಡು ಬನ್ನಿ. ನಾನು ಸೈಫ್‌ ಅಲಿ ಖಾನ್’ ಎಂದು ರಕ್ತಸಿಕ್ತ ವ್ಯಕ್ತಿ ಹೇಳಿದ. ಆಗಲೇ ನನಗೆ ಅವರು ಸೈಫ್‌ ಎಂದು ಗೊತ್ತಾಯಿತು’ ಎಂದು ಭಜನ್‌ ತಿಳಿಸಿದ್ದಾರೆ. ತಕ್ಷಣವೇ ಕಾರು ಚಾಲಕ ಮಧ್ಯರಾತ್ರಿ ಸಿದ್ಧ ಇರದ ಕಾರಣ ಆಟೋದಲ್ಲಿ ಸೈಫ್‌ ಆಸ್ಪತ್ರೆಗೆ ತೆರಳಿದ್ದರು.

ಸೈಫ್‌ ಮೇಲೆ ಹಲ್ಲೆಗೆ ಕಳ್ಳತನ ಉದ್ದೇಶವೇ ಕಾರಣ: ಮಹಾರಾಷ್ಟ್ರ ಗೃಹ ಸಚಿವ
‘ನಟ ಸೈಫ್‌ ಅಲಿಖಾನ್ ಅವರ ಮನೆ ಮೇಲೆ ದಾಳಿ ನಡೆಸುವುದಕ್ಕೆ ಆರೋಪಿಗೆ ಕಳ್ಳತನವೊಂದೇ ಉದ್ದೇಶವಾಗಿತ್ತು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣ ಇಲ್ಲ’ ಎಂದು ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್‌ ಕದಂ ಹೇಳಿದ್ದಾರೆ.

ಇದನ್ನೂ ಓದಿ: ಸೈಫ್ ಅಲಿ ಖಾನ್‌, ಸಲ್ಮಾನ್, ಶಾರುಖ್ ತಮ್ಮ ಸೆಕ್ಯೂರಿಟಿಗೆ ವರ್ಷಕ್ಕೆ ಎಷ್ಟು ಹಣ ಖರ್ಚು ಮಾಡ್ತಾರೆ ಗೊತ್ತಾ?

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕದಂ, ‘ಸೈಫ್‌ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಕ್ರಿಮಿನಲ್ ಕಳ್ಳತನವೊಂದೇ ಉದ್ದೇಶವಾಗಿತ್ತು. ಬೇರೆ ಯಾವುದೇ ಆಯಾಮಗಳಿಲ್ಲ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ’ ಎಂದಿದ್ದಾರೆ. ಅಲ್ಲದೆ, ಸೈಫ್‌ ತಮಗೆ ಬೆದರಿಗೆ ಇದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!