ಮಹಿಳೆಯರ ಮೇಲೆ ಕಣ್ಣು ಹಾಕುವವರ ವಿನಾಶ: ಯೋಗಿ|| ದುರುಳರಿಗೆ ನೀಡುವ ಶಿಕ್ಷೆ ಉದಾಹರಣೆ ಆಗಲಿದೆ| ಎಲ್ಲ ತಾಯಂದಿರು, ಸೋದರಿಯರ ರಕ್ಷಣೆಗೆ ಬದ್ಧ
ಲಖನೌ(ಅ.03): ಉತ್ತರ ಪ್ರದೇಶದ ಹಾಥ್ರಸ್ನಲ್ಲಿ ಸಂಭವಿಸಿದ ಅತ್ಯಾಚಾರ ಪ್ರಕರಣದ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಮಹಿಳೆಯರ ಮೇಲೆ ಕಣ್ಣು ಹಾಕಿದವರ ವಿನಾಶ ಮಾಡಲಾಗುವುದು’ ಎಂದು ಗುಡುಗಿದ್ದಾರೆ.
ಈ ಬಗ್ಗೆ ಶುಕ್ರವಾರ ಸಂಜೆ ಟ್ವೀಟ್ ಮಾಡಿರುವ ಅವರು, ‘ಉತ್ತರ ಪ್ರದೇಶದದಲ್ಲಿ ತಾಯಂದಿರು-ಸೋದರಿಯರ ಗೌರವ ಹಾಗೂ ಸ್ವಾಭಿಮಾನಕ್ಕೆ ಚ್ಯುತಿ ತರುವಂಥ ಯೋಚನೆ ಮಾಡುವವರ ಸಂಪೂರ್ಣ ವಿನಾಶ ಆಗುವಂತೆ ನೋಡಿಕೊಳ್ಳಲಾಗುವುದು. ಇವರಿಗೆ ಎಂಥ ಶಿಕ್ಷೆ ಆಗಲಿದೆ ಎಂದರೆ, ಭವಿಷ್ಯದಲ್ಲಿ ಈ ಶಿಕ್ಷೆ ಒಂದು ಉದಾಹರಣೆಯಾಗಿ ಉಳಿಯಲಿದೆ’ ಎಂದಿದ್ದಾರೆ.
‘ನಿಮ್ಮ ಉತ್ತರ ಪ್ರದೇಶ ಸರ್ಕಾರ ಎಲ್ಲ ತಾಯಂದಿರು ಹಾಗೂ ಸೋದರಿಯರ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಸಂಕಲ್ಪಬದ್ಧವಾಗಿದೆ. ಇದು ನಮ್ಮ ಸಂಕಲ್ಪ ಹಾಗೂ ವಚನ’ ಎಂದು ಟ್ವೀಟ್ ಮಾಡಿದ್ದಾರೆ.