ಪತಿ ನೀಡಿದ ಗಿಫ್ಟ್‌ನಿಂದ 8 ಕೋಟಿ ಲಾಟರಿ ಹೊಡೆದ ಮಹಿಳೆ

Published : May 20, 2024, 12:49 PM ISTUpdated : May 20, 2024, 12:55 PM IST
ಪತಿ ನೀಡಿದ ಗಿಫ್ಟ್‌ನಿಂದ 8 ಕೋಟಿ ಲಾಟರಿ ಹೊಡೆದ ಮಹಿಳೆ

ಸಾರಾಂಶ

ಮದುವೆ ವಾರ್ಷಿಕೋತ್ಸವದ ದಿನದಂದು ಪತಿ ನೀಡಿದ ಹಣದಿಂದ ಲಾಟರಿ ಖರೀದಿಸಿದ ಮಹಿಳೆ 8 ಕೋಟಿ ರೂಪಾಯಿಗೂ ಅಧಿಕ ಹಣವನ್ನು ತಮ್ಮದಾಗಿಸಿಕೊಂಡದ್ದಾರೆ.

ನವದೆಹಲಿ: ಭಾರತದ ಮಹಿಳೆಗೆ ದುಬೈ ಲಾಟರಿಯಲ್ಲಿ ಕೋಟಿ ಕೋಟಿ  ಹಣ ಸಿಕ್ಕಿದೆ. ಪಂಜಾಬ್ ಮೂಲದ ಪಾಯಲ್ ತಮ್ಮ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪತಿಯಿಂದ ಗಿಫ್ಟ್ ರೂಪದಲ್ಲಿ ದುಬೈ ಲಾಟರಿ ಟಿಕೆಟ್ ಪಡೆದುಕೊಂಡಿದ್ದರು. ಇದೀಗ ಪತಿ ಹರ್ನೆಕ್ ಸಿಂಗ್ ನೀಡಿದ ಗಿಫ್ಟ್‌ನಿಂದ ಪಾಯಲ್ ಕೋಟ್ಯಧಿಪತಿಯಾಗಿದ್ದಾರೆ. ಲಾಟರಿಯಲಲ್ಲಿ 1 ಮಿಲಿಯನ್ ಡಾಲರ್ ಹಣವನ್ನು (ಅಂದಾಜು 8,32,68,450 ರೂಪಾಯಿ) ಪಾಯಲ್ ಗೆದ್ದಿದ್ದಾರೆ. ಪಾಯಲ್ ಡಿಡಿಎಫ್ ಗೆದ್ದ ಭಾರತದ 229ನೇ ಪ್ರಜೆಯಾಗಿದ್ದಾರೆ.

ಮೇ 3ರಂದು ಪಾಯಲ್ ಆನ್‌ಲೈನ್‌ನಲ್ಲಿ ದುಬೈ ಡ್ಯೂಟಿ ಫ್ರೀ ಮಿಲಿನಿಯಂನಲ್ಲಿ( Dubai Duty-Free Millennium draw) 3337 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದರು. ಸಂಖ್ಯೆ 3 ಅಧಿಕವಾಗಿರುವ ಕಾರಣ ಪಾಯಲ್ ಈ ಲಾಟರಿ ಟಿಕೆಟ್ ಆಯ್ಕೆ ಮಾಡಿಕೊಂಡಿದ್ದರು. ಈ ಲಾಟರಿ ಟಿಕೆಟ್ ಖರೀದಿಗೆ ಮದುವೆ ವಾರ್ಷಿಕೋತ್ಸವದಲ್ಲಿ ಪತಿ ನೀಡಿದ ಹಣ ಬಳಸಿದ್ದರು. ಇತ್ತೀಚೆಗಷ್ಟೇ ಪಾಯಲ್ ತಮ್ಮ 16ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. 

1,000 ದಿನಾರ್ ಗಿಫ್ಟ್ ನೀಡಿದ್ದ ಪತಿ

ಈ ಕುರಿತು ಖಲೀಜ್ ಟೈಮ್ಸ್ ಜೊತೆ ಮಾತನಾಡಿರುವ ಪಾಯಲ್, ಏಪ್ರಿಲ್ 20ರಂದು ನಮ್ಮ16ನೇ ವಿವಾಹ ವಾರ್ಷಿಕೋತ್ಸವ ಇತ್ತು. ಈ  ದಿನದಂದು ಪತಿ ಹರ್ನೆಕ್ ಸಿಂಗ್,  ನನಗೆ 1000 ದಿನಾರ್ ಹಣ ಗಿಫ್ಟ್ ಆಗಿ ನೀಡಿದ್ದರು. ನಾನು ಈ ಹಣದಿಂದ ಡಿಡಿಎಫ್ (Dubai Duty-Free tickets) ಲಾಟರಿ ಟಿಕೆಟ್ ಖರೀದಿಸಲು  ಪ್ಲಾನ್ ಮಾಡಿಕೊಂಡೆ. ಅಂತೆಯೇ ಹೆಚ್ಚು 3 ಅಂಕಿಯುಳ್ಳ  ಲಾಟರಿ ಟಿಕೆಟ್  ಖರೀದಿಸಿದೆ ಎಂದಿದ್ದಾರೆ.  

