13 ಗಂಟೆಯಲ್ಲಿ ಲಂಕಾದಿಂದ ತಮಿಳುನಾಡಿನವರೆಗೆ ಈಜಿದ ಆಟಿಸಂನಿಂದ ಬಳಲುವ ಬಾಲಕಿ

By Suvarna News  |  First Published Mar 21, 2022, 4:00 PM IST
  • ಆಟಿಸಂನಿಂದ ಬಳಲುವ ಬಾಲಕಿಯ ಸಾಧನೆ
  • ಶ್ರೀಲಂಕಾದಿಂದ ತಮಿಳುನಾಡಿನವರೆಗೆ ಈಜಿದ ಜಿಯಾ ರೈ
  • 13 ಗಂಟೆಯಲ್ಲಿ ತಲೈಮನ್ನಾರ್‌ನಿಂದ  ಅರಿಚಲ್ಮುನೈ ತಲುಪಿದ ಬಾಲಕಿ
     

ರಾಮನಾಥಪುರಂ: ಆಟಿಸಂ ಅಥವಾ ಸ್ವಲೀನತೆ ಸಮಸ್ಯೆಯಿಂದ ಬಳಲುತ್ತಿರುವ ಹುಡುಗಿಯೊಬ್ಬಳು 13 ಗಂಟೆಗಳಲ್ಲಿ  ಶ್ರೀಲಂಕಾದಿಂದ ತಮಿಳುನಾಡಿಗೆ ಈಜುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ. ಭಾನುವಾರ ರಾಮೇಶ್ವರಂ ಮತ್ತು ತಲೈಮನ್ನಾರ್ ನಡುವಿನ ಪಾಕ್ ಜಲಸಂಧಿಯಲ್ಲಿ ಈಜುವ ಮೂಲಕ ಹುಡುಗಿ ಈ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಪ್ಯಾರಾ ಈಜುಪಟು ಜಿಯಾ ರೈ ಎಂಬುವವರೇ ಈ ಸಾಧನೆ ಮಾಡಿದ ಹುಡುಗಿ. ಶ್ರೀಲಂಕಾದ (Sri Lanka) ತಲೈಮನ್ನಾರ್‌ನಿಂದ (Thalaimannar) ಧನುಷ್ಕೋಡಿಯ (Dhanushkodi) ಅರಿಚಲ್ಮುನೈಗೆ (Arichalmunai) ಈಜಲು ಶುರು ಮಾಡಿದ ಜಿಯಾ 13 ಗಂಟೆಗಳಲ್ಲಿ ಬಕ್ಜಾಲಾ ಜಂಕ್ಷನ್ ದಾಟುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಜಿಯಾ ರೈ (Jiya Rai) ಮುಂಬೈನಲ್ಲಿರುವ ಭಾರತೀಯ ನೌಕಾ ಅಧಿಕಾರಿ (Indian naval officer) ಮದನ್ ರೈ (Madan Rai) ಅವರ ಪುತ್ರಿ. ಈಕೆಗೆ ಎರಡು ವರ್ಷದವಳಿದ್ದಾಗ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಮತ್ತು ಮಾತು ವಿಳಂಬದ ಸಮಸ್ಯೆಯಿಂದ ಬಳಲುತ್ತಿದ್ದಳು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಈಕೆಗೆ ಈಜು ತರಬೇತಿ ನೀಡಲಾಯಿತು. ಈಗ ತೆರೆದ ನೀರಿನಲ್ಲಿ ಗಂಟೆಗೆ 14 ಕಿಮೀ ವೇಗದಲ್ಲಿ ಈಜುವ ಅತ್ಯಂತ ವಿಶೇಷ ಮಹಿಳೆ ಎಂಬ ವಿಶ್ವ ದಾಖಲೆಯನ್ನು ಇವರು ಹೊಂದಿದ್ದಾರೆ.

Tamil Nadu | 13-year-old autistic girl, Jiya Rai swam from Sri Lanka's Thalaimannar to Arichalmunai's Dhanushkodi in 13 hours on Sunday

She was received by a large gathering at the Indian shore led by DGP C Sylendra Babu pic.twitter.com/G38wbPwMaB

— ANI (@ANI)

Tap to resize

Latest Videos

 

