
ನವದೆಹಲಿ(ಅ.27): ಚೀನಾ ಜೊತೆಗಿನ ಗಡಿ ವಿವಾದದ ಬೆನ್ನಲ್ಲೇ ಮಂಗಳವಾರದಂದು ಮಹತ್ವದ 2+2 ಸಚಿವ ಮಟ್ಟದ ಮಾತುಕತೆ ನಡೆದಿದೆ. ಈ ಸಭೆಗೂ ಮುನ್ನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೋಂಪಿಯೋ ಹಾಗೂ ರಕ್ಷಣಾ ಸಚಿವ ಮಾರ್ಕ್ ಎಸ್ಪರ್‌ರನ್ನು ಭೇಟಿ ಮಾಡಿದ್ದಾರೆ. ಸಚಿವರ ಜೊತೆಗಿನ ಈ ಮಾತುಕತೆ ಸಕಾರಾತ್ಮಕವಾಗಿತ್ತೆನ್ನಲಾಗಿದೆ.
ಕ್ಷೇತ್ರೀಯ ಹಾಗೂ ಜಾಗತಿಕ ಭದ್ರತೆ ಸಂಬಂಧ ಮಾತುಕತೆ
ಈ ಮಾತುಕತೆ ವೇಳೆ ಅಜಿತ್ ಧೋವಲ್ ಹಾಗೂ ಅಮೆರಿಕದ ವಿದೇಶಾಂಗ ಸಚಿವ ಮತ್ತು ರಕ್ಷಣಾ ಸಚಿವರ ನಡುವೆ ನಡೆದ ಈ ಮಾತುಕತೆಯಲ್ಲಿ ಅನೇಕ ಮಹತ್ವದ ಹಾಗೂ ಪ್ರಮುಖ ಸವಾಲುಗಳ ಬಗ್ಗೆ ಮಾತುಗಳು ನಡೆದಿವೆ. ಅಲ್ಲದೇ ರಕ್ಷಣಾ ಇಲಾಖೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆದಿದೆ.
2+2 ಸಭೆಯಲ್ಲಿ ರಕ್ಷಣಾ ಇಲಾಖೆಯ ಒಪ್ಪಂದ ಹಾಗೂ BECA ಸಂಬಂಧ ಹಸ್ತಾಕ್ಷರ
ಇನ್ನು ಅತ್ತ 2+2 ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜಯಶಂಕರ್, ಅಮೆರಿಕದ ವಿದೇಶಾಂಗ ಸಚಿವ ಮೈಕ್, ರಕ್ಷಣಾ ಸಚಿವ ಮಾರ್ಕ್ ಉಪಸ್ಥಿತಿಯಲ್ಲಿ ಉಭಯ ರಾಷ್ಟ್ರಗಳ ನಡುವೆ BECA ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದಿಂದ ಭಾರತದ ಸ್ಯಾಟಲೈಟ್ ಕ್ಷಮಗತೆ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