Breaking News ಅಹಮ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಐಸಿಸ್ ಉಗ್ರರು ಅರೆಸ್ಟ್!

By Chethan Kumar  |  First Published May 20, 2024, 3:13 PM IST

ಕಾಶ್ಮೀರದಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಇದೀಗ ದೇಶದೊಳಗೆ ಮಹಾಸ್ಫೋಟದ ಸಂಚಿಗೆ ಸಜ್ಜಾಗಿದ್ದ ಐಸಿಸ್ ಭಯೋತ್ಪಾದ ಸಂಘಟನೆಯ ನಾಲ್ವರು ಉಗ್ರರನ್ನು ಅಹಮ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ನಾಲ್ವರು ಶ್ರೀಲಂಕಾ ಪ್ರಜೆಗಳಾಗಿದ್ದಾರೆ.


ಅಹಮ್ಮದಾಬಾದ್(ಮೇ.20) ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಎಲ್ಲಾ ನಾಯಕರು ದೇಶದ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದೆಡೆ ಜನರು ಮತದಾನ ಮಾಡುತ್ತಿದ್ದಾರೆ. ಇದರ ನಡುವೆ ವಿದ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಐಸಿಸ್ ಭಯೋತ್ಪಾದಕ ಸಂಘಟನೆಯ ಸಂಚನ್ನು ಭಾರತ ವಿಫಲಗೊಳಿಸಿದೆ. ಅಹಮ್ಮದಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರು ಶ್ರೀಲಂಕಾ ಮೂಲದವರಾಗಿದ್ದು, ಭಾರಿ ಸಂಚು ನಡೆಸಿದ್ದರು.

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ(ISIS) ಉಗ್ರರ ಮಾಹಿತಿ ಕಲೆ ಹಾಕಿದ್ದ ಭಯೋತ್ಪಾದಕ ನಿಗ್ರಹ ದಳ(ATS) ಇಂದು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಬಂಧಿಸಲಾಗಿದೆ ಅನ್ನೋ ಮಾಹಿತಿಯನ್ನು ಎಟಿಎಸ್ ನೀಡಿದ್ದು, ಹೆಚ್ಚಿನ ಮಾಹಿತಿಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದೆ. ಈ ನಾಲ್ವರು ಭಾರತದಲ್ಲಿ ಯಾರನ್ನು ಭೇಟಿಯಾಗಿದ್ದಾರೆ. ಎಲ್ಲೆಲ್ಲಿ ವಿದ್ವಂಸಕ ಕೃತ್ಯಕ್ಕ ಪ್ಲಾನ್ ಮಾಡಲಾಗಿತ್ತು ಅನ್ನೋ ಮಾಹಿತಿಗಳು ಶೀಘ್ರದಲ್ಲೇ ಬಯಲಾಗಲಿದೆ.

Latest Videos

ಕಳೆದ ವರ್ಷ ಎಟಿಎಸ್ ರಾಜ್‌ಕೋಟ್‌ನಲ್ಲಿ ಅಲ್ ಖೈದಾ ಉಗ್ರ ಸಂಘಟನೆ  ಭಯೋತ್ಪಾದಕನನ್ನು ಬಂಧಿಸಿತ್ತು. ಭಾರತ, ಬಾಂಗ್ಗಾದೇಶ ಸೇರಿದಂತೆ ಕೆಲ ದೇಶದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ನೇಮಿಸುತ್ತಿದ್ದ ಈತ ಎಟಿಎಸ್ ಬಲೆಗೆ ಬಿದ್ದಿದ್ದ. ಯುವಕರನ್ನು ಪ್ರಚೋಧಿಸಿ, ಬ್ರೈನ್ ವಾಶ್ ಮಾಡಿ ಉಗ್ರ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದ. 
 

click me!