ಕುಂಭ ಮೇಳ ಬಿಟ್ಟು ದೇಶದಿಂದಲೇ ಹೊರಟುಹೋದ ಸ್ಟೀವ್‌ ಜಾಬ್ಸ್‌ ಪತ್ನಿ, ಏನಾಯ್ತು?

Published : Jan 17, 2025, 08:49 PM ISTUpdated : Jan 18, 2025, 08:13 AM IST
ಕುಂಭ ಮೇಳ ಬಿಟ್ಟು ದೇಶದಿಂದಲೇ ಹೊರಟುಹೋದ ಸ್ಟೀವ್‌ ಜಾಬ್ಸ್‌ ಪತ್ನಿ, ಏನಾಯ್ತು?

ಸಾರಾಂಶ

ನಿಗದಿತ ವೇಳಾಪಟ್ಟಿಯ ಪ್ರಕಾರ ಸ್ಟೀವ್‌ ಜಾಬ್ಸ್‌ ಪತ್ನಿ ಲಾರೀನ್‌ ಪಾವೆಲ್‌ ಇಲ್ಲಿ ಒಂದು ತಿಂಗಳ ಕಾಲ ಇದ್ದು, ಕಲ್ಪವಾಸ ವ್ರತ ಮುಗಿಸಿ ಹೋಗಬೇಕಾಗಿತ್ತು. ಆದರೆ ಬಂದಿನ್ನೂ ಒಂದು ವಾರ ಆಗುವ ಮೊದಲೇ ಅವರು ದೇಶ ಬಿಟ್ಟು ಬೂತಾನ್‌ಗೆ ರೈಟ್‌ ಹೇಳಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ.    

ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ಆಗಮಿಸಿದ್ದ ಆಪಲ್‌ ಸಂಸ್ಥೆಯ ಸಹಸಂಸ್ಥಾಪಕಿ, ಮಾಜಿ ಸಿಇಒ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ತಮ್ಮ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸ್ ತೆರಳಿದ್ದಾರೆ. ಆದರೆ ಅಮೆರಿಕಕ್ಕೆ ಹೋಗಿಲ್ಲ. ವಿಶೇಷ ವಿಮಾನದ ಮೂಲಕ ಪ್ರಯಾಗ್‌ರಾಜ್‌ನಿಂದ ಭೂತಾನ್‌ಗೆ ಹೋಗಿದ್ದಾರೆ. ಇದಕ್ಕೆ ಕಾರಣಗಳಿವೆ. ಕುಂಭ ಮೇಳಕ್ಕೆ ನೀವು ಹೋಗುತ್ತೀರಾದರೆ, ಇದನ್ನು ಗಮನಿಸಿ. ಉಪಯೋಗವಾಗಬಹುದು.

ಮಂಗಳವಾರ ನಡೆದ ಮೊದಲ 'ಅಮೃತ ಸ್ನಾನ'ಕ್ಕೆ ತೆರಳಿದ ಲಾರೆನ್ ಪೊವೆಲ್ ಜಾಬ್ಸ್‌ ಅವರಿಗೆ ಚರ್ಮದ ಅಲರ್ಜಿ ಉಂಟಾಗಿದೆ. ಸೋಮವಾರ ಮಹಾ ಕುಂಭ ಮೇಳಕ್ಕೆ ಆಗಮಿಸಿದ್ದ ಲಾರೀನ್ ಸುಮಾರು ಒಂದು ತಿಂಗಳ ಕಾಲ ಇಲ್ಲೇ ತಂಗಲು ನಿರ್ಧರಿಸಿದ್ದರು. ಆದರೆ ಇಷ್ಟೊಂದು ಜನದಟ್ಟಣೆ ಇರುವ ಪ್ರದೇಶದಲ್ಲಿ ಅವರು ಎಂದಿಗೂ ಹೋಗಿರಲಿಲ್ಲ. ಕಾರಣ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಜೊತೆಗೆ, ಲಕ್ಷಾಂತರ ಜನ ಮಿಂದು ಎದ್ದ ಗಂಗಾ ನದಿಯ ನೀರಿನಲ್ಲಿ ಮುಳುಗಿ ಸ್ನಾನ ಮಾಡಿದ್ದರಿಂದಾಗಿ ಅಲರ್ಜಿ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಅಥವಾ ಜನಸಂದಣಿಯಲ್ಲಿ ಯಾವುದಾದರೂ ಚರ್ಮದ ಸೋಂಕು ಹಬ್ಬಿರುವ ಸಾಧ್ಯತೆಯೂ ಇದೆ. ಲಾರೀನ್‌ ಪೊವೆಲ್‌ ಅವರ ಚರ್ಮ ಹೆಚ್ಚು ಸೆನ್ಸಿಟಿವ್‌ ಆಗಿದ್ದು, ಇದನ್ನು ಅವರು ನಿರೀಕ್ಷಿಸಿರಲಿಲ್ಲ. 

