ಮೂಲ ವಿನ್ಯಾಸಕ್ಕಿಂತ 2 ಪಟ್ಟು ದೊಡ್ಡದಾದ ರಾಮ ಮಂದಿರ ನಿರ್ಮಾಣ

Published : Aug 01, 2020, 08:51 AM IST
ಮೂಲ ವಿನ್ಯಾಸಕ್ಕಿಂತ 2 ಪಟ್ಟು ದೊಡ್ಡದಾದ ರಾಮ ಮಂದಿರ ನಿರ್ಮಾಣ

ಸಾರಾಂಶ

ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಮ ಮಂದಿರವು ಈಗಾಗಲೇ ವಿನ್ಯಾಸಗೊಳಿಸಿದ್ದಕ್ಕಿಂತಲೂ 2 ಪಟ್ಟು ಹೆಚ್ಚು ವಿಸ್ತೀರ್ಣ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹ್ಮದಾಬಾದ್‌(ಆ.01): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಕ್ಕೆ ನಿರ್ಧರಿಸಲಾಗಿರುವ ರಾಮ ಮಂದಿರವು ಈಗಾಗಲೇ ವಿನ್ಯಾಸಗೊಳಿಸಿದ್ದಕ್ಕಿಂತಲೂ 2 ಪಟ್ಟು ಹೆಚ್ಚು ವಿಸ್ತೀರ್ಣ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಎಂದು ದೇಗುಲ ನಿರ್ಮಾಣದ ವಾಸ್ತುಶಿಲ್ಪಿ ಚಂದ್ರಕಾಂತ್‌ ಸೋಂಪುರ ತಿಳಿಸಿದ್ದಾರೆ. 

ಈ ಬಗ್ಗೆ ಶುಕ್ರವಾರ ಮಾತನಾಡಿದ ವಾಸ್ತುಶಿಲ್ಪಿ ಚಂದ್ರಕಾಂತ್‌ ಅವರು, ಈ ಹಿಂದೆ ನಗರ ಶೈಲಿಯಲ್ಲಿ ನಿರ್ಮಾಣವಾಗಲಿದ್ದ ರಾಮಮಂದಿರಕ್ಕೆ ಕೇವಲ 2 ಗೋಪುರಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ, ಹೆಚ್ಚಿನ ಭಕ್ತರಿಗೆ ರಾಮನ ದರ್ಶನ ಕಲ್ಪಿಸುವ ಸಲುವಾಗಿ ಐದು ಗೋಪುರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ

ಅಯೋಧ್ಯೆಯಲ್ಲಿ ತ್ರೇತಾಯುಗ: ಪ್ರತಿ ಮನೆಯ ಗೋಡೆಗಳೂ ಹೇಳುತ್ತಿವೆ ಶ್ರೀರಾಮನ ಕತೆ!

ಅಲ್ಲದೆ, ಗರ್ಭಗುಡಿಯ ಮೇಲೆ ಸ್ತಂಭವೊಂದನ್ನು ಹಾಕಲಾಗುತ್ತದೆ. ಜೊತೆಗೆ, ದೇಗುಲದ ಎತ್ತರವನ್ನು ಸಹ ಇದೀಗ ಮತ್ತಷ್ಟು ಎತ್ತರಿಸಲಾಗಿದೆ. ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಯೋಧ್ಯೆ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಆ ನಂತರ ದೇಗುಲ ನಿರ್ಮಾಣದ ಕಾರ್ಯ ಆರಂಭವಾದ 3 ವರ್ಷಗಳಲ್ಲಿ ರಾಮಮಂದಿರ ದೇವಸ್ಥಾನ ತಲೆ ಎತ್ತಲಿದೆ ಎಂದು ಹೇಳಿದ್ದಾರೆ.

ರಾಮ ಮಂದಿರವ ನಾಗರ ಶೈಲಿಯಲ್ಲಿರಲಿದ್ದು, ಕೆಲಸ ಆರಂಭವಾದ ದಿನದಿಂದ ಮೂರು ವರ್ಷದೊಳಗಾಗಿ ಮಂದಿರ ಪೂರ್ಣಗೊಳ್ಳುವ ವಿಶ್ವಾಸ ವ್ತಕ್ತಪಡಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪತ್ನಿ ಜೊತೆ ಜಗಳ, 6 ವರ್ಷದ ಮಗನ ನದಿಗೆ ಎಸೆದ ಅಪ್ಪ.. ಅಯ್ಯೋ ಪಾಪಿ..
ವಿಶ್ವವನ್ನೇ ಬೆರಗುಗೊಳಿಸಿದ ಕೈಬರಹ! ಮುತ್ತು ಪೋಣಿಸಿಟ್ಟಂತೆ ಬರೆದಾಕೆಗೆ ವಿಶ್ವ ದಾಖಲೆಯ ಮತ್ತೊಂದು ಕಿರೀಟ