ಅಟಲ್ ಸುರಂಗ ಮಾರ್ಗ ಉದ್ಘಾಟನೆ ಬಳಿಕ ಮೋದಿ ಮಾತು| ಅಟಲ್ ಸುರಂಗ ಪಡೆದ ನಿಮಗೆಲ್ಲರಿಗೂ ಶುಭಾಶಯ ಎಂದು ಸ್ಥಳಿಯರಿಗೆ ಹಾರೈಸಿದ ಮೋದಿ|| ಅಟಲ್ ಸುರಂಗ ಮಾರ್ಗದಿಂದ ಅಭಿವೃದ್ಧಿ ದ್ವಾರ ತೆರೆದಿದೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕಸನಿನ ಯೋಜನೆ ಅಟಲ್ ಟನಲ್ ಲೋಕಾರ್ಪಣೆಯಾಗಿದೆ. ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದ್ದಾರೆ. ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿದೆ. ಇನ್ನು ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುರಂಗ ಮಾರ್ಗದ ಮೂಲಕ ಪ್ರಯಾಣ ಕೈಗೊಂಡ ಪಿಎಂ ಮೋದಿ ಲಾಹೌಲ್ ಕಣಿವೆಯ ಸಿಸುಗೆ ಭೇಟಿ ನೀಡಿದ್ದಾರೆ. ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಅಟಲ್ ಟನಲ್, ಲೇಹ್ ಲಡಾಖ್ ಜನರಿಗೆ ಹೊಸ ಜೀವನ ಎಂದ ಮೋದಿ: ಶಿಕ್ಷಣ, ರಕ್ಷಣಾ ಇಲಾಖೆಗೆ 2 ಟಾಸ್ಕ್!
Watch LIVE: Inauguration of Atal Tunnel by PM https://t.co/6Hkt0KPEAC
— Prasar Bharati News Services (@PBNS_India)undefined
ಮೋದಿ ಭಾಷಣದ ಪ್ರಮುಖ ಅಂಶಗಳು
* ಇಂದು ದೀರ್ಘ ಸಮಯದ ಬಳಿಕ ನಿಮ್ಮ ನಡುವೆ ಬರುವುದು ಖುಷಿ ಕೊಟ್ಟಿದೆ. ಅಟಲ್ ಸುರಂಗ ಪಡೆದ ನಿಮಗೆಲ್ಲರಿಗೂ ಶುಭಾಶಯಗಳು.
* ದಶಕದ ಹಿಂದೆ ನಾನಿಲ್ಲಿ ಓರ್ವ ಕಾರ್ಯಕರ್ತನಾಗಿ ಬರುತ್ತಿದ್ದಾಗ ದೊಡ್ಡ ಹಾದಿಯಲ್ಲಿ ಬರುತ್ತಿದ್ದೆ. ಆಗ ಆರು ತಿಂಗಳು ರಸ್ತೆ ಮುಚ್ಚುತ್ತಿತ್ತು. ಇದರಿಂದ ಎಷ್ಟು ಕಷ್ಟ ಎದುರಾಗುತ್ತಿತ್ತು ಎಂದು ನಾನು ಬಲ್ಲೆ.
* ಅಂದಿನ ಎಲ್ಲಾ ಸಹಚರರು ಇಂದೂ ಇದ್ದಾರೆ. ಕೆಲವರು ಅಗಲಿದ್ದಾರೆ.ಇಲ್ಲಿನ ಬಗ್ಗೆ ತಿಳಿಯಲು ನೇಗೀಜಿ ನನಗೆ ಬಹಳ ಸಹಾಯ ಮಾಡಿದ್ದಾರೆ.
* ಅಟಲ್‌ಜೀಗೆ ಈ ಬೆಟ್ಟ ಗುಡ್ಡಗಳು ಪ್ರಿಯವಾಗಿದ್ದವು. ಇಲ್ಲಿನ ಸಮಸ್ಯೆ ನಿವಾರಿಸುವ ಆಸೆ ಇತ್ತು. ಹೀಗಾಗೇ ಅವರು ಶಿಲಾನ್ಯಾಸ ಮಾಡಿದ್ದರು. ಅಂದಿನ ಸಂಭ್ರಮ ಇಂದೂ ನನಗೆ ನೆನಪಿದೆ.
