ಭಾರತೀಯ ವಾಯುಪಡೆಯಲ್ಲಿರುವ MiG-29K ಫೈಟರ್ ಜೆಟ್ 2031-32ರ ವೇಳೆಗೆ ನಿವೃತ್ತಿಯಾಗಲಿದೆ. MiG-29K ಬದಲು ಮತ್ತೆ ವಿದೇಶಗಳನ್ನು ಅವಲಂಬಿಸುವ ಪರಿಸ್ಥಿತಿ ಇದೀಗ ಭಾರತದ ಮುಂದಿಲ್ಲ. MiG-29K ದುಪ್ಪಟ್ಟು ಶಕ್ತಿಶಾಲಿ, ಸೂಪರ್‌ಸಾನಿಕ್ ಫೈಟರ್ ಜೆಟ್ ವಾಯುಪಡೆ ಸೇರಿಕೊಳ್ಳಲಿದೆ. ವಿಶೇಷ ಅಂದರೆ ಈ ಡೆಕ್ ಬೇಸ್ ಫೈಟರ್ ಜೆಟ್ ಭಾರತದಲ್ಲೇ ಉತ್ಪಾದನೆಯಾಗುತ್ತಿದೆ.
ನವದೆಹಲಿ(ಅ.26): ಅತ್ಯಂತ ಶಕ್ತಿ ಶಾಲಿ, ಹೈಸ್ಪೀಡ್ ಪರ್ಫಾಮೆನ್ಸ್, ಸೂಪರ್‌ಸಾನಿಕ್ ಏರ್‌ಕ್ರಾಫ್ಟ್ TEDBF ಯುದ್ಧವಿಮಾನ ಇದೇ ಮಾರ್ಚ್ ತಿಂಗಳಲ್ಲಿ ಸಿದ್ಧವಾಗಲಿದೆ. ಬಳಿಕ ಹಲವು ಪ್ರಯೋಗ, ಪರೀಕ್ಷಾರ್ಥಗಳ ಬಳಿಕ 2028ರ ವೇಳೆಗೆ ಈ ಏರ್‌ಕ್ರಾಫ್ಟ್ ವಾಯುಪಡೆ ಸೇರಿಕೊಳ್ಳಲಿದೆ. ಇದು ಭಾರತ ನಿರ್ಮಿಸುತ್ತಿರುವ ಟ್ವಿನ್ ಎಂಜಿನ್ ಡೆಕ್ ಬೇಸಡ್ ಫೈಟರ್ ಜೆಟ್ ವಿಮಾನವಾಗಿದೆ. ಸದ್ಯ ವಾಯುಪಡೆಯಲ್ಲಿರುವ MiG-29K ಯುದ್ಧವಿಮಾನದ ಬದಲು ನೂತನ ಹಾಗೂ ಅತ್ಯಾಧುನಿಕ ಮೇಡ್ ಇನ್ ಇಂಡಿಯಾ ಯುದ್ಧವಿಮಾನ ಸೇರಿಕೊಳ್ಳಲಿದೆ. ಸದ್ಯ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಜೇಶನ್(DRDO) ಅತ್ಯಾಧುನಿಕ TEDBF ಯುದ್ಧವಿಮಾನ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿದೆ. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಕಮಿಟಿ ಸಭೆ ಸೇರಿ ಈ ಅತ್ಯಾಧುನಿಕ ಯುದ್ಧವಿಮಾನ ಉತ್ಪಾದನೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಬಳಿಕ ಉತ್ಪಾದನೆ ಆರಂಭಗೊಳ್ಳಲಿದೆ.
