ವಿವಿಧ ರಾಜ್ಯಗಳಲ್ಲಿ ಯಶಸ್ವಿ ಅಣಕು ಯುದ್ಧ ಡ್ರಿಲ್‌

Published : May 08, 2025, 04:11 AM IST
ವಿವಿಧ ರಾಜ್ಯಗಳಲ್ಲಿ ಯಶಸ್ವಿ ಅಣಕು ಯುದ್ಧ ಡ್ರಿಲ್‌

ಸಾರಾಂಶ

ವಾಯುದಾಳಿ ಆದರೆ ಏನು ಮಾಡಬೇಕು, ಬೆಂಕಿ ಹತ್ತಿಕೊಂಡಾಗ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಹೇಗೆ, ಅವಶೇಷಗಳ ಅಡಿ ಸಿಲುಕಿದವರನ್ನು, ಎತ್ತರದ ಪ್ರದೇಶಗಳಲ್ಲಿರುವವರನ್ನು ಹೇಗೆ ರಕ್ಷಿಸಬೇಕು, ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಕಲಿಸಲಾಯಿತು.   

ನವದೆಹಲಿ (ಮೇ.08): ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಕ್ಷಣಕ್ಷಣಕ್ಕೂ ಉದ್ವಿಗ್ನಗೊಳ್ಳುತ್ತಿರುವ ನಡುವೆ ಹಾಗೂ ಪಾಕ್‌ ವಿರುದ್ಧದ ‘ಆಪರೇಷನ್‌ ಸಿಂದೂರ’ ಕಾರ್ಯಾಚರಣೆ ಬೆನ್ನಲ್ಲೇ ಯುದ್ಧ ಸಂದರ್ಭದಲ್ಲಿ ಸುರಕ್ಷಿತರಾಗಿರಲು ಜನರಿಗೆ ತರಬೇತಿ ನೀಡುವ ಸಲುವಾಗಿ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಬುಧವಾರ ಸಂಜೆ ‘ಆಪರೇಷನ್‌ ಅಭ್ಯಾಸ್‌’ ಅಣಕು ಯುದ್ಧ ಕವಾಯತು ನಡೆಸಲಾಯಿತು. 

ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಬೆಂಗಳೂರು ಸೇರಿದಂತೆ ಕರ್ನಾಟಕದ 3 ಸ್ಥಳಗಳು, ದೆಹಲಿಯ 55 ಜಾಗಗಳು, ಪಶ್ಚಿಮ ಬಂಗಾಳದ 4 ಶಾಲೆಗಳು, ಜಾರ್ಖಂಡ್‌ನ 5 ಜಿಲ್ಲೆಗಳು, ಮಹಾರಾಷ್ಟ್ರದ ಮುಂಬೈ, ತಮಿಳುನಾಡಿನ 2 ಪ್ರಮುಖ ಸ್ಥಳಗಳು, ಆಂಧ್ರಪ್ರದೇಶದ 4 ಕಡೆ, ಅಸ್ಸಾಂನ 14 ಜಿಲ್ಲೆಗಳ 18 ಪ್ರದೇಶಗಳು, ಕೇರಳದ 14, ಒಡಿಶಾದ 12, ಮಣಿಪುರದ 4 ಜಿಲ್ಲೆ, ಹರ್ಯಾಣದ ಎಲ್ಲಾ ಜಿಲ್ಲೆಗಳು, ರಾಜಸ್ಥಾನ, ಅರುಣಾಚಲ ಪ್ರದೇಶ, ಮಿಜೋರಾಂ ರಾಜ್ಯಗಳನ ನಿಗದಿತ ಪ್ರದೇಶಗಳಲ್ಲಿ ಕವಾಯತು ನಡೆಸಲಾಯಿತು. ಈ ವೇಳೆ ಸೈರನ್‌ಗೆ ಹೇಗೆ ಪ್ರತಿಕ್ರಿಯಿಸಬೇಕು, 

ವಾಯುದಾಳಿ ಆದರೆ ಏನು ಮಾಡಬೇಕು, ಬೆಂಕಿ ಹತ್ತಿಕೊಂಡಾಗ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಹೇಗೆ, ಅವಶೇಷಗಳ ಅಡಿ ಸಿಲುಕಿದವರನ್ನು, ಎತ್ತರದ ಪ್ರದೇಶಗಳಲ್ಲಿರುವವರನ್ನು ಹೇಗೆ ರಕ್ಷಿಸಬೇಕು, ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಕಲಿಸಲಾಯಿತು. ಶಾಲೆಗಳಲ್ಲಿ ಮಕ್ಕಳಿಗೂ ಇದರ ತರಬೇತಿ ನೀಡಲಾಯಿತು. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಪೊಲೀಸರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಸಾರ್ವಜನಿಕರಿಗೆ ತರಬೇತಿ ನೀಡಿದರು.

ವಿವಿಧ ರಾಜ್ಯಗಳಲ್ಲಿ ಯಶಸ್ವಿ ಅಣಕು ಯುದ್ಧ ಡ್ರಿಲ್‌

ಅತ್ತ, ವಿವಿಧೆಡೆಗಳಲ್ಲಿ ಕೆಲ ಹೊತ್ತು ವಿದ್ಯತ್‌ ಕಡಿತ ಮಾಡಿ ಬ್ಲ್ಯಾಕ್‌ ಔಟ್‌ ಅಭ್ಯಾಸವನ್ನೂ ಮಾಡಿಸಲಾಯಿತು. ಈ ಮೊದಲು, ಯುದ್ಧ ನಡೆಯುವ ಸಾಧ್ಯತೆ ಇದ್ದುದರಿಂದ ಡ್ರಿಲ್‌ ಅವಶ್ಯಕ ಎನ್ನಲಾಗಿತ್ತು. ಆದರೆ ಇದೀಗ ಭಾರತ ಪಾಕಿಸ್ತಾನದ ಮೇಲೆ ‘ಆಪರೇಷನ್‌ ಸಿಂಧೂರ್‌’ ಹೆಸರಿನಲ್ಲಿ ಅನಿರೀಕ್ಷಿತ ದಾಳಿ ನಡೆಸಿರುವುದರಿಂದ ಪಾಕಿಸ್ತಾನವೂ ಕೆರಳಿ ಪ್ರತಿದಾಳಿ ನಡೆಸುವುದು ನಿಶ್ಚಿತ. ಹೀಗಿರುವಾಗ ಇಂತಹ ಕವಾಯತು ಅತ್ಯಗತ್ಯ ಎನಿಸಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