* ಅಟಲ್ ಟನಲ್ ನಿರ್ಮಾಣದಿಂದ ಇಲ್ಲಿನ ಜನರ ಪಾಲಿಗೆ ಹೊಸ ಸೂರ್ಯೋದಯವಾಗಿದೆ.
ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ : ಮಾನಾಲಿ-ಲೇಹ್ ಪ್ರಯಾಣದಲ್ಲಿ 5 ತಾಸು ಇಳಿಕೆ !
* ಅನೇಕ ಮಂದಿ ತಮ್ಮ ಜೀವನ ಅವಧಿಯಲ್ಲಿ ಇದನ್ನು ನೊಡುತ್ತೇವೆಂದು ಊಹಿಸಿರಲಿಕ್ಕಿಲ್ಲ. ಇಂದು ಅವರಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳು ಕಷ್ಟ ಅನುಭವಿಸುವುದಿಲ್ಲ ಎಂದು ಬಹಳ ಖುಷಿಯಾಗಬಹುದು.
* ಈ ಸುರಂಗದಿಂದ ಕೃಷಿಕರು, ರೈತರು, ವಿದ್ಯಾರ್ಥಿಗಳು, ಉದ್ಯೋಗಿಗಳೆಲ್ಲರಿಗೂ ಲಾಭವಾಗಬಹುದು. ಕೃಷಿಕರ ಬೆಳೆ ಹಾಳಾಗುವುದಿಲ್ಲ.
* ಇಲ್ಲಿನ ಔಷಧೀಯ ಗಿಡಗಳು, ಮಸಾಲೆ ಪದಾರ್ಥಗಳು ಸುಲಭವಾಗಿ ದೇಶ, ವಿದೇಶಕ್ಕೆ ತಲುಪಲಿದೆ.
* ಸುರಂಗದಿಂದಾಗಿ ನಿಮ್ಮ ಮಕ್ಕಳ ಶಿಕ್ಷಣಕ್ಕೂ ಲಾಭವಾಗಲಿದೆ. ನೀವು ನಿಮ್ಮ ವಾಸಿಸುವ ಸ್ಥಳ ಬದಲಾಯಿಸಬೇಕಲ್ಲ.
* ಈ ಸುರಂಗ ಇಲ್ಲಿನ ಯುವಕರಿಗೆ ಉದ್ಯೋಗ ಕಲ್ಪಿಸಲಿದೆ. ಗೆಸ್ಟ್‌ಹೌಸ್, ಕಲೆ ಮೊದಲಾದವುಗಳು ಲಾಭ ತಂದುಕೊಡಲಿದೆ.
ಅಟಲ್ ಕನಸಿನ ಯೋಜನೆ, ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ!
* ಈ ಸುರಂಗದರಿಂದ ದೇಶದೆಲ್ಲೆಡೆ ಅಭಿವೃದ್ಧಿಯಾಗಬೇಕು.
* ಕಳೆದ ಕೆಲ ವರ್ಷಗಳಿಂದ ಹೊಸ ಯೋಚನೆಯೊಂದಿಗೆ ಕೆಲಸವಾಗುತ್ತಿದೆ. ಸರ್ಕಾರದ ಸೇವೆ ಎಲ್ಲೆಡೆ ತಲುಪುತ್ತಿದೆ, ಬದಲಾವಣೆಯಾಗುತ್ತಿದೆ.
* ಮತಗಳಿಂದ ಯೋಜನೆ ಸಿಗುತ್ತಿಲ್ಲ, ಬದಲಾಗಿ ದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಯೋಜನೆಗಳು ಜಾರಿಯಾಗುತ್ತಿವೆ.
* ದೇಶದ ಹದಿನೈದು ಕೋಟಿಗೂ ಕುಟುಂಬಗಳು ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಲಾಗುತ್ತಿದೆ.
* ಆಯುಷ್ಮಾನ್ ಯೋಜನೆಯಡಿ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಯಾಗಿದೆ. ಇಲ್ಲಿನ ಜನರಿಗೂ ಅದು ಲಭ್ಯವಾಗಲಿದೆ.
* ಯುವಕರಿಗೂ ಲಾಭವಾಗಿದೆ. ಅಟಲ್ ಟನಲ್ ರೂಪದಲ್ಲಿ ವಿಕಾಸದ ಹೊಸ ದ್ವಾರದ ಮೂಲಕ ಇಲ್ಲಿನ ಜನರಿಗೆ ಶುಭ ಕೋರುತ್ತೇನೆ.