12 ವರ್ಷಗಳಿಂದ ಡಿಡಿಎಫ್ ಟಿಕೆಟ್ ಖರೀದಿ

ಕಳೆದ 12 ವರ್ಷಗಳಿಂದ  ನಾನು ದುಬೈ ಡ್ಯುಟಿ ಫ್ರಿ ಟಿಕೆಟ್ ಖರೀದಿಸುತ್ತಿದ್ದೇನೆ ಎಂದು ಪಾಯಲ್ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ತಮ್ಮ ಪ್ರಯಾಣದ ವೇಳೆ ಪಾಯಲ್ ಲಾಟರಿ ಟಿಕೆಟ್ ಖರೀದಿಸುತ್ತಾರೆ. ಪ್ರತಿ  ಬಾರಿಯೂ ಬೇರೆ ಬೇರೆ ಹೆಸರುಗಳಲ್ಲಿ ಟಿಕೆಟ್ ಖರೀದಿ ಮಾಡುತ್ತಿದ್ದರು. ಅಂದರೆ ಪತಿ, ಮಕ್ಕಳ ಹೆಸರಲ್ಲಿ ಡಿಡಿಎಫ್ ಟಿಕೆಟ್ ತೆಗೆದುಕೊಳ್ಳುತ್ತಿದ್ದರು. 

ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಪ್ರಯಾಣದ ಸಂದರ್ಭದಲ್ಲಿ ಏರ್‌ಪೋರ್ಟ್‌ನಲ್ಲಿ ಡಿಡಿಎಫ್ ಟಿಕೆಟ್ ಖರೀದಿಸುತ್ತಿದ್ದೆ. ಕಳೆದ ಬಾರಿ ಆನ್‌ಲೈನ್‌ನಲ್ಲಿ ಮೊದಲ ಬಾರಿ ಟಿಕೆಟ್ ಖರೀದಿಸಿದ್ದಾಗ ತುಂಬಾ ನಿರೀಕ್ಷೆಗಳಿತ್ತು. ಆದ್ರೆ ಈಗ ಪತಿ ನೀಡಿದ ಹಣದಿಂದ ಟಿಕೆಟ್ ಖರೀದಿಸಿ ನಾನು ಮಿಲಿಯೇನರ್ ಆಗಿದ್ದೇನೆ ಎಂದು ಪಾಯಲ್ ಸಂತೋಷ ಹಂಚಿಕೊಂಡಿದ್ದಾರೆ.

ಡ್ರಗ್ಸ್ ಸೇವಿಸಿ ಹೊಸ ಭಂಗಿಯಲ್ಲಿ ಸೆಕ್ಸ್, 26ರ ಹರೆಯದ ಡ್ಯಾನ್ಸರ್ ದಾರುಣ ಸಾವು!

ಗೆದ್ದ ಹಣ ಏನು ಮಾಡ್ತಾರೆ?

ಡಿಡಿಎಫ್‌ನಲ್ಲಿ ಗೆದ್ದಿರೋ ಹಣವನ್ನು ಹೇಗೆ ಖರ್ಚು ಮಾಡ್ತೀರಿ ಪ್ರ‍ಶ್ನೆಗೆ ಉತ್ತರಿಸಿದ ಪಾಯಲ್, ಇದರಲ್ಲಿ ಒಂದು ಮೊತ್ತವನ್ನು ಮೊದಲು ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ತೆಗೆದಿರಿಸುತ್ತೇವೆ. ಆನಂತರ ಆಸ್ಟ್ರೇಲಿಯಾದಲ್ಲಿರುವ ಸಹೋದರನಿಗೆ ಸಹಾಯ ಮಾಡುತ್ತೇನೆ. ಕೊನೆಯ ಭಾಗವನ್ನು ಪಂಜಾಬಿ ಸಮುದಾಯದಲ್ಲಿ ದತ್ತಿ ಕಾರ್ಯಗಳಿಗೆ ದಾನವಾಗಿ ನೀಡಲಾಗತ್ತದೆ ಎಂದು ತಮ್ಮ ಪ್ಲಾನ್ ಹಂಚಿಕೊಂಡರು.

ರೈಲ್ವೇ ಟಾಯ್ಲೆಟ್ ಸೀಟ್ ನೆಕ್ಕಿ, ಮೈತುಂಬಾ ಮಲ ಹಚ್ಚಿಕೊಂಡು  ಸೆಲ್ಫಿ ಕ್ಲಿಕ್ಕಿಸಿಕೊಂಡ ರಾಜಕಾರಣಿ

1999ರಿಂದ ಡಿಡಿಎಫ್ ಆರಂಭ

1999ರಲ್ಲಿ ದುಬೈ ಡ್ಯೂಟಿ-ಫ್ರೀ ಮಿಲೇನಿಯಂ ಮಿಲಿಯನೇರ್ ಆರಂಭವಾಗಿದೆ. 5000 ಸಾವಿರ ಜನರು ಒಂದ ಮಿಲಿಯನ್ ಡಾಲರ್ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ದುಬೈ ಡ್ಯೂಟಿ-ಫ್ರೀ ಮಿಲೇನಿಯಂ ಮಿಲಿಯನೇರ್ ಟಿಕೆಟ್‌ನ್ನು ಹೆಚ್ಚು ಭಾರತೀಯರು ಖರೀದಿಸುತ್ತಾರೆ ಎಂದು ಸಂಘಟಕರು ಹೇಳುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್