ಭಾನುವಾರ ರಾಮೇಶ್ವರಂ (Rameswaram) ಮತ್ತು ತಲೈಮನ್ನಾರ್ ನಡುವಿನ ಪಾಕ್ ಜಲಸಂಧಿಯಲ್ಲಿ ಈಜುವ ಮೂಲಕ ಜಿಯಾ ಈ ದಾಖಲೆ ನಿರ್ಮಿಸಿದ್ದಾರೆ. ಸಂಜೆ 5.25ಕ್ಕೆ ರಾಮೇಶ್ವರಂನ ಅರಿಚಲ್ಮುನೈ ಬೀಚ್‌ಗೆ ಆಗಮಿಸಿದ ಆಕೆಯನ್ನು ತಮಿಳುನಾಡು ಡಿಜಿಪಿ ಸಿ ಸೈಲೇಂದ್ರ ಬಾಬು (Sylendra Babu) ಸ್ವಾಗತಿಸಿದರು. ನಂತರ ಆಕೆಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ಮಾತನಾಡಿದ ಡಿಜಿಪಿ ಬಾಬು, 'ದೇಶದಲ್ಲಿ ಹಿಮಾಲಯದಲ್ಲಿ ಚಾರಣ ಮಾಡುವ ಅನೇಕ ಚಾರಣಿಗರಿದ್ದಾರೆ. ಆದರೆ ಈಜುಗಾರರ ಸಂಖ್ಯೆ ತೀರಾ ಕಡಿಮೆ. ಹಾಗಾಗಿ ಯುವಕರು ಈಜು ಸಾಧನೆ ಮಾಡಲು ಮುಂದಾಗಬೇಕು. ಈ ಸಮುದ್ರವು ಯಾವುದೇ ಸಮುದ್ರದಂತೆ ಅಲ್ಲ; ಇದು ಉಬ್ಬರವಿಳಿತದ ಸಮುದ್ರ ಎಂದರು.

ಕಾಣೆಯಾಗಿ 5 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ಆಟಿಸಂ ಮಗು: ಭಾವುಕ ಕ್ಷಣ ನೋಡಿ
 

ಇಲ್ಲಿನ ಸಮುದ್ರದಡಿಯಲ್ಲಿ ಪ್ರವಾಹದ ಉಪಸ್ಥಿತಿಯು ಸಮುದ್ರದ ಪರಿಚಯವಿರುವ ಜನರಿಗೂ ತಿಳಿದಿಲ್ಲ. 'ಇದು ಮಿಲ್ಕ್ ಶಾರ್ಕ್ ಎಂಬ ಅಪಾಯಕಾರಿ ಮೀನುಗಳಿಗೂ ನೆಲೆಯಾಗಿದೆ ಎಂದು ಅವರು ಹೇಳಿದರು. ಅಂತೆಯೇ, ಜೆಲ್ಲಿ ಮೀನುಗಳು ಸಾಕಷ್ಟು ಇವೆ. ಇದೆಲ್ಲವನ್ನೂ ಮೀರಿ, ಪಾಕ್ ಜಲಸಂಧಿಯಲ್ಲಿ ಈಜುವುದು ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಮತ್ತು ಹಗಲಿಗಿಂತ ರಾತ್ರಿಯಲ್ಲಿ ಈಜುವುದು ತುಂಬಾ ಸುಲಭ ಎಂದು ಅವರು ಹೇಳಿದರು. ಆಟಿಸಂ ಹೊಂದಿರುವ  ಯುವತಿಯೊಬ್ಬಳು ಸಮುದ್ರವನ್ನು ಈಜುವ ಈ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಡಿಜಿಪಿ ಹೇಳಿದರು.

ಜಿಯಾ ರೈ ಅವರ ತಂದೆ ಮದನ್ ರೈ ಮಾತನಾಡಿ, 'ಮೊದಲ ಮೂರು ಗಂಟೆಗಳ ಕಾಲ ಆಕೆಗೆ ಈಜಲು ಕಷ್ಟವಾಗಿತ್ತು. ನನ್ನ ಮಗಳು ಆಟಿಸಂನಿಂದ ಬಳಲುತ್ತಿದ್ದು ಮತ್ತು ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾಳೆ. ಅದಾಗ್ಯೂ ಆಕೆ 13 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಈಜಿದ್ದು ದೊಡ್ಡ ಸಾಧನೆಯೇ ಸರಿ ಎಂದು ಹೇಳಿದರು.

ಆಟಿಸಂ ಮಕ್ಕಳ ಉತ್ತಮ ಆರೋಗ್ಯಕ್ಕೆ ಸರಿಯಾದ ಕ್ರೀಡೆಗಳಿವು

13 ವರ್ಷದ ಜೀಯಾ ನೌಕಾಪಡೆಯ ಮಕ್ಕಳ ಶಾಲೆಯಲ್ಲಿ ಓದುತ್ತಿದ್ದಾಳೆ. ಈಕೆಗೆ ತೆರೆದ ನೀರಿನ ಈಜು ವಿಭಾಗದ ಅಡಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಗರಿಕರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ  ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ 2022 (Pradhan Mantri Rashtriya Bal Puraskar) ಅನ್ನು ನೀಡಲಾಗಿದೆ. ಕಳೆದ ವರ್ಷ, ಜಿಯಾ ಅವರು ಬಾಂದ್ರಾ-ವರ್ಲಿ ಸೀ ಲಿಂಕ್‌ನಿಂದ (Bandra-Worli Sea Link) ಗೇಟ್‌ವೇ ಆಫ್ ಇಂಡಿಯಾದವರೆಗೆ (Gateway of India) 36 ಕಿಮೀ ದೂರ ಸಮುದ್ರವನ್ನು 8 ಗಂಟೆ 40 ನಿಮಿಷಗಳಲ್ಲಿ ಈಜುವ ಮೂಲಕ ಇತಿಹಾಸ ನಿರ್ಮಿಸಿದ್ದರು.

click me!