ದುರ್ಗಾ ಪೂಜೆ ಮೇಲೆ ದಾಳಿ; ಹಿಂದೂಗಳ ರಕ್ಷಿಸಲು ಬಾಂಗ್ಲಾ ಸರ್ಕಾರ ಆಗ್ರಹಿಸಿದ ವಿಶ್ವ ಹಿಂದೂ ಪರಿಷತ್!

By Suvarna NewsFirst Published Oct 14, 2021, 8:16 PM IST
Highlights
  • ದುರ್ಗಾ ಪೂಜೆ ವೇಳೆ ದಾಳಿ, ಮೂರ್ತಿ ಧ್ವಂಸ ಪ್ರಕರಣ
  • ದಾಳಿಯಲ್ಲಿ ಮೂವರ ಸಾವು, ಪರಿಸ್ಥಿತಿ ಉದ್ವಿಘ್ನ
  • ಹಿಂದುಗಳ ರಕ್ಷಿಸಲು ಒತ್ತಾಯಿಸಿದ ವಿಶ್ವ ಹಿಂದೂ ಪರಿಷತ್

ನವದೆಹಲಿ(ಅ.14): ಹಿಂದೂಗಳಿಗೆ ದುರ್ಗಾ ಪೂಜೆ(Durga puja) ಸಂಭ್ರಮ. ನವರಾತ್ರಿಯ ವಿಶೇಷ ಹಬ್ಬದ ಈ ಸಂದರ್ಭದಲ್ಲಿ ಬಾಂಗ್ಲಾದೇಶದ(Bangladesh) ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ದಾಳಿ(Attack) ನಡೆಸಲಾಗಿದೆ. ಈ ಪ್ರಕರಣವನ್ನು ಭಾರತ ಕಟುವಾಗಿ ಕಂಡಿಸಿದೆ. ಬಾಂಗ್ಲಾ ಹಿಂದೂಗಳನ್ನು ರಕ್ಷಿಸುವ ಹೊಣೆ ಬಾಂಗ್ಲಾದೇಶ ಸರ್ಕಾರ ಮಾಡಬೇಕು ಎಂದು  ವಿಶ್ವ ಹಿಂದೂ ಪರಿಷತ್(Vishwa Hindu parishad) ಆಗ್ರಹಿಸಿದೆ.

ಬಾಂಗ್ಲಾ: 4 ಹಿಂದೂ ದೇಗುಲಗಳ ಮೇಲೆ ದುಷ್ಕರ್ಮಿಗಳ ದಾಳಿ!

ನವರಾತ್ರಿ ಹಬ್ಬದ(Navaratri Festival) ವೇಳೆ ಬಾಂಗ್ಲಾದೇಶದ ಕೊಮಿಲಾ ಪಟ್ಟದಲ್ಲಿನ ಹಿಂದೂ ದೇವಸ್ಥಾನದಲ್ಲಿ ದುರ್ಗಾ ಪೂಜೆ ನಡೆಯುತ್ತಿತ್ತು. ಈ ವೇಳೆ ಜಿಹಾದಿಗಳು ನೇರವಾಗಿ ದುರ್ಗಾ ಪೂಜೆ ಹಾಗೂ ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ದುರ್ಗೆ ಸೇರಿದಂತೆ ಹಿಂದೂ ಮೂರ್ತಿಗಳ ಧ್ವಂಸ ಮಾಡಲಾಗಿದೆ. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಹಿಂದೂಗಳು ಹಾಗೂ ದೇವಸ್ಥಾನದ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ ವಿಶ್ವ ಹಿಂದೂ ಪರಿಷತ್, ದಾಳಿಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಿಸಿದೆ. ಇದೇ ವೇಳೆ ಹಿಂದೂಗಳ ಸಂಪೂರ್ಣ ರಕ್ಷಣೆ ಬಾಂಗ್ಲಾದೇಶ ಸರ್ಕಾರ ಮಾಡಬೇಕು ಎಂದು ವಿಶ್ವ ಹಿಂದು ಪರಿಷತ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದ್ದಾರೆ.