ಶನಿವಾರ ವಾರಣಾಸಿಗೆ ಬಂದಿದ್ದ ಲಾರೆನ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಲಾರೆನ್ ಮಹಾ ಕುಂಭ ಮೇಳದಲ್ಲಿ ಕಲ್ಪವಾಸಿಯಾಗಲು ಯೋಜಿಸಿದ್ದರು. ಅದರಂತೆ ಅವರು ಕುಂಭ ಮೇಳದಲ್ಲಿ ವ್ರತದ ಜೀವನ ನಡೆಸಬೇಕಾಗಿತ್ತು. ಇದು ಒಂದು ತಿಂಗಳ ಕಠಿಣ ಉಪವಾಸ, ಜಪ, ಧ್ಯಾನಗಳನ್ನು ಒಳಗೊಂಡಿದೆ. ಇವರ ಗುರು ನಿರಂಜನಿ ಅಖಾಡದ  ಮಹಾ ಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ನಿರಂಜನಿ ಅವರು. ಅವರ ಶಿಬಿರದಲ್ಲೇ ಲಾರೆನ್‌ ಅವರು ತಂಗಿದ್ದರು. ಲಾರೀನ್‌ ಅವರಿಗೆ ʼಕಮಲಾʼ ಎಂಬ ಹಿಂದೂ ಹೆಸರನ್ನೂ ನೀಡಲಾಗಿತ್ತು. ಕೈಲಾಶಾನಂದ ಅವರು ಲಾರೆನ್ ಅವರನ್ನು ಮಗಳೆಂದು ದತ್ತು ಸ್ವೀಕರಿಸಿದ್ದರು. ಅವರಿಗೆ ಕಾಳಿಕಾಮಾತೆಯ ದೀಕ್ಷಾಮಂತ್ರವನ್ನು ನೀಡಲಾಗಿದೆ. ಈ ಮಂತ್ರವನ್ನು ಅವರು ಭೂತಾನ್‌ನಲ್ಲಿ ಇದ್ದುಕೊಂಡು ಜಪಿಸಲಿದ್ದಾರೆ ಎನ್ನಲಾಗಿದೆ. ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಲು ಲಾರೀನ್‌ ಯೋಜಿಸಿದ್ದರು. ಇದೀಗ ಅವರ ಯೋಜನೆ ಏರುಪೇರಾಗಿದೆ. 

ನಾಚಿಕೆ ಆಗಬೇಕು ಈ ಜನಕ್ಕೆ.., ಕಣ್ಣೀರಿಡುತ್ತಲೇ ಕುಂಭಮೇಳದಿಂದ ಹೊರಬಂದ ಸುಂದರಿ ಸಾಧ್ವಿ ಹರ್ಷ ರಿಚಾರಿಯಾ!

ಲಾರೀನ್‌ ಪೊವೆಲ್‌ ಕುಂಭ ಮೇಳ ಬಿಟ್ಟು ಹೋಗಲು ಕಾರಣ ಸ್ಕಿನ್‌ ಅಲರ್ಜಿ. ಅವರ ಕೈಗಳಲ್ಲಿ ಕೆಂಪು ಗುಳ್ಳೆಗಳು ಎದ್ದಿವೆ. ಇದು ಸಾಮಾನ್ಯವಾಗಿ ಹೊಸ ವಾತಾವರಣ, ಗಾಳಿ ಹಾಗೂ ನೀರಿಗೆ ಒಡ್ಡಿಕೊಂಡ ಸೂಕ್ಷ್ಮ ಚರ್ಮದವರಲ್ಲಿ ಉಂಟಾಗುತ್ತದೆ. ಭಾರತೀಯರು ಗಂಗೆಯ ನೀರಿಗೆ ಒಗ್ಗಿಕೊಂಡಿರುವುದರಿಂದ ಇದು ಅಷ್ಟೇನೂ ಬಾಧಿಸುವುದಿಲ್ಲ. ಆದರೆ ಕೋಟ್ಯಂತರ ಜನ ಭಾಗವಹಿಸುತ್ತಿರುವ ಕುಂಭ ಮೇಳದಲ್ಲಿ ನೈರ್ಮಲ್ಯದ ಸಮಸ್ಯೆ ಇದೆ. ಸ್ಕಿನ್‌ ಸಮಸ್ಯೆಗಳು ದೂಳು, ಬ್ಯಾಕ್ಟೀರಿಯಾ, ಅನ್ಯ ಸೋಂಕಿತರ ಸಂಪರ್ಕ, ಸ್ವಚ್ಛತಾ ಕೆಮಿಕಲ್‌ಗಳು ಇವುಗಳಿಂದಲೂ ಬರಬಹುದು. 

ನೀವೇನು ಮಾಡಬೇಕು? ನೀವು ಕುಂಭ ಮೇಳಕ್ಕೆ ಅಥವಾ ಅಂಥದೇ ಜನಜಂಗುಳಿ ಅಧಿಕ ಇರುವ ಜನಜಾತ್ರೆಗಳಿಗೆ ಹೋಗುತ್ತೀರಾದರೆ, ಈ ಬಗ್ಗೆ ಮೊದಲೇ ಎಚ್ಚರ ವಹಿಸಬೇಕು. ಜನಜಂಗುಳಿಯಲ್ಲಿ ಹೋಗಿ ಬಂದರೆ, ಹೆಚ್ಚು ಜನರ ಕೈಕುಲುಕಿ ಬಂದರೆ, ಮಾಲಿನ್ಯ ಹೊಂದಿರುವ ಪ್ರದೇಶಗಳಿಗೆ ಹೋಗಿ ಬಂದ ಬಳಿಕ ಮೈಕೈ ಚೆನ್ನಾಗಿ ಸೋಪು ಹಾಕಿ ತೊಳೆದುಕೊಳ್ಳಿ ಎಂದು ಚರ್ಮ ತಜ್ಞರು ಸೂಚಿಸಿದ್ದಾರೆ. 

ಐಐಟಿ ಬಾಬಾನಿಗೆ ಮನೆಗೆ ವಾಪಸ್ ಬರುವಂತೆ ಕೇಳಿದ ಅಪ್ಪ, ಮಗನ ರಿಯಾಕ್ಷನ್ ಹೇಗುತ್ತು ನೋಡಿ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