ಟ್ವಿನ್ ಎಂಜಿನ್ ಡೆಕ್ ಬೇಸ್ ಫೈಟರ್ ಜೆಟ್ ಡಿಸೈನ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಇದೀಗ ಎಂಜಿನ್ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದು ಹೈ ಸ್ಪೀಡ್ ಪರ್ಫಾಮೆನ್ಸ್ ಸೂಪರ್ ಸಾನಿಕ್ ಏರ್‌ಕ್ರಾಫ್ಟ್ ಆಗಿದೆ. ಸದ್ಯ ಲಭ್ಯವಿರುವ ಅನುದಾನದಲ್ಲಿ ಇದರ ಡಿಸೈನ್, ಎಂಜಿನ್ ಅಭಿವೃದ್ಧಿಕಾರ್ಯಗಳು ನಡೆಯುತ್ತಿದೆ. 2023ರ ಮಾರ್ಚ್ ಅಂತ್ಯಕ್ಕೆ ಡಿಆರ್‌ಡಿಒ ಅಭಿವೃದ್ಧಿಪಡಿಸಿದ TEDBF ಏರ್‌ಕ್ರಾಫ್ಟ್ ಸಿದ್ಧಗೊಳ್ಳಲಿದೆ. ಇದರ ಪ್ರದರ್ಶನವೂ ನಡೆಯಲಿದೆ ಎಂದು DRDO ಪ್ರಾಜೆಕ್ಟ್ ನಿರ್ದೇಶಕ ಪಿ ತಂಗವೇಲ್ ಏಷ್ಯಾನೆಟ್ ನ್ಯೂಸ್‌ಗೆ ಹೇಳಿದ್ದಾರೆ.
INS Vikrant: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಕಾರ್ಯಾರಂಭ, ಏನಿದರ ವಿಶೇಷತೆ?
2023ರ ಮಾರ್ಚ್ ವೇಳೆ ಕ್ಯಾಬಿನೆಟ್ ಕಮಿಟಿ ಕ್ಲೀಯರೆನ್ಸ್ ಸಿಗುವ ಸಾಧ್ಯತೆ ಇದೆ. ಹೀಗಾದಲ್ಲಿ ಈ ಯುದ್ಧವಿಮಾನ ಉತ್ಪಾದನೆಗೆ 4 ರಿಂದ 5 ವರ್ಷಗಳ ಕಾಲಾವಕಾಶ ಬೇಕು. 2028ರ ವೇಳೆ ಭಾರತದಲ್ಲೇ ಉತ್ಪಾದನೆಯಾದ ಯುದ್ಧವಿಮಾನ ವಾಯುಪಡೆ ಸೇರಿಕೊಳ್ಳಲಿದೆ ಎಂದು ತಂಗವೇಲ್ ಹೇಳಿದ್ದಾರೆ. 2031-32ರಕ್ಕೆ ವಾಯುಪಡೆಯಲ್ಲಿರುವ MiG-29K ಯುದ್ಧವಿಮಾನ ಔಟ್ ಡೇಟ್ ಆಗಲಿದೆ. ಹೀಗಾಗಿ 2032ಕ್ಕೆ ವಿಗ್ ಯುದ್ಧವಿಮಾನಗಳು ನಿವೃತ್ತಿಯಾಗಲಿದೆ. ಈ ವೇಳೆ ಈ ಯುದ್ಧವಿಮಾನಗಳ ಬದಲು ಭಾರತವೇ ನಿರ್ಮಿಸಿರುವ ಯುದ್ಧವಿಮಾನಗಳು ವಾಯುಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.
ಕ್ಯಾಬಿನೆಟ್ ಕಮಿಟಿ ಕ್ಲೀಯರೆನ್ಸ್ ಸಿಕ್ಕ ಬಳಿಕ ಬೆಂಗಳೂರಿನ HAL ಹಾಗೂ DRDO ಜಂಟಿಯಾಗಿ ಯುದ್ಧವಿಮಾನ ಉತ್ಪಾದನೆ ಮಾಡಲಿದೆ. 2031-32ರ ವೇಳೆಗೆ MiG-29K ಯುದ್ಧವಿಮಾನದ ಬದಲು ಸಂಪೂರ್ಣವಾಗಿ TEDBF ಯುದ್ಧವಿಮಾನಗಳು ವಾಯಪಡೆಯನ್ನು ಆವರಿಸಿಕೊಳ್ಳಲಿದೆ.