ಬಾಂಗ್ಲಾದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿ, 10 ಮಂದಿ ಬಂಧನ

ದಾಳಿಕೋರರು ಹಿಂದೂ ಮೂರ್ತಿಗಳನ್ನು ಧ್ವಂಸಗೊಳಿಸಿ ಕೇಕೆ ಹಾಕಿದ್ದಾರೆ. ಖುರಾನ್ ಪ್ರತಿ ಹಿಡಿದು ಕುಣಿದಿದ್ದಾರೆ. ಹಿಂದೂ ಸಮುದಾಯದ ಹಾಗೂ ನಂಬಿಕೆ ಮೇಲೆ ನಡೆದ ದಾಳಿಯಿಂದ ಹಿಂದೂ ಸಮಾಜ ತೀವ್ರವಾಗಿ ನೊಂದಿದೆ. ಬಾಂಗ್ಲಾದೇಶದಲ್ಲಿ ಹಿಂದೂಳ ಮೇಲೆ ನಡೆಯುತ್ತಿರುವ ದಾಳಿ ಮುಂದುವರಿದಿದೆ. ಪದೇ ಪದೆ ಈ ರೀತಿ ದಾಳಿ ನಡೆಯುತ್ತಿದೆ ಎಂದು ಮಿಲಿಂದ್ ಹೇಳಿದ್ದಾರೆ.

ಭಾರತ ಮೂಲಕ ಆಫ್ಗಾನ್ ಪ್ರವೇಶಕ್ಕೆ ಬಾಂಗ್ಲಾ ಮೂಲಭೂತವಾದಿಗಳ ಸರ್ಕಸ್; ಗಡಿಯಲ್ಲಿ ಹೈ ಅಲರ್ಟ್!

ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗೆ  ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಮಿಲಿಂದ್ ಆಗ್ರಹಿಸಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದ ಮೂಲಕ ಬಾಂಗ್ಲಾದೇಶದಲ್ಲಿರುವ ಅಲ್ಪ ಸಂಖ್ಯಾತರನ್ನು ರಕ್ಷಿಸಲು ಭಾರತ ಒತ್ತಡ ತರಬೇಕು. ಈ ಕುರಿತು ವಿಶ್ವ ಸಂಸ್ಥೆ ಮೌನವಹಿಸಿರುವುದೇಕೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಶ್ನಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಮಿಲಿಂದ್ ಒತ್ತಿ ಹೇಳಿದ್ದಾರೆ.

ಬಾಂಗ್ಲಾದೇಶ ಸರ್ಕಾರ ಅಲ್ಪಸಂಖ್ಯಾತರಿಗೆ ಸರ್ಕಾರ ರಕ್ಷಣೆ ನೀಡಬೇಕು. ದಾಳಿಕೋರರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಇದರ ಜೊತೆಗೆ ದಾಳಿಗೆ ತುತ್ತಾದ ಕುಟುಂಬ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕು ಎಂದು ವಿಶ್ವಹಿಂದೂ ಪರಿಷತ್ ಆಗ್ರಹಿಸಿದೆ.

ದುರ್ಗಾ ಪೂಜೆ ಮೇಲೆ ಹಾಗೂ ಹಿಂದೂ ದೇವಸ್ಥಾನದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಹಿಂದೂಗಳು ಸಾವನ್ನಪ್ಪಿದ್ದಾರೆ. ಪೂಜೆಯಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ಹಿಂದೂಗಳು ಗಾಯಗೊಂಡಿದ್ದಾರೆ. ನವರಾತ್ರಿ 9 ದಿನದಲ್ಲಿ ಬಾಂಗ್ಲಾದೇಶದ 22 ಜಿಲ್ಲೆಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ದುರ್ಗಾ ಪೂಜೆ ವೇಳೆ ಹಿಂದೂ ಮೂರ್ತಿಗಳನ್ನು ಧ್ವಂಸಗೊಳಿಸಿ ಅಪವಿತ್ರಗೊಳಿಸಲು ಹಲವು ಯತ್ನಗಳು ನಡೆದಿದೆ. ಹಜಿಗಂಜ್, ಬಾಂಶ್‌ಖಲಿ, ಕಾಕ್ಸ್ ಬಜಾರ್, ಪೆಕುವಾದಲ್ಲಿರುವ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. ದಾಳಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. 

click me!