ಗಾಳಿಯಲ್ಲಿ ಹಾರಿ ಬಂದ ಆಟೋ ಡ್ರೈವರ್, ಮಹಿಳೆಗೆ ಬಿತ್ತು 52 ಸ್ಟಿಚಸ್!

Published : Aug 01, 2020, 02:02 PM ISTUpdated : Aug 01, 2020, 02:17 PM IST
ಗಾಳಿಯಲ್ಲಿ ಹಾರಿ ಬಂದ ಆಟೋ ಡ್ರೈವರ್, ಮಹಿಳೆಗೆ ಬಿತ್ತು 52 ಸ್ಟಿಚಸ್!

ಸಾರಾಂಶ

ಗಾಳಿಯಲ್ಲಿ ಆಂಜನೇಯನಂತೆ ಹಾರಿ ಬಂದ ಆಟೋ ಡ್ರೈವರ್| ಏನಾಗುತ್ತಿದೆ ಎನ್ನುವಷ್ಟರಲ್ಲಿ ನೆಲಕ್ಕಪ್ಪಳಿಸಿದ ಮಹಿಳೆ| ಮಹಿಳೆಗೆ ಬಿತ್ತು 52 ಸ್ಟಿಚಸ್

ಬೆಂಗಳೂರು(ಆ.01): ಬೆಂಗಳೂರಿನಲ್ಲಿ ಮಹಿಳೆಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ವ್ಯಕ್ತಿಯೊಬ್ಬ ಹಾರುತ್ತಾ ಬಂದು ಆಕೆಗೆ ಅದೆಷ್ಟು ರಭಸವಾಗಿ ಗುದ್ದಿದ್ದಾನೆಂದರೆ, ಆಕೆ ಕೆಳಗೆ ಬಿದ್ದಿದ್ದಾಳೆ. ಇನ್ನು ಬಿದ್ದ ರಭಸಕ್ಕೆ ಆ ಮಹಿಳೆಗೆ ಅದೆಷ್ಟು ತೀವ್ರ ಗಾಯವಾಗಿದೆ ಎಂದರೆ ಆಕೆಗೆ 52 ಸ್ಟಿಚ್‌ಗಳನ್ನು ಹಾಕಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.

ತಮಿಳುನಾಡಲ್ಲಿ ಪೊಲೀಸ್ ಕ್ರೌರ್ಯಕ್ಕೆ ಮತ್ತೊಂದು ಬಲಿ: ಆಟೋ ಚಾಲಕನ ದೇಹದ ಭಾಗಗಳು ಪುಡಿ-ಪುಡಿ!

ಇಲ್ಲಿನ ಟಿ. ಸಿ ಪಾಳ್ಯ ರಸ್ತೆಯಲ್ಲಿ ತಂತಿಯೊಂದು ನೇತಾಡುತ್ತಿತ್ತು. ಆದರೆ ಟೈಟ್ ಆಗಿರದ ಆ ತಂತಿ ರಸ್ತೆಗೆ ತಾಗುತ್ತಿತ್ತು. ಹೀಗಿದ್ದ ತಂತಿ ಆಟೋ ಚಕ್ರಕ್ಕೆ ಸಿಲುಕಿದ್ದು, ಆಟೋ ಚಾಲಕ ಇದನ್ನು ತೆಗೆಯಲು ಯತ್ನಿಸಿದ್ದಾನೆ. ಹೀಗಿರುವಾಗಲೇ ರಸ್ತೆಯಲ್ಲಿ ಬರುತ್ತಿದ್ದ ಮತ್ತೊಂದು ವಾಹನ ಅದೇ ತಂತಿಗೆ ಸಿಲುಕಿಕೊಂಡಿದೆ. ಹೀಗಿರುವಾಗ ತಂತಿಗಳು ಬಿಗಿಯಾಗಿ ಎಳೆದುಕೊಳ್ಳುತ್ತವೆ. ಇವುಗಳ ರಭಸಕ್ಕೆ ಆಟೋ ಡ್ರೈವರ್ ಇದ್ದಕ್ಕಿದ್ದಂತೆ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ.

ಹೀಗೆ ಹಾರಿದ ಆಟೋ ಚಾಲಕ ಸುನಿತಾ ಹೆಸರಿನ ಪಾದಾಚಾರಿ ಮಹಿಳೆಯ ಮೇಲೆ ಬೀಳುತ್ತಾರೆ ಹಾಗೂ ಸ್ಟಿಚಸ್ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಾದ ಮಾಹಿತಿ ಅನ್ವಯ ಈ ಘಟನೆ ಜುಲೈ 16ರ ಬೆಳಗ್ಗೆ  11.34 ಗಂಟೆಗೆ ನಡೆದಿದೆ. 42 ವರ್ಷದ ಸುನಿತಾ ಟಿ. ಸಿ. ಪಾಳ್ಯದಿಂದ ಹೋಟೆಲ್ ಅನ್ನಪೂರ್ಣೇಶ್ವರಿ ಕಡೆ ತೆರಳುತ್ತಿದ್ದರು. 

8 ಗಂಟೆ ಆಟೋ ಪ್ರಯಾಣ; ಕೊರೋನಾ ಗುಣಮುಖಳನ್ನು ಮನೆಗೆ ತಲುಪಿಸಿದ ಚಾಲಕಿಗೆ ಸಿಎಂ ಸನ್ಮಾನ!

ಈ ಸಂಬಂಧ ಪ್ರತಿಕ್ರಿಯಿಸಿರುವ ಸುನಿತಾ ಯಾರೋ ನನ್ನನ್ನು ಕರೆದಂತೆ ಆಯ್ತು. ಹಿಂತಿರುಗಿ ನೋಡುವಾಗ ಆಂಜನೇಯನಂತೆ ಆಟೋ ಡ್ರೈವರ್ ಗಾಳಿಯಲ್ಲಿ ಹಾರುತ್ತಾ ನನ್ನೆಡೆ ಬರುತ್ತಿರುವುದನ್ನು ನೊಡಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅವರು ನನ್ನ ಮೇಎ ಬಿದ್ದು, ನಾನು ನೆಲಕ್ಕಪ್ಪಳಿಸಿದ್ದೆ. ಕುತ್ತಿಗೆಯಿಂದ ರಕ್ತ ಸುರಿಯಲಾರಂಭಿಸಿತ್ತು. ಅದೃಷ್ಟವಶಾತ್ ನನ್ನ ಗಂಡ ಅಲ್ಲೇ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದರುಉ. ಅವರು ಬಂದು ನನ್ನನ್ನು ಕರೆದೊಯ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು